ನೆಹರೂ -ಎಡ್ವಿನಾ ನಡುವೆ ಪ್ರೀತಿಗೆ ಪಮೇಲಾ ಸಾಕ್ಷಿ

Posted By:
Subscribe to Oneindia Kannada

ನವದೆಹಲಿ, ಜುಲೈ 31: ಭಾರತದ ಮೊದಲ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ ಹಾಗೂ ಕೊನೆಯ ಬ್ರಿಟಿಷ್ ವೈಸರಾಯ್‌ ಲಾರ್ಡ್ ಲೂಯಿಸ್ ಮೌಂಟ್ ಬೇಟನ್ ಅವರ ಪತ್ನಿ ಎಡ್ವಿನಾ ಮೌಂಟ್‌ ಬ್ಯಾಟನ್ ನಡುವಿನ ಸಂಬಂಧದ ಕುರಿತು ಎಡ್ವಿನಾ ಪುತ್ರಿ ಪಮೇಲಾ ಹಿಕ್ಸ್ ನೀ ಮೌಂಟ್ ಬ್ಯಾಟನ್ ಅವರು ಮಾತನಾಡಿದ್ದಾರೆ.

ಮಹಾತ್ಮ ಗಾಂಧಿಯನ್ನು ಅವರೇಕೆ ಕೊಂದರು?

ನೆಹರೂ ಹಾಗೂ ಎಡ್ವಿನಾ ನಡುವೆ ಪ್ರೀತಿ, ಗೌರವ, ಆಪ್ತತೆ ಇತ್ತು, ಆದರೆ, ಎಂದಿಗೂ ದೈಹಿಕ ಆಕರ್ಷಣೆ, ಸಂಪರ್ಕ ಹೊಂದಿರಲಿಲ್ಲ ಎಂದು ಹಿಕ್ಸ್ ಹೇಳಿದ್ದಾರೆ.

My Mother Found 'Companionship' In Pandit Nehru: Mountbatten's Daughter

'ಡಾಟರ್ ಆಫ್ ಎಂಪೈರ್: ಲೈಫ್ ಆಸ್ ಎ ಮೌಂಟ್ ಬೇಟನ್' ಎಂಬ ಪಮೇಲಾ ಬರೆದ ಪುಸ್ತಕದಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ.

ನನಗೆ 17 ವರ್ಷವಾಗಿದ್ದಾಗ ತಂದೆ, ತಾಯಿ ಜತೆ ಭಾರತಕ್ಕೆ ಬಂದೆ. ಈ ಸಂದರ್ಭದಲ್ಲಿ ನೆಹರೂ ಮತ್ತು ನನ್ನ ತಾಯಿ ಎಡ್ವಿನಾ ಪರಸ್ಪರ ಆಕರ್ಷಿತರಾಗಿರುವ ಬಗ್ಗೆ ತಿಳಿಯಿತು. ಸಹಜ ಕುತೂಹಲದಿಂದ ಇವರಿಬ್ಬರ ಸಂಬಂಧದ ಬಗ್ಗೆ ನಾನು ಹೆಚ್ಚೆಚ್ಚು ಮಾಹಿತಿ ಕಲೆ ಹಾಕ ತೊಡಗಿದೆ. ಇಬ್ಬರ ನಡುವೆ ದೈಹಿಕ ಸಂಪರ್ಕವೇನಾದರೂ ಇತ್ತೆ? ಎಂಬ ಪ್ರಶ್ನೆ ಕಾಡುತ್ತಿತ್ತು.

ಪಾಕ್ ಜನ್ಮ ರಹಸ್ಯ ಬಿಚ್ಚಿಟ್ಟ ಬಾಳಠಾಕ್ರೆ

ಆದರೆ, ನನಗೆ ಆ ಬಗ್ಗೆ ಯಾವುದೇ ಪುರಾವೆಗಳು ಸಿಗಲಿಲ್ಲ. ಇಬ್ಬರೂ ಪರಸ್ಪರ ಗೌರವ ಆದರದಿಂದ ನಡೆದುಕೊಳ್ಳುತ್ತಿದ್ದರು. ಅವರಿಬ್ಬರೂ ಎಂದಿಗೂ ಏಕಾಂತವಾಗಿರಲಿಲ್ಲ. ಹೀಗಾಗಿ ಅವರ ದೈಹಿಕ ಸಂಬಂಧದ ಸನ್ನಿವೇಶವೇ ಉದ್ಭವಿಸಿಲ್ಲ ಎಂದು ಪಮೇಲಾ ಹೇಳಿದ್ದಾರೆ.

ಇಂದಿರಾಗಿತ್ತೆ ನೆಹರೂ ಸೆಕ್ರೆಟರಿ ಜೊತೆ ಸೀಕ್ರೆಟ್ ಸಂಬಂಧ?

GST 2017: Countdown Starts For The New Tax Implementation | Oneindia Kannada

ಪಂಡಿತ್‍ ಜೀ ಅವರನ್ನು ನನ್ನ ತಾಯಿ ಬಹುವಾಗಿ ಮೆಚ್ಚಿಕೊಂಡಿದ್ದರು. ಅವರು ಪರಸ್ಪರ ಪ್ರೀತಿಸುತ್ತಿದ್ದರು ಹಾಗೂ ಇಬ್ಬರ ನಡುವೆ ಸಮಾನವಾದ ಗೌರವ ಇತ್ತು. ಹಲವು ವಿಷಯಗಳ ಬಗ್ಗೆ ಅವರು ಚರ್ಚೆಸುತ್ತಿದ್ದರು ಎಂದು ಅವರಿಬ್ಬರ ನಡುವಿನ ಪತ್ರಗಳು ಹೇಳಿವೆ. ಪಮೇಲಾ ಅವರ ಪುಸ್ತಕದಿಂದ ನೆಹರೂ ಮತ್ತು ಎಡ್ವಿನಾ ನಡುವಣ ಸಂಬಂಧದ ಸುದ್ದಿಗಳಿಗೆ ಮತ್ತೆ ರೆಕ್ಕೆ ಪುಕ್ಕ ಬಂದಂತಾಗಿದೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jawaharlal Nehru and Edwina Mountbatten loved and respected each other but their relationship was never physical as they were never alone, says the daughter of India's last vicereine.
Please Wait while comments are loading...