Get Updates
Get notified of breaking news, exclusive insights, and must-see stories!

ಲಿಖಿಂಪುರಖೇರಿಯಲ್ಲಿ ದಲಿತ ಬಾಲಕಿಯರ ಹತ್ಯೆ ಪ್ರಕರಣ: 6 ಮಂದಿ ಬಂಧನ

ಲಕ್ನೋ, ಸೆಪ್ಟೆಂಬರ್‌ 15: 15 ಮತ್ತು 17 ವರ್ಷ ವಯಸ್ಸಿನ ಇಬ್ಬರು ದಲಿತ ಸಹೋದರಿಯರನ್ನು ಐವರು ಉತ್ತರ ಪ್ರದೇಶದ ಲಖಿಂಪುರಖೇರಿಯಲ್ಲಿ ಅತ್ಯಾಚಾರಗೈದು ಕೊಲೆ ಮಾಡಿ ನಂತರ ಮರಕ್ಕೆ ನೇಣು ಹಾಕಿರುವ ಘಟನೆ ನಡೆದಿದೆ. ಈ ಸಂಬಂಧ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ಹೇಳಿದ್ದಾರೆ.

ಈ ಭೀಕರ ಘಟನೆಯಿಂದ ಮೃತ ಬಾಲಕಿಯರ ಗ್ರಾಮವು ಆಕ್ರೋಶದಿಂದ ಕುದಿಯುತ್ತಿದೆ. ಘಟನೆ ಸಂಬಂಧ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಸುಹೇಲ್, ಜುನೈದ್, ಹಫೀಜುಲ್ ರೆಹಮಾನ್, ಕರಿಮುದ್ದೀನ್ ಮತ್ತು ಆರಿಫ್ ಎಂಬುವವರನ್ನು ಬಂಧಿಸಲಾಗಿದೆ. ಈ ದುರುಳರಿಗೆ ಬಾಲಕಿಯರನ್ನು ಪರಿಚಯ ಮಾಡಿಕೊಟ್ಟಿದ್ದ ನೆರೆಯವನಾದ ಆರನೇ ವ್ಯಕ್ತಿ ಛೋಟು ಎಂಬಾತನನ್ನೂ ಬಂಧಿಸಲಾಗಿದೆ.

ಬಾಲಕಿಯರನ್ನು ಕಬ್ಬಿನ ಗದ್ದೆಗೆ ಕರೆದೊಯ್ದು ಸುಹೇಲ್ ಮತ್ತು ಜುನೈದ್ ಅತ್ಯಾಚಾರವೆಸಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಸಂಜೀವ್ ಸುಮನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅತ್ಯಾಚಾರವಾದ ಬಳಿಕ ಹೆಣ್ಣುಮಕ್ಕಳು ತಮ್ಮನ್ನು ಮದುವೆಯಾಗುವಂತೆ ಒತ್ತಾಯಿಸಿದಾಗ ಆ ಬಂಧಿತರು ಆ ಇಬ್ಬರು ಬಾಲಕಿಯರ ದುಪಟ್ಟಾದಿಂದ ಕತ್ತು ಹಿಸುಕಿ ಕೊಂದರು. ನಂತರ ಕರೀಮುದ್ದೀನ್ ಮತ್ತು ಆರೀಫ್ ಸ್ಥಳಕ್ಕೆ ಬಂದು ಘಟನೆ ಮುಚ್ಚಿಡಲು ಸಹಾಯ ಮಾಡಿದರು. ಅವರು ದೇಹವನ್ನು ಮರಕ್ಕೆ ನೇಣು ಹಾಕಿದರು ಎಂದು ಅಧಿಕಾರಿ ಹೇಳಿದರು.

Murder of Dalit girls: 6 arrested in Lakhimpur kheri, uttar pradesh

ಹುಡುಗಿಯರನ್ನು ಅಪಹರಿಸಲಾಗಿಲ್ಲ, ಆದರೆ ಅವರ ಬೈಕ್‌ಗಳಲ್ಲಿ ಪುರುಷರೊಂದಿಗೆ ಸ್ವಇಚ್ಛೆಯಿಂದ ಹೋಗಿದ್ದಾರೆ. ಸಹೋದರಿಯರು ಸುಹೇಲ್ ಮತ್ತು ಜುನೈದ್ ಅವರೊಂದಿಗೆ ಸ್ನೇಹಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರೆಲ್ಲರೂ ಪಕ್ಕದ ಗ್ರಾಮದವರು. ನಿನ್ನೆ ಐವರನ್ನು ಬಂಧಿಸಲಾಗಿದ್ದು, ಇಂದು ಬೆಳಗ್ಗೆ ಓರ್ವನ ಕಾಲಿಗೆ ಎನ್‌ಕೌಂಟರ್‌ ಮಾಡಿ ಸಿಕ್ಕಿಬಿದ್ದಿದ್ದಾನೆ. ನಾವು ಅಪರಾಧದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಬಂಧಿಸಿದ್ದೇವೆ ಎಂದು ಅಧಿಕಾರಿ ಸಂಜೀವ್ ಸುಮನ್ ಪ್ರತಿಪಾದಿಸಿದರು.

ಶವವಾಗಿ ಪತ್ತೆಯಾಗುವ ಮೂರು ಗಂಟೆಗಳ ಮೊದಲು ಅವರನ್ನು ಅಪಹರಿಸಲಾಗಿತ್ತು. ಮೂವರು ಯುವಕರು ತನ್ನ ಹೆಣ್ಣು ಮಕ್ಕಳನ್ನು ಮೋಟಾರ್ ಸೈಕಲ್‌ಗಳಲ್ಲಿ ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ ಎಂದು ಬಾಲಕಿಯರ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಮೃತ ಬಾಲಕಿಯರ ಕುಟುಂಬದವರು ಕಬ್ಬಿನ ಗದ್ದೆ ಬಳಿಯ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವಗಳನ್ನು ಪತ್ತೆ ಮಾಡಿದ್ದಾರೆ.

ಬಾಲಕಿಯರು ತಮ್ಮ ದುಪಟ್ಟಾಗಳಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ದೇಹದ ಮೇಲೆ ಯಾವುದೇ ಗಾಯಗಳಿರಲಿಲ್ಲ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಳ್ಳಲು ಬಾಲಕಿಯರ ಮನೆಗೆ ಹೋದಾಗ ಕೋಪಗೊಂಡ ಗ್ರಾಮಸ್ಥರಿಂದ ಪೊಲೀಸರು ಪ್ರತಿಭಟನೆಯನ್ನು ಎದುರಿಸಿದರು. ವಿಡಿಯೋದಲ್ಲಿ ಪೊಲೀಸ್‌ ಅಧಿಕಾರಿ ಸಂಜೀವ್ ಸುಮನ್ ಅವರು ರಸ್ತೆ ತಡೆ ನಿಲ್ಲಿಸುವಂತೆ ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದಾರೆ.

Murder of Dalit girls: 6 arrested in Lakhimpur kheri, uttar pradesh

ಇಬ್ಬರು ಸೋದರಸಂಬಂಧಿಗಳ ಶವಗಳು ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಇದು ಈ ಘಟನೆಯು 2014 ರಲ್ಲಿ ಬದೌನ್‌ನಲ್ಲಿ ನಡೆದ ಘಟನೆಯ ಭಯಾನಕ ನೆನಪುಗಳನ್ನು ಮರಳಿ ತಂದಿದೆ. ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+