ಬಿಜೆಪಿ ಸೇರಿದ ಮಾಜಿ ಟಿಎಂಸಿ ನಾಯಕ ಮುಕುಲ್ ರಾಯ್
ನವದೆಹಲಿ, ನವೆಂಬರ್ 3: ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಟಿಎಂಸಿ ನಾಯಕ ಹಾಗೂ ಮಾಜಿ ರೈಲ್ವೇ ಸಚಿವ ಮುಕುಲ್ ರಾಯ್ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದರು.
ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳುತ್ತಲೇ ರಾಜ್ಯಸಭೆ ಸ್ಥಾನಕ್ಕೆ ಮುಕುಲ್ ರಾಯ್ ರಾಜೀನಾಮೆ ಬಿಸಾಕಿದ್ದರು. ಹೀಗಾಗಿ ಅವರು ಬಿಜೆಪಿ ಸೇರುತ್ತಾರೆ ಎಂಬ ನಿರೀಕ್ಷೆ ಇತ್ತು.

ಇಂದು ಸಂಜೆ ನವದೆಹಲಿಯಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮುಕುಲ್ ರಾಯ್ ರನ್ನು ಪಕ್ಷಕ್ಕೆ ಬರಮಾಡಿಕೊಂಡರು. "ಅವರು ಪಕ್ಷಕ್ಕೆ ಸೇರುತ್ತಿರುವುದು ಖುಷಿಯ ವಿಚಾರ. ನಾವು ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತೇವೆ. ಅವರ ಅನುಭವ ನಮಗೆ ಸಹಾಯಕವಾಗಲಿದೆ ಎಂಬ ನಂಬಿಕೆ ನಮಗಿದೆ," ಎಂದು ಪ್ರಸಾದ್ ಹೇಳಿದರು.

"ನಾನು ಇವತ್ತು ಬಿಜೆಪಿ ಸೇರಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಅಡಿಯಲ್ಲಿ ಕೆಲಸ ಮಾಡುವುದು ನನಗೆ ಸಿಕ್ಕಿದ ಗೌರವ ಎಂದುಕೊಳ್ಳುತ್ತೇನೆ," ಎಂಬುದಾಗಿ ಮುಕುಲ್ ರಾಯ್ ಹೇಳಿದರು.












Click it and Unblock the Notifications