ಮೋದಿ ವಿಗ್ರಹ ಹೋಯ್ತು, ಭಾರತ ಮಾತೆ ಮೂರ್ತಿ ಬರುತ್ತೆ
ಅಹ್ಮದಾಬಾದ್, ಫೆ. 12: ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ದೇವಾಲಯ ಕಟ್ಟಿದ್ದ ಅವರ ಕಟ್ಟಾ ಅಭಿಮಾನಿಗಳು ಈಗ ಅಲ್ಲಿ ಭಾರತ ಮಾತೆ ಮೂರ್ತಿಯನ್ನು ಪ್ರತಿಷ್ಠಾಪಿಸಲು ನಿರ್ಧರಿಸಿದ್ದಾರೆ. ತಮ್ಮ ದೇಗುಲ ನಿರ್ಮಿಸಿದ್ದಕ್ಕೆ ನರೇಂದ್ರ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಾರಣ ಅವರ ಅಭಿಮಾನಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.
ಗುಜರಾತ್‌ನ ಅಹ್ಮದಾಬಾದ್ ನಗರದಿಂದ ಸುಮಾರು 130 ಕಿ.ಮೀ. ದೂರದಲ್ಲಿ ನಿರ್ಮಿಸಿದ್ದ ಈ ದೇಗುಲದಲ್ಲಿ ನರೇಂದ್ರ ಮೋದಿ ಅವರ ವಿಗ್ರಹ ಸ್ಥಾಪಿಸಲಾಗಿತ್ತು. ಮೂರ್ತಿ ನಿರ್ಮಾಣಕ್ಕಾಗಿ ಸುಮಾರು 2 ಲಕ್ಷ ರು. ವೆಚ್ಚವಾಗಿದ್ದು, ಫೆ. 17ರಂದು ಉದ್ಘಾಟನೆ ಮಾಡಲು ತಯಾರಿ ನಡೆಸಲಾಗಿತ್ತು. ದಿನಕ್ಕೆರಡು ಬಾರಿ ಪೂಜೆ ಸಲ್ಲಿಸಲೂ ನಿರ್ಧರಿಸಲಾಗಿತ್ತು. [ದೇಗುಲದ ವಿರುದ್ಧ ಮೋದಿ ಗುಡುಗು]

ಆದರೆ, ಈ ವಿಷಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ತಕ್ಷಣ ಟ್ವೀಟ್ ಮಾಡಿದ ಮೋದಿ, "ನನಗೆ ಆಘಾತವಾಗಿದೆ" ಎಂದಿದ್ದರು. ಜನರು ತಮ್ಮಲ್ಲಿರುವ ಹಣವನ್ನು ಸ್ವಚ್ಛ ಭಾರತ ಅಭಿಯಾನಕ್ಕಾಗಿ ವಿನಿಯೋಗಿಸಿದರೆ ನನಗೆ ಹೆಚ್ಚು ಸಂತಸವಾಗುತ್ತದೆ ಎಂದು ತಿಳಿಸಿದ್ದರು.

ತಕ್ಷಣ ಕಾರ್ಯಪ್ರವೃತ್ತರಾದ ಅಭಿಮಾನಿಗಳು ಮೋದಿ ವಿಗ್ರಹದ ಮೇಲೆ ಬಟ್ಟೆ ಹಾಕಿ ಮುಚ್ಚಿದ್ದಾರೆ. ಈ ಜಾಗದಲ್ಲಿ ಭಾರತ ಮಾತೆಯ ಮೂರ್ತಿ ಪ್ರತಿಷ್ಠಾಪಿಸಲು ನಿರ್ಧರಿಸಿದ್ದಾರೆ. ಇದನ್ನು ಭಾರತ ಮಾತಾ ದೇವಾಲಯ ಎಂದು ಹೆಸರನ್ನೂ ಬದಲಾಯಿಸಲಾಗಿದೆ. ದೇಗುಲ ನಿರ್ಮಾಣಕ್ಕೆ ಈಗಾಗಲೇ ಏಳು ಲಕ್ಷ ರು. ವೆಚ್ಚವಾಗಿದೆ.
Have seen the newsabout a Temple being built in my name. I was appalled. This is shocking & against India's great traditions.
— Narendra Modi (@narendramodi) February 12, 2015 Building such Temples is not what our culture teaches us. Personally, it made me very sad. Would urge those doing it not to do it.
— Narendra Modi (@narendramodi) February 12, 2015 If you have time & resources, please devote the same towards fulfilling our dream of a Clean India.
— Narendra Modi (@narendramodi) February 12, 2015 











Click it and Unblock the Notifications