ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತೂ ಕಾಮಪಿಶಾಚಿ ಹೆಂಡತಿಯಿಂದ ಸಿಕ್ತು ಮುಕ್ತಿ!

|
Google Oneindia Kannada News

ಮುಂಬೈ, ಸೆ. 1: ಹೆಂಡತಿಯ ವಿಕೃತ ಕಾಮದ ವಾಂಛೆಗೆ ಬೇಸತ್ತು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯ ಬೇಡಿಕೆಯನ್ನು ಮುಂಬೈನ ಕುಟುಂಬ ನ್ಯಾಯಾಲಯ ಪುರಸ್ಕರಿಸಿದೆ.

ನ್ಯಾಯಾಲಯದ ವಿಚಾರಣೆಗೆ ಹೆಂಡತಿ ಹಾಜರಾಗದ ಕಾರಣ ಅರ್ಜಿ ವಿಚಾರಣೆ ವೇಳೆ ಯಾವುದೇ ಸವಾಲು ಉಂಟಾಗಿಲ್ಲ. ಹಾಗಾಗಿ ನ್ಯಾಯಾಲಯ ಅರ್ಜಿ ಪುರಸ್ಕರಿಸುತ್ತದೆ. ಕೋರ್ಟ್‌ಗೆ ಬೇರೆ ಯಾವ ದಾರಿ ಇಲ್ಲದ ಕಾರಣ ವಿಚ್ಛೇದನ ಮಂಜೂರು ಮಾಡುತ್ತದೆ ಎಂದು ಕುಟುಂಬ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಲಕ್ಷ್ಮೀ ರಾವ್‌ ತೀರ್ಮಾನ ನೀಡುವ ವೇಳೆ ಉಲ್ಲೇಖ ಮಾಡಿದ್ದಾರೆ.

divorce

ಏಪ್ರಿಲ್‌ 2012ರ ನಂತರ ಅಂದರೆ ಮದುವೆಯಾದಾಗಿನಿಂದ ಹೆಂಡತಿ ಅತಿಯಾದ ಲೈಂಗಿಕ ಕಾಮನೆ ವ್ಯಕ್ತಪಡಿಸುತ್ತಲೇ ಬಂದಿದ್ದಳು. ತನ್ನ ಬಯಕೆ ತೀರಿಸಲು ಔಷಧ ಮತ್ತು ಸರಾಯಿ ಮೊರೆ ಹೋಗುವಂತೆಯೂ ಸೂಚಿಸುತ್ತಿದ್ದಳು. ಕೆಲವೊಮ್ಮೆ ಅವೈಜ್ಞಾನಿಕ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದಳು. ಒಂದು ವೇಳೆ ಈ ರೀತಿ ಮಾಡದಿದ್ದರೆ ಸುಮ್ಮನೆ ತೊಂದರೆ ನೀಡುತ್ತಿದ್ದಳು ಎಂದು ದೂರಿನಲ್ಲಿ ನೊಂದ ಪತಿ ತಿಳಿಸಿದ್ದರು. (ಮದುವೆಯಾಗಬೇಕಾದರೆ ಈ ಪರೀಕ್ಷೆ ಕಡ್ಡಾಯ)

ನಾನು ಮೂರು ವಿಭಿನ್ನ ಅವಧಿಯಲ್ಲಿ ಕೆಲಸ ಮಾಡಿ ಮನೆಗೆ ಬರುತ್ತಿದ್ದೆ. ವೈದ್ಯರು ಕೂಡ ಲೈಂಗಿಕ ಕ್ರಿಯೆಯಿಂದ ದೂರ ಇರುವಂತೆ ಸಲಹೆ ನೀಡಿದ್ದರು. ಹಾಗಾಗಿ ಅವಳ ಅತಿಯಾದ ಬಯಕೆ ತೀರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಳಲು ತೋಡಿಕೊಂಡಿದ್ದರು.

ಒಂದು ವೇಳೇ ನೀವು ನನ್ನ 'ಕಾಮನೆ' ಈಡೇರಿಸದಿದ್ದರೇ ಬೇರೊಬ್ಬ ಪುರುಷನ ಸಹವಾಸ ಮಾಡಬೇಕಾಗುತ್ತದೆ. ಇದಕ್ಕೆ ನಿನ್ನ ಮನಸ್ಸಿನ ಭಾವನೆಗಳನ್ನು ಬದಿಗೊತ್ತಿ ಒಪ್ಪಿಗೆ ನೀಡಬೇಕಾಗುತ್ತದೆ ಎಂದು ಅನೇಕ ಸಾರಿ ಬೆದರಿಸಿದ್ದಳು ಎಂದು ಪತಿ ಆರೋಪಿಸಿದ್ದರು.

2012ರ ಡಿಸೆಂಬರ್‌ನಲ್ಲಿ ಆರೋಗ್ಯ ಸರಿಯಿಲ್ಲದ ಕಾರಣ ಆಸ್ಪತ್ರೆ ಸೇರಿದ್ದೆ. ಈ ವೇಳೆ ನನ್ನ ಆರೈಕೆ ಮಾಡುವ ಬದಲು ಎರಡು ವಾರಗಳ ಕಾಲ ಆಕೆಯ ತಂಗಿ ಮನೆಗೆ ಹೋಗಿ ನೆಲೆಸಿದ್ದಳು. ವೈದ್ಯರು ನಿಮಗೆ ವಿಶ್ರಾಂತಿ ಅಗತ್ಯವಿದೆ. ದೈಹಿಕ ಸಂಪರ್ಕದಿಂದ ಕೆಲ ಸಮಯ ದೂರವಿರಿ ಎಂದು ತಿಳಿಸಿದ್ದರು. ನಂತರ ಮತ್ತೆ ನನ್ನ ಆರೊಗ್ಯ ಹದಗೆಟ್ಟಾಗ ತನ್ನೊಟ್ಟಿಗೆ ತಂಗಿ ಮನೆಯಲ್ಲಿರವಂತೆ ಒತ್ತಾಯಿಸಿದ್ದಳು. ಅಲ್ಲದೇ ಸಂಭೋಗ ಮಾಡಲು ಒತ್ತಾಯಿಸಿದ್ದಳು ಎಂದು ಆರೋಪಿಸಿದ್ದರು.

ಕೆಲವೊಮ್ಮೆ ವೈದ್ಯರ ಭೇಟಿಯಾಗದಂತೆಯೂ ಬೆದರಿಕೆ ಹಾಕಿದ್ದಳು. ಇದು ಅಮಾನವೀಯ ಕೃತ್ಯವಾಗಿದ್ದು ನನ್ನ ಜೀವ ಮತ್ತು ಜೀವನ ಎರಡಕ್ಕೂ ತೊಂದರೆ ತಂದಿದೆ. ಈ ಕ್ರೂರ ನಡವಳಿಕೆಯಿಂದ ಬೇಸತ್ತು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಿದ್ದೇನೆ. ಇದೊಂದು ರೀತಿಯ ವಿಕೃತ ಕಾಮದ ವಾಂಛೆಯಾಗಿದ್ದು, ಇಂಥವರೊಂದಿಗೆ ಬದುಕಲು ಅಸಾಧ್ಯ ಎಂದು ನೊಂದ ಪತಿ ದೂರು ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ಲಕ್ಷ್ಮೀ ರಾವ್‌ ವಿಚ್ಛೇದನ ನೀಡಿದ್ದಾರೆ.

English summary
A man, who sought separation from his wife alleging that she was aggressive and autocratic with an insatiable appetite for sex, was granted divorce by a family court in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X