ಬ್ಯಾಂಕರ್ ಗಳನ್ನು ಮದುವೆಯಾಗದಂತೆ ಫತ್ವಾ! ಮುಸ್ಲಿಮರಿಂದಲೇ ವಿರೋಧ
ಲಕ್ನೋ, ಜನವರಿ 05: ಬ್ಯಾಂಕ್ ಉದ್ಯೋಗಿಗಳನ್ನು ಮದುವೆಯಾಗದಂತೆ ಫತ್ವಾ ಹೊರಡಿಸಿರುವ ದಾರೂಲ್ ಉಲೂಮ್ ಡಿಯೋಬಂದ್ ಸಂಘಟನೆ ನಿಲುವಿನ ವಿರುದ್ಧ ಮುಸ್ಲಿಂ ಸಮುದಾಯದಲ್ಲೇ ವಿರೋಧ ಹುಟ್ಟಿಕೊಂಡಿದೆ.
ಮುಸ್ಲಿಮರು ಬಹುಸಂಖ್ಯೆಯಲ್ಲಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇಂಥ ನಿಯಮ ಜಾರಿಗೆ ತರುವುದರಿಂದ ಮುಸ್ಲಿಂ ಸಮುದಾಯಕ್ಕೇ ನಷ್ಟವಾಗುತ್ತದೆ ಎಂದು ಅಖಿಲ ಭಾರತೀಯ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಅಭಿಪ್ರಾಯಪಟ್ಟಿದೆ.

ಬಡ್ಡಿಯಿಂದ ಹಣ ಸಂಪಾದಿಸಿ, ಜೀವನ ಮಾಡುವ ಕ್ರಮವನ್ನು ಇಸ್ಲಾಂ ವಿರೋಧಿಸುತ್ತದೆ. ಬ್ಯಾಂಕ್ ವ್ಯವಹಾರಗಳು ಮುಖ್ಯವಾಗಿ ಬಡ್ಡಿ ಆಧಾರಿತವಾದ್ದರಿಂದ ಇಂಥ ಕೆಲಸಗಳನ್ನು ಮುಸ್ಲಿಮರು ಮಾಡಬಾರದು ಎಂದು ಫತ್ವಾ ಹೊರಡಿಸಲಾಗಿತ್ತು. ಆದರೆ ಇಂಥ ನಿಯಮಗಳನ್ನು ಜಾರಿಗೆ ತರುವುದರಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತದೆ, ಇದರಿಂದ ಮುಸ್ಲಿಮರಿಗೇ ತೊಂದರೆ. ಆದ್ದರಿಂದ ಈ ನಿಯಮವನ್ನು ಜಾರಿಗೆ ತರುವ ಅಗತ್ಯವಿಲ್ಲ, ಇದಕ್ಕೆ ನಮ್ಮೆಲ್ಲರ ವಿರೋಧವಿದೆ ಎಂದು ಲಾ ಬೋರ್ಡ್ ಹೇಳಿದೆ.












Click it and Unblock the Notifications