• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫೇಸ್‌ಬುಕ್‌ನಲ್ಲಿ ಕೈಬರಹದ ಪೋಸ್ಟ್‌ನ ಫೋಟೋ: ನಮಾಮಿ ಗಂಗೆಯಿಂದ 'ಗಿನ್ನೆಸ್‌' ರೆಕಾರ್ಡ್

|
Google Oneindia Kannada News

ನವದೆಹಲಿ, ನವೆಂಬರ್‌ 02: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ 'ನಮಾಮಿ ಗಂಗೆ' ಯು ಗಿನ್ನೆಸ್‌ ದಾಖಲೆಯನ್ನು ಬರೆದಿದೆ. ಗಂಗಾ ನದಿಯನ್ನು ಶುದ್ಧೀಕರಣ ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರೂಪಿಸಿದೆ.

ಇದೀಗ ಈ 'ನಮಾಮಿ ಗಂಗೆ' ಯು ತನ್ನ ಫೇಸ್‌ಬುಕ್‌ನಲ್ಲಿ ಕೈಬರಹದ ಪೋಸ್ಟ್‌ನ ಫೋಟೋವನ್ನು ಒಂದು ಗಂಟೆಯ ಒಳಗೆ ಪೋಸ್ಟ್‌ ಮಾಡುವ ಮೂಲಕ ಸೋಮವಾರ ಗಿನ್ನೆಸ್‌ ದಾಖಲೆಯನ್ನು ಬರೆದಿದೆ. ಮಂಗಳವಾರ 'ನಮಾಮಿ ಗಂಗೆ' ಯೋಜನೆಯ ಭಾಗವಾಗಿ ಗಂಗಾ ಉತ್ಸವ 2021 ನಡೆಯಲಿದೆ. ಈ ನಡುವೆ ಸೋಮವಾರ 'ನಮಾಮಿ ಗಂಗೆ' ಗಿನ್ನೆಸ್‌ ದಾಖಲೆ ಸೃಷ್ಟಿ ಮಾಡಿದೆ.

Unforgettable 2020: ಈ ವರ್ಷದ ವಿಶಿಷ್ಟ ಗಿನ್ನೆಸ್ ವಿಶ್ವದಾಖಲೆಗಳುUnforgettable 2020: ಈ ವರ್ಷದ ವಿಶಿಷ್ಟ ಗಿನ್ನೆಸ್ ವಿಶ್ವದಾಖಲೆಗಳು

ಇನ್ನು ಇದಕ್ಕೂ ಮುನ್ನ ಈ ಬಗ್ಗೆ ಮಾಹಿತಿ ನೀಡಿದ್ದ ಜಲಶಕ್ತಿ ಸಚಿವಾಲಯ, ಗಂಗಾ ನದಿ ಪ್ರೇಮಿಗಳು, ಸಂರಕ್ಷಣಾವಾದಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಸಾರ್ವಜನಿಕರು "ಮಾತೆ ಗಂಗೆ" ಎಂಬ ವಿಷಯದಲ್ಲಿ ಲೇಖನ ಅಥವಾ ಕವನದ ಕೈಬರಹದಲ್ಲಿ ಬರೆದು ಅದನ್ನು ಹಿಡಿದು ಫೋಟೋ ತೆಗೆದು ನಮಾಮಿ ಗಂಗೆ ಫೇಸ್‌ಬುಕ್‌ ಈವೆಂಟ್‌ ಪೇಜ್‌ನಲ್ಲಿ ಶೇರ್‌ ಮಾಡುವಂತೆ ಮನವಿ ಮಾಡಿತ್ತು.

ನಾವು ಜನರ ಭಾಗವಹಿಸುವಿಕೆ ಅಧಿಕಗೊಳಿಸುವ ನಿಟ್ಟಿನಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ವೆಂಬರ್ 1 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆ ಜನರು ಭಾಗಿಯಾಗುವುದನ್ನು ಎದುರು ನೋಡುತ್ತಿದ್ದೇವೆ. ನವೆಂಬರ್ 1 ರಂದು ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆಯಲು ನಾವು ಪ್ರಯತ್ನ ಮಾಡುತ್ತೇವೆ," ಎಂದು ನಮಾಮಿ ಗಂಗೆಯ ರಿಯಲ್ ಟೈಮ್ ಇನ್ಫರ್ಮೇಷನ್ ಸ್ಪೆಷಲಿಸ್ಟ್ ಪೀಯೂಷ್‌ ಗುಪ್ತಾ ತಿಳಿಸಿದ್ದರು.

ಗಿನ್ನಿಸ್ ದಾಖಲೆ ಬರೆದ ವಜ್ರದುಂಗುರ ಆನ್‍ಲೈನ್‍ನಲ್ಲಿ ಹರಾಜುಗಿನ್ನಿಸ್ ದಾಖಲೆ ಬರೆದ ವಜ್ರದುಂಗುರ ಆನ್‍ಲೈನ್‍ನಲ್ಲಿ ಹರಾಜು

