ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಶಾ ಪತ್ರದ ತುಂಬ ಸುಳ್ಳಿನ ಕಂತೆ: ಚಂದ್ರಬಾಬು ನಾಯ್ಡು

|
Google Oneindia Kannada News

ಹೈದರಾಬಾದ್, ಮಾರ್ಚ್ 24: "ಅಮಿತ್ ಶಾ ಪತ್ರದ ತುಂಬ ಸುಳ್ಳಿನ ಕಂತೆಯೇ ತುಂಬಿದೆ" ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷ(ಟಿಡಿಪಿ)ದ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಪ್ರತಿಕ್ರಿಯಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಎನ್ ಡಿಎ ಮೈತ್ರಿಕೂಟದಿಂದ ಟಿಡಿಪಿ ಹೊರಬಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಚಂದ್ರಬಾಬು ನಾಯ್ಡು ಅವರಿಗೆ ಪತ್ರವೊಂದನ್ನು ಬರೆದಿದ್ದ ಅಮಿತ್ ಶಾ, ಟಿಡಿಪಿ ನಡೆ, 'ದುರದೃಷ್ಟಕರ' ಮತ್ತು 'ಏಕಪಕ್ಷೀಯ' ಎಂದಿದ್ದರು.

"ಬಿಜೆಪಿ ಎಂದಿಗೂ ಅಭಿವೃದ್ಧಿ ರಾಜಕೀಯದಲ್ಲಿ ನಂಬಿಕೆ ಇಟ್ಟಿದೆ. ಸರ್ವರ ಅಭಿವೃದ್ಧಿಯೇ ನಮ್ಮ ಗುರಿ. ನಿಮ್ಮ ನಿರ್ಧಾರ ನನಗೆ ಭಯ ಮೂಡಿಸಿದೆ. ಈ ಮೂಲಕ ನೀವು ಅಭಿವೃದ್ಧಿ ರಾಜಕೀಯಕ್ಕಿಂತ ಅನುಕೂಲದ ರಾಜಕೀಯಕ್ಕೆ ಬೆಲೆ ಕೊಡುತ್ತಿದ್ದೀರಿ ಎನ್ನಿಸುತ್ತಿದೆ" ಎಂದು ಶಾ ಬರೆದಿದ್ದರು.

ಟಿಡಿಪಿ-ಎನ್ ಡಿಎ ಬ್ರೇಕ್ ಅಪ್: ಅಮಿತ್ ಶಾಗೆ ನುಂಗಲಾರದ ತುತ್ತು?! ಟಿಡಿಪಿ-ಎನ್ ಡಿಎ ಬ್ರೇಕ್ ಅಪ್: ಅಮಿತ್ ಶಾಗೆ ನುಂಗಲಾರದ ತುತ್ತು?!

ಈ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದ ನಾಯ್ಡು, "ಈಶಾನ್ಯ ರಾಜ್ಯಗಳಿಗೆ ನೀಡಿದಂತೆ ಆಂಧ್ರಪ್ರದೇಶಕ್ಕೂ ವಿಶೇಷ ಸ್ಥಾನಮಾನ ನೀಡಿದ್ದೇವೆ ಎಂದು ಶಾ ಪತ್ರದಲ್ಲಿ ಬರೆದಿದ್ದಾರೆ. ಆಂಧ್ರಪ್ರದೇಶಕ್ಕೆ ಅಷ್ಟೇಲ್ಲ ಆದ್ಯತೆ ನೀಡಿದ್ದರೆ, ಇಂದು ಆಂಧ್ರ ಪ್ರದೇಶಕ್ಕೆ ಸಾಕಷ್ಟು ಉದ್ಯಮಗಳು ಕಾಲಿಟ್ಟಿರುತ್ತಿದ್ದವು" ಎಂದಿದ್ದಾರೆ.

English summary
Amit Shah's letter is full of false information which shows their attitude. Even now Centre is providing special benefits to North Eastern states. Had Andhra Pradesh been given the same hand holding, many industries would have come to the state says Andhra Pradesh chief minister N Chandrababu Naidu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X