ಯತ್ನಾಳ್ರಲ್ಲಿ ಯಾವ ಸಾಮರ್ಥ್ಯ ಇದೆಯಂತ ರಾಜ್ಯಾಧ್ಯಕ್ಷ ಮಾಡುತ್ತಾರೆ? : ಸಿಡಿದೆದ್ದ ಬಿಜೆಪಿ ನಾಯಕ
ದೆಹಲಿ, ಡಿಸೆಂಬರ್ 12: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬ ವೈ ವಿಜಯೇಂದ್ರ ಅವರನ್ನ ನೇಮಕ ಮಾಡಿದ ಬಳಿಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿಯನ್ನ ಮುಂದುರೆಸಿದ್ದು, ಇದೀಗ ಯತ್ನಾಳ್ ವಿರುದ್ಧ ಮಾಜಿ ಸಚಿವ ಮುರುಗೇಶ್ ನಿರಾಣಿ ಕುಟುಕಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಯತ್ನಾಳ್ ಮಾಡಿರುವ ಸಾಧನೆಯಾದರೂ ಏನು ಅಂತ ಅವರನ್ನು ರಾಜ್ಯಾಧ್ಯಕ್ಷ ಮಾಡುತ್ತಾರೆ? ಬಿವೈ ವಿಜಯೇಂದ್ರ ತಮ್ಮ ಸಾಮರ್ಥ್ಯವನ್ನು ಬೇರೆ ಬೇರೆ ಹಂತಗಳಲ್ಲಿ ಸಾಬೀತು ಮಾಡಿದ್ದಾರೆ. ಅವರ ಕೆಲಸ, ಸಂಘಟನಾ ಚಾತುರ್ಯ ಮತ್ತು ಸಮೀಕ್ಷೆಗಳನ್ನು ಆಧರಿಸಿ ಅವರನ್ನು ವರಿಷ್ಠರು ಆಯ್ಕೆ ಮಾಡಿದ್ದಾರೆ ಎಂದು ಮುರುಗೇಶ್ ನಿರಾಣಿ ಹೇಳಿದ್ದಾರೆ.

