India's First Bullet Train: ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ 394 ಮೀಟರ್ ಉದ್ದದ ಸುರಂಗ ಸಿದ್ಧ
ಭಾರತದಲ್ಲಿ ಬುಲೆಟ್ ಟ್ರೈನ್ ಓಡುವ ಕಾಲ ದೂರವಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಈ ಕನಸು ಸಹ ನನಸಾಗಲಿದೆ. ಈ ನಿಟ್ಟಿನಲ್ಲಿ ಬುಲೆಟ್ ಟ್ರೈನ್ ಕಾರ್ಯ ಸಹ ವೇಗದಿಂದ ನಡೆದಿದೆ. ದೇಶದ ಮೊಟ್ಟ ಮೊದಲ ಬುಲೆಟ್ ರೈಲು ಮುಂಬೈ-ಅಹಮದಾಬಾದ್ ನಡುವೆ ಸಂಚರಿಸಲಿದ್ದು, ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುತ್ತಿದೆ.
ಬುಲೆಟ್ ರೈಲಿನ ಬಗ್ಗೆ ಈಗ ಒಂದು ಬಿಗ್ ಅಪ್‌ಡೇಟ್ ಬಂದಿದೆ. ನವಿ ಮುಂಬೈನಲ್ಲಿ 394 ಮೀಟರ್ ಉದ್ದದ ಸುರಂಗ ನಿರ್ಮಾಣ ಪೂರ್ಣಗೊಂಡಿದೆ ಎಂದು ರಾಷ್ಟ್ರೀಯ ಹೈಸ್ಪೀಡ್ ರೈಲು ನಿಗಮ ತಿಳಿಸಿದೆ. ಘನ್ಸೋಲಿಯಲ್ಲಿ ಹೆಚ್ಚುವರಿ ಚಾಲಿತ ಮಧ್ಯಂತರ ಸುರಂಗದ ಕೆಲಸ ನಡೆಯುತ್ತಿದೆ. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಮತ್ತು ಶಿಲ್ಪಾಟಾ ನಡುವಿನ 21 ಕಿ.ಮೀ ಉದ್ದದ ಸುರಂಗದ ಕಾಮಗಾರಿಯೂ ಚುರುಕುಗೊಂಡಿದೆ. ಅಧಿಕಾರಿಗಳ ಪ್ರಕಾರ, ಯೋಜನೆಯಡಿಯಲ್ಲಿ ಉತ್ಖನನ ಕಾರ್ಯವು ಕಳೆದ ವರ್ಷ ಡಿಸೆಂಬರ್ 6 ರಂದು ಪ್ರಾರಂಭವಾಗಿತ್ತು.

ಸುರಂಗ ನಿರ್ಮಾಣ ಹೇಗೆ?
ತಜ್ಞರ ಮೇಲ್ವಿಚಾರಣೆಯಲ್ಲಿ 27515 ಕೆಜಿ ಸ್ಫೋಟಕಗಳನ್ನು ಬಳಸಿ, ಕೇವಲ ಆರು ತಿಂಗಳಲ್ಲಿ 394 ಮೀಟರ್ ಉದ್ದದ ಸುರಂಗ ನಿರ್ಮಿಸಲಾಗಿದೆ. ಈ ವೇಳೆ 214 ಭಾರೀ ಸ್ಪೋಟಕಗಳನ್ನು ಬಳಸಲಾಗಿದೆ. ಅಲ್ಲದೆ ಈ ವೇಳೆ ಸುರಕ್ಷತಾ ಕ್ರಮಗಳನ್ನು ಸಹ ನೋಡಿಕೊಳ್ಳಲಾಗಿದೆ. ಹೊಸ ನ್ಯೂ ಆಸ್ಟ್ರಿಯನ್ ಟನೆಲಿಂಗ್ ತಂತ್ರಜ್ಞಾನವನ್ನು ಬಳಸಿ 3.3 ಕಿಲೋ ಮೀಟರ್ ಉದ್ದರ ಸುರಂಗ ನಿರ್ಮಿಸುವ ಕಾಮಗಾರಿ ನಡೆಸಲಾಗಿದೆ.
ಯೋಜನೆಯಲ್ಲಿ ಒಟ್ಟು 21 ಕಿಲೋಮೀಟರ್ ಉದ್ದದ ಸುರಂಗವನ್ನು ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ ಬೋರಿಂಗ್ ಯಂತ್ರಗಳ ಮೂಲಕ 16 ಕಿಲೋಮೀಟರ್ ಅಗೆಯಲಾಗಿದ್ದು, 5 ಕಿಲೋಮೀಟರ್ ಸುರಂಗವನ್ನು NATM (ಹೊಸ ಆಸ್ಟ್ರಿಯನ್ ಸುರಂಗ ವಿಧಾನ) ಬಳಸಿ ನಿರ್ಮಿಸಲಾಗಿದೆ.
#WATCH Ghansoli, Navi Mumbai: The completion of the 394 metre-long tunnel for the Mumbai-Ahmedabad bullet train project, is underway
— ANI (@ANI) May 27, 2024
(Source: NHSRCL- National High-Speed Rail Corporation) pic.twitter.com/JjBB8Kqwjs
ನಿರ್ಮಾಣದ ಸಮಯದಲ್ಲಿ ಹಲವು ವಿಷಯದ ಬಗ್ಗೆಯೂ ಕಾಳಜಿ ವಹಿಸಲಾಗಿದೆ. ಇದರಿಂದ ತುರ್ತು ಸಂದರ್ಭದಲ್ಲಿ ತೆರವು ತ್ವರಿತವಾಗಿ ಮಾಡಬಹುದು. ನ್ಯಾಶನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್) ಮುಂಬೈ ನಿಲ್ದಾಣವನ್ನು ಬಿಕೆಸಿಯಿಂದ ಶಿಲ್ಪಾಟಾಕ್ಕೆ ಸಂಪರ್ಕಿಸುವ ಸುರಂಗದ ಕಾರ್ಯ ಭರದಿಂದ ಸಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಸುರಂಗದ ಸುಮಾರು 7 ಕಿಲೋಮೀಟರ್ ಥಾಣೆ ಕ್ರೀಕ್‌ನಲ್ಲಿ ಸಮುದ್ರದ ಅಡಿಯಲ್ಲಿ ಹಾದುಹೋಗುತ್ತದೆ. ಇನ್ನು ಸುಮಾರು 21 ಕಿಲೋಮೀಟರ್ ಉದ್ದದ ಈ ಸುರಂಗವನ್ನು ನಿರ್ಮಿಸಬೇಕಿದೆ.












Click it and Unblock the Notifications