Get Updates
Get notified of breaking news, exclusive insights, and must-see stories!

Nagaland Assembly election result 2023: ಪ್ರಮುಖ ಅಭ್ಯರ್ಥಿಗಳು ಮತ್ತು ಕ್ಷೇತ್ರಗಳು- ವರದಿ, ವಿವರ

ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ 2023 ರಲ್ಲಿ ಬಿಜೆಪಿ-ಎನ್‌ಡಿಪಿಪಿ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗೆ ಭವಿಷ್ಯ ನುಡಿದಿವೆ. ಪ್ರಮುಖ ಅಭ್ಯರ್ಥಿಗಳು ಮತ್ತು ಅವರ ಕ್ಷೇತ್ರಗಳ ವಿವರ ಇಲ್ಲಿದೆ

ನವದೆಹಲಿ, ಮಾರ್ಚ್‌ 02: ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ 2023 ರಲ್ಲಿ ಬಿಜೆಪಿ-ಎನ್‌ಡಿಪಿಪಿ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗೆ ಭವಿಷ್ಯ ನುಡಿದಿವೆ. ನಾಗಾಲ್ಯಾಂಡ್ ವಿಧಾನಸಭೆಯ 60 ಸ್ಥಾನಗಳಲ್ಲಿ, ಬಿಜೆಪಿ-ಎನ್‌ಡಿಪಿಪಿ ಮೈತ್ರಿಕೂಟವು ಸುಮಾರು 50 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

ನೈಫಿಯು ರಿಯೊ (ಎನ್‌ಡಿಪಿಪಿ) - ಉತ್ತರ ಅಂಗಮಿ

ನೈಫಿಯು ರಿಯೊ (ಎನ್‌ಡಿಪಿಪಿ) - ಉತ್ತರ ಅಂಗಮಿ

ಮುಖ್ಯಮಂತ್ರಿ ನೈಫಿಯೊ ರಿಯೊ ಉತ್ತರ ಅಂಗಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ, ನಾಗಾಲ್ಯಾಂಡ್‌ನ ಶೇ 25 ಜನರು ನೆಫಿಯು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದು ಬಯಸುತ್ತಾರೆ. ರಿಯೊ ಅವರು ನಾಲ್ಕು ಅವಧಿಗೆ ಮುಖ್ಯಮಂತ್ರಿಯಾಗಿದ್ದಾರೆ. ಮತ್ತು ಈಗಾಗಲೇ ರಾಜ್ಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂದು ಹೆಗ್ಗಳಿಕೆ ಗಳಿಸಿದ್ದಾರೆ. ಅವರು ಇನ್ನೊಂದು ಅವಧಿಗೆ ಸಿಎಂ ಆಗಿ ಮುಂದುವರಿಯುವ ಸಾಧ್ಯತೆ ಇದೆ.

ಯಾಂತುಂಗೋ ಪ್ಯಾಟನ್ (ಬಿಜೆಪಿ) - ತ್ಯುಯಿ

ಯಾಂತುಂಗೋ ಪ್ಯಾಟನ್ (ಬಿಜೆಪಿ) - ತ್ಯುಯಿ

ನಾಗಾಲ್ಯಾಂಡ್ ಉಪಮುಖ್ಯಮಂತ್ರಿ ಯಾಂತುಂಗೋ ಪ್ಯಾಟನ್ ಅವರು ತ್ಯುಯಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಅವರು ಪ್ರಸ್ತುತ ನಾಗಾಲ್ಯಾಂಡ್‌ನ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಗೋಮಾಂಸದ ವಿಚಾರವಾಗಿ ಸುದ್ದಿಯಲ್ಲಿದ್ದರು. ಬಿಜೆಪಿ ಅಥವಾ ಯಾವುದೇ ಇತರ ರಾಷ್ಟ್ರೀಯ ಪಕ್ಷಗಳು ಗೋಮಾಂಸ ಆಹಾರದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದಾರೆ. ನಾಗಾಲ್ಯಾಂಡ್ ಅಥವಾ ಇಡೀ ಈಶಾನ್ಯ ಭಾರತದಲ್ಲಿ ಗೋಮಾಂಸ ತಿನ್ನುವುದು ಸಾಮಾನ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ತೆಮ್ಜೆನ್ ಇಮ್ನಾ ಅಲಾಂಗ್ (ಬಿಜೆಪಿ) - ಅಲೋಂಗ್ಟಾಕಿ