ಮೊದಲು ತನ್ನ ಸಾಮರ್ಥ್ಯ ಏನು ಅನ್ನೋದನ್ನು ಮೊದಲು ತೋರಿಸಲಿ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಯತ್ನಾಳ್ ಸಲುವಾಗಿಯೇ ಒಂದು ಹೆಲಿಕಾಪ್ಟರ್ ಗೊತ್ತು ಮಾಡಿ 40 ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಕಳಿಸಿತ್ತು. ಒಂದು ಸ್ಥಾನದಲ್ಲೂ ಬಿಜೆಪಿ ಅಭ್ಯರ್ಥಿ ಗೆಲ್ಲಲಿಲ್ಲ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ಎಲ್ಲೆಲ್ಲಿ ಭಾಷಣ ಮಾಡಿದ್ದಾರೆ ಅಲ್ಲಿ ಯಾರು ಗೆದ್ದಿಲ್ಲ. ದೀಪ ಆರುವಾಗ ಜೋರಾಗಿ ಉರಿಯುತ್ತೆ, ಈಗ ಜೋರಾಗಿ ಉರಿಯುತ್ತಿದೆ ಅಷ್ಟೇ ಎಂದು ಕಿಡಿಕಾರಿದ್ದಾರೆ.
ಇನ್ನೂ ಬಿಜಾಪುರದಲ್ಲಿ ಎಷ್ಟು ಜನರನ್ನು ಯತ್ನಾಳ್ ಗೆಲ್ಲಿಸಿದ್ದಾರೆ? ಶಕ್ತಿ ಇದ್ದರೇ ಬಿಜಾಪುರದಲ್ಲಿ 2-3 ಸ್ಥಾನ ಗೆಲ್ಲಿಸಬೇಕಿತ್ತು. ಇವರ ನಾಯಕತ್ವ ಎಂತದ್ದು ಎನ್ನುವುದು ಗೊತ್ತಿದೆ. ಪಾಪದ ಕೊಡ ತುಂಬಿದ ಮೇಲೆ ಎಲ್ಲವೂ ಮುಗಿಯಿತು. ಇವರದ್ದು ಪಾಪದ ಕೊಡ ತುಂಬಲು ಬಂದಿದೆ. ಇನ್ನು ಬಹಳ ದಿನ ನಡೆಯುವುದಿಲ್ಲ, ರಾವಣ ನನ್ನನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದಿದ್ದ. ಆದರೆ ಆತನ ಕಥೆ ಏನಾಯಿತು? ನಾನೇ ಎಲ್ಲ ಅಂದವರಿಗೆ ಏನಾಗಿದೆ? ಇವರ ಕಥೆಯೂ ಹಾಗೇ ಆಗುತ್ತದೆ ಎಂದು ಹೇಳಿದರು.
ವಿಜಯೇಂದ್ರ ಅವರನ್ನು ಹೈಕಮಾಂಡ್ ರಾಜ್ಯಧ್ಯಕ್ಷರನ್ನಾಗಿ ಮಾಡಿದೆಯೇ ಹೊರತು ಯಡಿಯೂರಪ್ಪ ಅಲ್ಲ. ವಿಜಯೇಂದ್ರ ಪ್ರತಿಭೆ ನೋಡಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರಿಗೆ ನೀಡಿದ ಕೆಲಸವನ್ನು ಯಶಸ್ವಿಯಾಗಿ, ಮಾಡಿದ್ದಾರೆ. ಈ ಎಲ್ಲಾ ಕೆಲಸ ಗುರುತಿಸಿ ಜವಾಬ್ದಾರಿ ನೀಡಿದ್ದಾರೆ, ಯುವ ಮೋರ್ಚ, ಉಪಧ್ಯಾಕ್ಷ ಹಾಗೂ ಉಪ ಚುನಾವಣೆಯಲ್ಲಿ ವಿಜಯೇಂದ್ರ ಅವರಿಗೆ ಕೊಟ್ಟ ಜವಾಗ್ದಾರಿಯನ್ನ ವಿಜಯೇಂದ್ರ ಅವರು ನಿಭಾಯಿಸಿದ್ದಾರೆ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಪರವಾಗಿ ಬ್ಯಾಟಿಂಗ್ ಬೀಸಿದ್ದಾರೆ.

ನಾಲ್ಕು ಜನರು ಚಪ್ಪಾಳೆ ಹೊಡೆದರೆ ನಾಯಕ ಅಲ್ಲ. ಲಕ್ಷಾಂತರ ಜನರನ್ನು ಸೇರಿಸಿ ಎಂದಾದರೂ ಕಾರ್ಯಕ್ರಮ ಮಾಡಿದ್ದಾರಾ?. ಸಮಾಜಕ್ಕೆ ಅವರ ಕೊಡುಗೆ ಏನು? ಖರ್ಚು ಮಾಡದೇ ಬೇರೆಯವರು ಆಯೋಜನೆ ಮಾಡಿದ ಕಾರ್ಯಕ್ರದಲ್ಲಿ ಬಂದು ಮಾತನಾಡುತ್ತಾರೆ . ಇನ್ನೂ ಆರ್ ಅಶೋಕ್ ಎಂಟು ಬಾರಿ ಶಾಸಕರು, ಸಚಿವರು ಡಿಸಿಎಂ ಆಗಿದ್ದರು. ಸಂಘಟನೆ ಎಲ್ಲವೂ ನೋಡಿ ಹುದ್ದೆ ನೀಡಿದ್ದಾರೆ. ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಹಾಗೂ ಅಶೋಕ್ ಅವರಿಗೆ ವಿಪಕ್ಷ ಸ್ಥಾನವನ್ನ ನೀಡಿರುವುದಕ್ಕೆ ಯತ್ನಾಳ್‌ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ನಿರಾಣಿ ಕಿಡಿಕಾರಿದರು.












Click it and Unblock the Notifications