ಪತಿಯ ರಕ್ಷಣೆಗೆ ಧಾವಿಸಿದ ಸುನಿತಾ ಕೇಜ್ರಿವಾಲ್: ಟ್ವಿಟರ್ ನಲ್ಲಿ ಮಿಶ್ರಾಗೆ ತರಾಟೆ
ಕೇಜ್ರಿವಾಲ್ ಅವರು ತಮ್ಮ ಸಂಬಂಧಿಯಾದ ಸುರೇಂದ್ರ ಕುಮಾರ್ ಬನ್ಸಾಲ್ ಅವರಿಗೆ 50 ಕೋಟಿ ರು. ಮೌಲ್ಯದ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಸಹಾಯ ಮಾಡಿದ್ದಾರೆಂದು ಆರೋಪಿಸಿದ್ದ ಮಾಜಿ ಸಚಿವ ಕಪಿಲ್ ಶರ್ಮಾಗೆ ಉತ್ತರ.
ನವದೆಹಲಿ, ಮಾ 9: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ವಿರೋಧಿಗಳು ಮಾಡುತ್ತಿರುವ ಆರೋಪಗಳಿಂದ ಬೇಸತ್ತಿರುವ ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ಈಗ ಪತಿಯ ನೆರವಿಗೆ ಧಾವಿಸಿದ್ದಾರೆ.
ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಸರ್ಕಾರದಿಂದ ಹಾಗೂ ಪಕ್ಷದಿಂದ ಹೊರನೂಕಲ್ಪಟ್ಟಿರುವ ಕಪಿಲ್ ಮಿಶ್ರಾ ಅವರು ಮಾಡಿರುವ ಭೂಗರಣದ ಬಗ್ಗೆ ಸುನಿತಾ ಪ್ರತಿಕ್ರಿಯಿಸಿದ್ದಾರೆ.[ಕೇಜ್ರಿವಾಲ್ ವಿರುದ್ಧ ಮತ್ತೊಂದು ಹಗರಣದ ಆರೋಪ]

ಮಂತ್ರಿಮಂಡಲದಿಂದ ತಮ್ಮನ್ನು ಹೊರಹಾಕಿದ ಬೆನ್ನಲ್ಲೇ ಕೇಜ್ರಿವಾಲ್ ವಿರುದ್ಧ 2 ಕೋಟಿ ರು. ಲಂಚ ಪಡೆದ ಆರೋಪ ಮಾಡಿದ್ದ ಮಿಶ್ರಾ, ಸೋಮವಾರ ಮತ್ತೊಂದು ಆರೋಪ ಮಾಡಿದ್ದರು. ಕೇಜ್ರಿವಾಲ್ ಅವರು ತಮ್ಮ ಸಂಬಂಧಿಯಾದ ಸುರೇಂದ್ರ ಕುಮಾರ್ ಬನ್ಸಾಲ್ ಅವರಿಗೆ 50 ಕೋಟಿ ರು. ಮೌಲ್ಯದ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಸಹಾಯ ಮಾಡಿದ್ದಾರೆಂದು ಹೇಳಿದ್ದರು.[ಹಗರಣಗಳ ಆರೋಪ: ಕೊನೆಗೂ ಮೌನ ಮುರಿದ ಕೇಜ್ರಿವಾಲ್]
My brother in law is no more n this stupid man is speaking all written script without any mind.
— Sunita Kejriwal (@KejriwalSunita) May 8, 2017
ಈ ಬಗ್ಗೆ ಟ್ವಿಟರ್ ಮುಖೇನ ಸ್ಪಷ್ಟನೆ ನೀಡಿರುವ ಸುನಿತಾ, ''ನನ್ನ ಮೈದುನ ಸುರೇಂದ್ರ ಕುಮಾರ್ ಬನ್ಸಾಲ್ ಅವರು ಭಾನುವಾರಷ್ಟೇ ತೀರಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ಈ ಮೂರ್ಖ ಮನುಷ್ಯ (ಕಪಿಲ್ ಮಿಶ್ರಾ) ಒಂದು ಸಿದ್ಧಗೊಂಡ ಆರೋಪವನ್ನು ವಿವೇಚನೆಯಿಲ್ಲದೇ ಮಾಧ್ಯಮಗಳ ಮುಂದೆ ಬಡಬಡಾಯಿಸುತ್ತಿದ್ದಾನೆ'' ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.[ಕೇಜ್ರಿವಾಲ್ ಕೆಂಡ ಕಾರುತ್ತಿದ್ದ ಅಧಿಕಾರಿಯಿಂದಲೇ ಭ್ರಷ್ಟಾಚಾರದ ತನಿಖೆ]
ರಕ್ತದಲ್ಲಿ ಸಕ್ಕರೆ ಅಂಶ ಮಿತಿಮೀರಿದ್ದರಿಂದಾಗಿ ಕೇಜ್ರಿವಾಲ್ ಅವರ ಸಂಬಂಧಿ ಸುರೇಂದ್ರ ಕುಮಾರ್ ಬನ್ಸಾಲ್ ಅವರು ಗುರ್ಗಾವ್ ನ ಆಸ್ಪತ್ರೆಯೊಂದರಲ್ಲಿ ಭಾನುವಾರ (ಮೇ 7) ಅಸುನೀಗಿದ್ದಾರೆಂದು ಮೂಲಗಳು ತಿಳಿಸಿವೆ.[ಶಿಷ್ಯ ಕೇಜ್ರಿವಾಲ್ ಗೆ ಬಂದಿರುವ ಸ್ಥಿತಿ ಕಂಡು ವ್ಯಥೆಪಟ್ಟ ಅಣ್ಣಾ]
ಏತನ್ಮಧ್ಯೆ, ಕಪಿಲ್ ಮಿಶ್ರಾ ಅವರನ್ನು ಆಮ್ ಆದ್ಮಿ ಪಾರ್ಟಿಯಿಂದ ಅಮಾನತುಗೊಳಿಸಿದ ಪಕ್ಷವು ಆದೇಶ ಹೊರಡಿಸಿದೆ.












Click it and Unblock the Notifications