ತೆಮ್ಜೆನ್ ಇಮ್ನಾ ಅಲಾಂಗ್ (ಬಿಜೆಪಿ) - ಅಲೋಂಗ್ಟಾಕಿ

ನಾಗಾಲ್ಯಾಂಡ್ ಬಿಜೆಪಿ ಅಧ್ಯಕ್ಷ ತೆಮ್ಜೆನ್ ಇಮ್ಮಾ ಅಲಾಂಗ್ ಅವರು ಅಲೋಂಗ್ಟಾಕಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಅವರ ಹಾಸ್ಯ ಕಲಾವಿದರಾಗಿ ಖ್ಯಾತಿ ಪಡೆದಿದ್ದಾರೆ. ಅವರು ಉನ್ನತ ಶಿಕ್ಷಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವರು. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ತೆಮ್ಜೆನ್ ಇಮ್ನಾ ಅಲೋಂಗ್ ಅವರನ್ನು ಶ್ಲಾಘಿಸಿದ್ದಾರೆ. ಭಾರತದ ಈಶಾನ್ಯವನ್ನು ಅಲೋಂಗ್ ಪ್ರತಿನಿಧಿಸುತ್ತಾರೆ ಎಂದು ಪ್ರಧಾನಿ ಹೇಳಿದ್ದಾರೆ. 'ಅವರು ಡಿಜಿಟಲ್ ವೇದಿಕೆಯಲ್ಲಿ ನಾಗಾಲ್ಯಾಂಡ್ ಮತ್ತು ಇಡೀ ಈಶಾನ್ಯವನ್ನು ಪ್ರತಿನಿಧಿಸುತ್ತಾರೆ. ನಾನು ಯಾವಾಗಲೂ ಅವರ ಎಲ್ಲಾ ಪೋಸ್ಟ್‌ಗಳನ್ನು ನೋಡಲು ಪ್ರಯತ್ನಿಸುತ್ತೇನೆ' ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಟಿಆರ್‌ ಝೈಲಾಂಗ್ (ಎನ್‌ಡಿಪಿಪಿ) - ಪೆರೆನ್

ಟಿಆರ್‌ ಝೈಲಾಂಗ್ (ಎನ್‌ಡಿಪಿಪಿ) - ಪೆರೆನ್

ಟಿಆರ್ ಝೈಲಾಂಗ್ ನಾಗಾಲ್ಯಾಂಡ್ ರಾಜಕೀಯದ ಅನುಭವಿ ರಾಜಕಾರಣಿ. ಅವರು ಪೆರೆನ್‌ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಏಳು ಬಾರಿ ಶಾಸಕರಾಗಿರುವ ಟಿಆರ್ ಝೆಲಿಯಾಂಗ್ ಅವರು ಕಾಂಗ್ರೆಸ್‌ನಲ್ಲಿ ಇದ್ದರು. ಅವರು ನಾಗಾಲ್ಯಾಂಡ್ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದರು. ಇದು 2021 ರಲ್ಲಿ ಬಿಜೆಪಿ-ಎನ್‌ಡಿಪಿಪಿ ಮೈತ್ರಿಕೂಟಕ್ಕೆ ಸೇರಿದ ನಾಗಾ ಪೀಪಲ್ಸ್ ಫ್ರಂಟ್‌ನ ಭಾಗವಾಯಿತು.