"ನವೆಂಬರ್‍ 1, 2021 ರಂದು ಭಾರತದ ದೆಹಲಿಯಲ್ಲಿ ನಮಾಮಿ ಗಂಗೆ ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ ಕೈಬರಹದ ಟಿಪ್ಪಣಿಗಳ ಅಧಿಕ ಫೋಟೋವನ್ನು ಹಾಕಿಕೊಂಡಿದ್ದಾರೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತೀರ್ಪುಗಾರ ರಿಷಿ ನಾಥ್, ಜಲ ಶಕ್ತಿ ಸಚಿವ ಗಜೇಂದ್ರ ಶೇಖಾವತ್‌ರಿಗೆ ಸಮಾರಂಭದಲ್ಲಿ ಪ್ರಮಾಣಪತ್ರವನ್ನು ನೀಡಿದರು," ಎಂದು ಗಿನ್ನೆಸ್‌ ವಿಶ್ವ ದಾಖಲೆಯ ಪ್ರಮಾಣಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

ನಿಖರ ಸಂಖ್ಯೆಯ ಮಾಹಿತಿ ನೀಡಲಾಗುವುದು ಎಂದ ತೀರ್ಪುಗಾರರು

ಇನ್ನು ಈ ಬಗ್ಗೆ ಮಾತನಾಡಿರುವ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತೀರ್ಪುಗಾರ ರಿಷಿ ನಾಥ್, "ತಾತ್ಕಾಲಿಕ ಸಂಖ್ಯೆಯು ದಾಖಲೆಯನ್ನು ಸಾಧಿಸಲಾಗಿದೆ ಎಂದು ತೋರಿಸಿಕೊಟ್ಟಿದೆ. ಎಷ್ಟು ಫೋಟೋವನ್ನು ಅಪ್‌ಲೋಡ್‌ ಮಾಡಲಾಗಿದೆ ಎಂದು ನಾವು ನಿಖರ ಸಂಖ್ಯೆಯನ್ನು ಶೀಘ್ರ ಘೋಷಣೆ ಮಾಡುತ್ತೇವೆ," ಎಂದು ತಿಳಿಸಿದರು.

ಈ ಉತ್ಸವ ಹಾಗೂ ಈ ಗಿನ್ನೆಸ್‌ ರೆಕಾರ್ಡ್‌ ಮಾಡುವ ವಿಚಾರವು ಎನ್‌ಎಂ‌ಸಿಜಿ ಜನ ಸಂಪರ್ಕ, ಸಾರ್ವಜನಿಕ ಸಂಪರ್ಕದ ಚಟುವಟಿಕೆಯ ಭಾಗವಾಗಿ ನಡೆಸಿದೆ. "ನಮಾಮಿ ಗಂಗೆ" ಒಂದು ಸಮಗ್ರ ಸಂರಕ್ಷಣಾ ಮಿಷನ್ ಆಗಿದ್ದು, ಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಗ್ಗಿಸುವುದು, ರಾಷ್ಟ್ರೀಯ ಗಂಗಾ ನದಿಯ ಸಂರಕ್ಷಣೆ ಮತ್ತು ಪುನರುಜ್ಜೀವನದ ಉದ್ದೇಶವನ್ನು ಹೊಂದಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರವು ಜೂನ್ 2014 ರಲ್ಲಿ 20,000 ಕೋಟಿ ರೂಪಾಯಿಗಳ ಬಜೆಟ್ ವೆಚ್ಚದೊಂದಿಗೆ ರೂಪಿಸಿದೆ.

ಗಿನ್ನಿಸ್ ದಾಖಲೆ: ಒಂದೇ ಉಂಗುರದಲ್ಲಿ 7,801 ನೈಸರ್ಗಿಕ ವಜ್ರಗಳ ಬಳಕೆಗಿನ್ನಿಸ್ ದಾಖಲೆ: ಒಂದೇ ಉಂಗುರದಲ್ಲಿ 7,801 ನೈಸರ್ಗಿಕ ವಜ್ರಗಳ ಬಳಕೆ

ಇಂದು ನವೆಂಬರ್ 2 ರಂದು ಈ ಯೋಜನೆಯ ಭಾಗವಾಗಿ ಗಂಗಾ ಉತ್ಸವವು ನಡೆಯಲಿದೆ. ಮೂರು ದಿನಗಳು ಈ ಗಂಗಾ ಉತ್ಸವ 2021 ನಡೆಯಲಿದೆ. ಎನ್‌ಎಂಸಿಜಿಯು ಪ್ರತಿ ವರ್ಷ ನವೆಂಬರ್‌ 4 ರಂದು ಗಂಗಾ ನದಿಯನ್ನು "ರಾಷ್ಟ್ರೀಯ ನದಿ" ಎಂದು ಘೋಷಣೆ ಮಾಡಿದ ದಿನವನ್ನು ಆಚರಣೆ ಮಾಡುತ್ತದೆ. ಈ ಉತ್ಸವವು ಗಂಗಾ ನದಿಯ ಹಿನ್ನೆಲೆಯ ನಿರೂಪಣೆ, ಜಾನಪದ, ಗಣ್ಯ ವ್ಯಕ್ತಿಗಳೊಂದಿಗೆ ಸಂವಾದ, ರಸಪ್ರಶ್ನೆ, ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಪ್ರದರ್ಶಿಸುವುದು, ಹೆಸರಾಂತ ಕಲಾವಿದರಿಂದ ನೃತ್ಯ ಮತ್ತು ಸಂಗೀತ ಪ್ರದರ್ಶನ, ಫೋಟೋ ಗ್ಯಾಲರಿಗಳು ಹಾಗೂ ಪ್ರದರ್ಶನಗಳನ್ನು ಹೊಂದಿರಲಿದೆ.

(ಒನ್‌ಇಂಡಿಯಾ ಸುದ್ದಿ)

English summary
Namami Gange Creates Guinness World Record For Most Photos With Handwritten Notes on Facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X