ಫೇಸ್‌ಬುಕ್‌ನಲ್ಲೂ ಹನಿ ಟ್ರ್ಯಾಪ್ ಮಾಡ್ತಾರೆ, ಹುಷಾರು!
ಮುಂಬೈ, ಜು. 15: ನೀವು ಫೇಸ್ ಬುಕ್ ಬಳಕೆದಾರರಾ? ಹಾಗಾದರೆ ಸ್ವಲ್ಪ ಎಚ್ಚರಿಕೆಯಿಂದ ಇರಿ(ವಿಶೇಷವಾಗಿ ಹುಡುಗರಿಗೆ), ಯಾವುದೋ ಸುಂದರ ಹುಡುಗಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದಳು ಅಂತ ಅಕ್ಸೆಪ್ಟ್ ಮಾಡಿಕೊಂಡರೆ ಕತೆ ಮುಗಿದಂತೆಯೇ? ಚಾಟ್ ಮಾಡಲು ಶುರುವಿಟ್ಟುಕೊಂಡರೆ ನಿಮಗೆ ಗೊತ್ತಿಲ್ಲದಂತೆ ವಂಚನೆ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ.
ಇಂಥದ್ದೇ ಒಂದು ಪ್ರಕರಣ ಮುಂಬೈನಲ್ಲಿ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಟಿ ಮಾಡಿ ಅಶ್ಲೀಲ ಚಿತ್ರಗಳನ್ನು ರವಾನೆ ಮಾಡಿ ನಂತರ ಲೈಂಗಿಕ ಶೋಷಣೆಗೆ ಯತ್ನಿಸುತ್ತಿದ್ದ ನಿವೃತ್ತ ಪೊಲೀಸ್ ಕಮಿಷನರ್ ಒಬ್ಬರ ಮಗನನ್ನು ಬಂಧಿಸಲಾಗಿದೆ.[ಅಪ್ಪಚ್ಚಿ ತಿನ್ನೋ ಪಾಪಚ್ಚಿ ಕೈಗೆ ಎಣ್ಣೆ ಲೋಟ]

ಅಶ್ಲೀಲ ಚಿತ್ರ ರವಾನೆ ಆರೋಪ ಮತ್ತು ಲೈಂಗಿಕ ಶೋಷಣೆ ಆರೋಪದಡಿ ಮಿಲಿಂದ್ ಶೇಟ್(33) ಎಂಬಾತನನ್ನು ಬಂಧಿಸಲಾಗಿದೆ. ಮುಂಬೈನ ಕಂನ್ದಿಲ್ವಿ ಪೂರ್ವ ಭಾಗದ ನಿವಾಸಿ ಕಂಪ್ಯೂಟರ್ ಇಂಜಿನಿಯರ್ ಮಿಲಿಂದ್ ತನ್ನ ಪಾಲಕರೊಂದಿಗೆ ವಾಸವಾಗಿದ್ದ. ಹುಡುಗಿಯರ ಹೆಸರಿನಲ್ಲಿ ಖಾತೆ ತೆರೆದು 15 ವರ್ಷದ ಹುಡುಗನೊಬ್ಬನ್ನು ಗುರಿಯಾಗಿರಿಸಿಕೊಂಡು ಅಶ್ಲೀಲ ಚಿತ್ರಗಳನ್ನು ರವಾನೆ ಮಾಡುತ್ತಿದ್ದ. ಅಲ್ಲದೇ ಸಂತ್ರಸ್ತನನ್ನು ಬ್ಲಾಕ್ ಮೇಲ್ ಮಾಡಲು ಮುಂದಾಗಿದ್ದ.
ಜನವರಿ ತಿಂಗಳ ಆರಂಭದಲ್ಲಿ ಬಾಲಕನಿಗೆ'ವೈಭವಿ ಕ್ಯೂಟ್' ಎಂಬ ಖಾತೆಯಿಂದ ರಿಕ್ವೆಸ್ಟ್ ಬರುತ್ತದೆ. ಅದನ್ನು ಬಾಲಕ ಅಕ್ಸೆಪ್ಟ್ ಮಾಡಿದ ನಂತರ ಚಾಟಿಂಗ್ ಆರಂಭವಾಗುತ್ತದೆ. ವೈಭವಿ ಖಾತೆಯಿಂದ ಅಶ್ಲೀಲ ಚಿತ್ರಗಳು ರವಾನೆಯಾಗುತ್ತವೆ. ಇದು ನನ್ನದೇ ಎಂದು ಹುಡುಗಿ ಹೇಳುತ್ತಾಳೆ. ಅಲ್ಲದೇ ನೀನು ಸಹ ಈ ಬಗೆಯ ಚಿತ್ರಗಳನ್ನು ತೆಗೆದು ಕಳಿಸು ಎಂದು ಕೇಳುತ್ತಾಳೆ. ಇದಕ್ಕೆ ಒಪ್ಪಿದ ಹುಡುಗ ತನ್ನ ಬೆತ್ತಲೆ ಚಿತ್ರವನ್ನು ಕಳುಹಿಸುತ್ತಾನೆ. ಇದ್ದಕ್ಕಿದ್ದಂತೆ ಹುಡುಗಿ ಖಾತೆ ಡಿಆಕ್ಟಿವೇಟ್ ಆಗುತ್ತದೆ.[ಹನಿ ಟ್ರ್ಯಾಪ್ ಮೂಲಕ ಲೇಡಿ ಉಗ್ರರ ಎಂಟ್ರಿ?]
