ನಾಗಾಲ್ಯಾಂಡ್ : ಎನ್ ಡಿಪಿಪಿ-ಬಿಜೆಪಿ ಸಿಎಂ ಅಭ್ಯರ್ಥಿ ನೈಫಿಯು ರಿಯೋ
ಕೋಹಿಮಾ, ಮಾರ್ಚ್ 03: ನಾಗಾಲ್ಯಾಂಡ್ ನಲ್ಲಿ ಮತದಾನಕ್ಕೂ ಮುನ್ನವೇ ಜಯಶಾಲಿ ಎಂದು ಘೋಷಿತರಾದ ನೈಫಿಯು ರಿಯೋ ಅವರು ಎನ್ ಡಿಪಿಪಿ(ನ್ಯಾಶ್ನಲ್ ಡೆಮಾಕ್ರೆಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿ) ಮತ್ತು ಬಿಜೆಪಿ (ಭಾರತೀಯ ಜನತಾ ಪಾರ್ಟಿ) ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.
ನಾಗಾಲ್ಯಾಂಡ್ ನಲ್ಲಿ ಎನ್ ಡಿಪಿಪಿ ಮತ್ತು ಬಿಜೆಪಿ ಮೈತ್ರಿಕೂಟ ಸರ್ಕಾರದ ರಚಿಸುವುದು ಸಹ ಬಹುತೇಕ ಖಚಿತವಾದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ರಿಯೋ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮೈತ್ರಿಕೂಟ ಒಪ್ಪಿಕೊಳ್ಳಲಿದೆ.
ಈಗಾಗಲೇ 11 ವರ್ಷಗಳ ಕಾಲ ನಾಗಾಲ್ಯಾಂಡ್ ನಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅನುಭವವೂ ರಿಯೋ ಅವರಿಗಿದ್ದು, ಈ ಭಾಗದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಿದ ಮಹಾನ್ ನಾಯಕ ಎಂದೇ ಇವರನ್ನು ಇಲ್ಲಿನ ಜನರು ಗೌರವಿಸುತ್ತಾರೆ.

ನಾಗಾಲ್ಯಾಂಡ್ ನಿಂದ ಏಕೈಕ ಲೋಕಸಭಾ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ರಿಯೋ, ಎನ್ ಪಿಎಫ್ ಪಕ್ಷ(ನಾಗಾ ಪೀಪಲ್ಸ್ ಫ್ರಂಟ್) ಪ್ರತಿನಿಧಿಸುತ್ತಿದ್ದರು. ಆದರೆ ಕಳೆದ ಜನವರಿಯಲ್ಲಿ ಎನ್ ಪಿಎಫ್ ಪಕ್ಷ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಳ್ಳಲು ನಿರ್ಧರಿಸಿದ ಕಾರಣ ಪಕ್ಷ ತೊರೆದಿದ್ದರು. ಆಗಷ್ಟೇ ಸ್ಥಾಪನೆಯಾಗಿದ್ದ ಎನ್ ಡಿಪಿಪಿ ಪಕ್ಷ ಸೇರಿದ್ದರು. ಇದೀಗ ಈ ಪಕ್ಶಶ ಬಿಜೆಪಿಯೊಂದಿಗೆ ಮೈತ್ರಿ ಸಾಧಿಸಿದ್ದು, ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಒಮ್ಮತದಿಂದ ಒಪ್ಪಿಕೊಳ್ಳಲಿದೆ.
ಚುನಾವಣೆಗೂ ಮುನ್ನವೇ ಬಿಜೆಪಿಯಿಂದ 20 ಮತ್ತು ಎನ್ ಡಿಪಿಪಿ ಯಿಂದ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಸೂಚಿಸಲು ಒಪ್ಪಂದವಾಗಿತ್ತು.
ಉತ್ತರ ಅಂಗಾಮಿ 2 ಕ್ಷೇತ್ರದಲ್ಲಿ ರಿಯೋ ಅವರ ವಿರುದ್ಧ ಸ್ಪರ್ಧಿಸಿಸದ್ದ ಎನ್ ಪಿಎಫ್ ಚುಫ್ವೋ ಅಂಗಾಮಿ ಅವರು ಮತದಾನಕ್ಕೂ ಮುನ್ನ ನಾಮಪತ್ರ ಹಿಮಪಡೆದಿದ್ದರಿಂದ ಈ ಕ್ಷೇತ್ರದಿಂದ ರಿಯೋ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.












Click it and Unblock the Notifications