ಕುಝೋಲುಜೊ ನಿಯೆನು (ಎನ್‌ಪಿಎಫ್‌) - ಫೆಕ್‌

ಕುಝೋಲುಜೊ ನಿಯೆನು (ಎನ್‌ಪಿಎಫ್‌) - ಫೆಕ್‌

ಕುಝೋಲುಜೊ ನಿಯೆನು ಅವರು ಟಿಆರ್ ಝೆಲಿಯಾಂಗ್ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರು 2003, 2008, 2013 ಮತ್ತು 2018 ರಲ್ಲಿ ಸತತ ನಾಲ್ಕು ಬಾರಿ ಫೆಕ್ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ಕಳೆದ ಮೇ ತಿಂಗಳಲ್ಲಿ ಅವರು ಶಾಸಕಾಂಗದಲ್ಲಿ ಎನ್‌ಪಿಎಫ್ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಜಿ ಕೈತೋ ಆಯೆ (ಎನ್‌ಡಿಪಿಪಿ) - ಸತಾಖಾ

ಜಿ ಕೈತೋ ಆಯೆ (ಎನ್‌ಡಿಪಿಪಿ) - ಸತಾಖಾ

ಜಿ ಕೈತೋ ಆಯೆ ಅವರು ಸತಾಖಾ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಿದ್ದಾರೆ. ಅವರು 1998 ರಿಂದ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಲೇ ಬಂದಿದ್ದಾರೆ. ಪ್ರಸ್ತುತ ಅವರು ಕೃಷಿ ಮತ್ತು ಸಹಕಾರ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2018 ರ ಚುನಾವಣೆಯ ಮೊದಲು, ಅವರು ಜೆಡಿ (ಯು) ಗೆ ಸೇರಿದ್ದರು. ನಂತರ ಆಡಳಿತಾರೂಢ ಎನ್‌ಡಿಪಿಪಿಗೆ ಸೇರ್ಪಡೆಗೊಂಡರು.

ಖ್ರೀಹು ಲೀಜಿಯೆಟ್ಸು ( ಎನ್‌ಪಿಎಫ್‌ ) - ಉತ್ತರ ಅಂಗಮಿ-I

ಖ್ರೀಹು ಲೀಜಿಯೆಟ್ಸು ( ಎನ್‌ಪಿಎಫ್‌ ) - ಉತ್ತರ ಅಂಗಮಿ-I

ಚಿಝಾಮಿಯಿಂದ ಎನ್‌ಡಿಪಿಪಿ ಅಭ್ಯರ್ಥಿಯಾಗಿ ಮಾಜಿ ರಾಜ್ಯಸಭಾ ಸದಸ್ಯ ಕೆ.ಜಿ. ಕೆನೆ ಕಣಕ್ಕಿಳಿದಿದ್ದಾರೆ.

2023 ರ ನಾಗಾಲ್ಯಾಂಡ್ ಅಸೆಂಬ್ಲಿ ಚುನಾವಣೆಯ ಕೋಟ್ಯಾಧಿಪತಿ ಅಭ್ಯರ್ಥಿಗಳಲ್ಲಿ ಕ್ರಿಹು ಲೀಜಿಟ್ಸು ಒಬ್ಬರು.

ಶೇರಿಂಗೈನ್ ಲಾಂಗ್‌ಕುಮರ್ (ಎನ್‌ಡಿಪಿಪಿ) - ಆಂಗ್ಲೆಂಡೆನ್

ಶೇರಿಂಗೈನ್ ಲಾಂಗ್‌ಕುಮರ್ (ಎನ್‌ಡಿಪಿಪಿ) - ಆಂಗ್ಲೆಂಡೆನ್

ಸೇಂಟ್ ಸ್ಟೀಫನ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿ, ಬಿಜೆಪಿಯ ಎನ್ ಜೇಕಬ್ ಝಿಮೋಮಿ ಅವರು ಪ್ರಸ್ತುತ ಸಾರ್ವಜನಿಕ ಆರೋಗ್ಯ ಇಲಾಖೆ ಸಚಿವರಾಗಿದ್ದಾರೆ. ಅವರು ಘಸ್ಪಾನಿ-I ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಶೇರಿಂಗೈನ್ ಲಾಂಗ್‌ಕುಮರ್ ಅವರು ಆಂಗ್ಲೆಡೆನ್ ವಿಧಾನಸಭಾ ಕ್ಷೇತ್ರದಿಂದ ಎನ್‌ಡಿಪಿಪಿ ಅಭ್ಯರ್ಥಿಯಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+