ಕೆಲ ದಿನಗಳ ನಂತರ ತೀರ್ಥ ಶರ್ಮಾ ಎಂಬ ಖಾತೆಯಿಂದ ಹುಡುಗನಿಗೆ ಮೆಸೇಜ್ ಬರಲು ಆರಂಭವಾಗುತ್ತದೆ. ನಿಮ್ಮ ಬೆತ್ತಲೆ ಚಿತ್ರಗಳನ್ನು ವೆಬ್ ತಾಣಕ್ಕೆ ಅಪ್ ಲೋಡ್ ಮಾಡುತ್ತೇನೆ ಎಂದು ಶರ್ಮಾ ಬೆದರಿಕೆ ಹಾಕುತ್ತಾನೆ. ತಕ್ಷಣ ಹುಡುಗ ತನ್ನ ಬೆತ್ತಲೆ ಫೋಟೋಗಳಿಗಾಗಿ ಶೋಧ ನಡೆಸಿದರೆ ಯಾವುದೂ ಸಿಗುವುದಿಲ್ಲ. ನಿಮ್ಮ ಒಂದು ಫೋಟೋವನ್ನು ರಿಷಿ ಸೊನೇಚಾ ಎಂಬುವರು ಅಪ್ ಲೋಡ್ ಮಾಡಿದ್ದಾರೆ. ಅವರಲ್ಲಿ ವಿನಂತಿ ಮಾಡಿಕೊಳ್ಳಿ ಎಂದು ತಿಳಿಸುತ್ತಾನೆ.[ನಟಿ ನಯನಾ ಕೃಷ್ಣ ಹನಿ ಟ್ರ್ಯಾಪ್ ಮಾಡಿದ್ದರೆ?]
ನಂತರ ರಿಷಿ ಸೊನೇಚಾ ಖಾತೆಯನ್ನು ಹುಡುಕಿದ ಹುಡುಗ ತನ್ನ ಬೆತ್ತಲೇ ಚಿತ್ರವನ್ನು ಡಿಲೀಟ್ ಮಾಡಿ ಎಂದು ಕೇಳಿಕೊಳ್ಳುತ್ತಾನೆ. ಹಾಗೆ ಮಾಡಬೇಕು ಎಂದರೆ ನೀನು ನನ್ನನ್ನು ಹೌಸಿಂಗ್ ಸೊಸೈಟಿ ಬಳಿ ಬಂದು ಭೇಟಿಯಾಗು ಎಂಬ ಉತ್ತರ ರಿಷಿಯಿಂದ ಬರುತ್ತದೆ. ಅಲ್ಲಿಗೆ ತೆರಳಿದಾಗ ಸೋನೆಚಾ ಬದಲಾಗಿ ಮಿಲಂದ್ ಶೇಟ್ ಇರುತ್ತಾನೆ.
ತನ್ನ ನಾಟಕವನ್ನು ಮುಂದುವರಿಸಿದ ಶೇಟ್, ನನಗೂ ರಿಷಿ ಇದೇ ರೀತಿ ಮಾಡಿದ್ದಾರೆ. ಹುಡುಗರೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿ ಅದನ್ನು ಮೊಬೈಲ್ ನಲ್ಲಿ ರೇಕಾರ್ಡ್ ಮಾಡಿಕೊಳ್ಳುತ್ತಾನೆ. ಅಲ್ಲದೇ ನಿಮ್ಮ ಮನೆಯವರಿಗೆ ನೀಡುತ್ತೇನೆ ಎಂದು ಹೇಳಿ ಹುಡುಗನನ್ನು ಮತ್ತಷ್ಟು ಭಯಭೀತನನ್ನಾಗಿ ಮಾಡುತ್ತಾನೆ.
ಕೆಲ ದಿನಗಳ ನಂತರ ರಿಷಿ ಖಾತೆ ಸಹ ಡಿಆಕ್ಟಿವೇಟ್ ಆಗುತ್ತದೆ. ಇದರಿಂದ ಕಂಗಾಲಾದ ಹುಡುಗ ತನ್ನ ಖಾತೆಯನ್ನು ಡಿಆಕ್ಟಿವೇಟ್ ಮಾಡುತ್ತಾನೆ. ಆದರೆ ನಂತರ ಮಿಲಿಂದ್ ನಿಂದ ಹುಡುಗನಿಗೆ ಮೆಸೇಜ್ ಬರಲು ಆರಂಭಿಸುತ್ತದೆ. ತನ್ನನ್ನು ಭೇಟಿ ಮಾಡುವಂತೆ ಮಿಲಿಂದ್ ಹುಡುಗನ ಮೇಲೆ ಒತ್ತಡ ಹೇರತೊಡಗುತ್ತಾನೆ.
ಮಗನ ಚಡಪಡಿಕೆ ಗಮನಿಸಿದ ತಾಯಿ ಹುಡುಗನಲ್ಲಿ ವಿಚಾರಣೆ ಮಾಡಿದಾಗ ನಡೆದ ಘಟನಾವಳಿಗಳನ್ನು ತಿಳಿಸುತ್ತಾನೆ. ನಂತರ ಈ ಬಗ್ಗೆ ಪೊಲೀಸರಿಗೆ ಜುಲೈ 10 ರಂದು ದೂರು ಸಲ್ಲಿಸಲಾಗುತ್ತದೆ. ದೂರು ನೀಡಿದ ದಿನವೇ ಮಿಲಿಂದ್ ನನ್ನು ಬಂಧಿಸಿ ಲೈಂಗಿಕ ದೌರ್ಜನ್ಯ ಮತ್ತು ಮಾನಸಿಕ ಹಿಂಸೆ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ.












Click it and Unblock the Notifications