ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹೋದರನ ಮೊಬೈಲ್ ಸಾಮ್ರಾಜ್ಯವನ್ನು ಅಲುಗಾಡಿಸಿದ ಮುಕೇಶ್ ಅಂಬಾನಿ

ಮುಕೇಶ್ ಅಂಬಾನಿಯ ಜಿಯೋ, ಟೆಲೆಕಾಂ ಮಾರುಕಟ್ಟೆ ವಿಸ್ತರಿಸುತ್ತಿರುವ ವೇಗಕ್ಕೆ ಸಹೋದರ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯೂನಿಕೇಶನ್ ಸಂಸ್ಥೆ ತಲ್ಲಣ.

|
Google Oneindia Kannada News

ಪಕ್ಕಾ ವ್ಯಾಪಾರಸ್ಥನಾಗಿರುವ ಮುಕೇಶ್ ಅಂಬಾನಿ ಸದ್ಯಕ್ಕೆ ಮುಟ್ಟಿದ್ದೆಲ್ಲಾ ಚಿನ್ನ, ಹಿಡಿದ ಕೆಲಸವನ್ನು ಪಕ್ಕಾ ವೃತ್ತಿಪರತೆಯಿಂದ ಮಾಡಿ ಮುಗಿಸುವ ಮುಕೇಶ್, ರಿಲಯನ್ಸ್ ಜಿಯೋ ಮೂಲಕ ಭಾರತದ ಮೊಬೈಲ್ ಮಾರುಕಟ್ಟೆ ಪ್ರವೇಶಿಸಿದ್ದು ಗೊತ್ತೇ ಇದೆ.

ಫ್ರೀ ಕಾಲ್, ಫ್ರೀ ಡಾಟಾ ಎನ್ನುವ ಮೂಲಕ ಸಂಸ್ಥೆ ಆರಂಭಗೊಂಡ ಕೆಲವೇ ತಿಂಗಳಲ್ಲಿ ಸುಮಾರು ಹನ್ನೊಂದು ಕೋಟಿಗೂ ಅಧಿಕ ಗ್ರಾಹಕರನ್ನು ತನ್ನತ್ತ ಸೆಳೆಯುವ ಮೂಲಕ ಮುಕೇಶ್, ಇಡೀ ದೇಶದ ಇತರ ಟೆಲಿಕಾಂ ಸಂಸ್ಥೆಗಳಿಗೆ ಊಹಿಸಲೂ ಅಸಾಧ್ಯವಾದ ಪೈಪೋಟಿ ನೀಡಲಾರಂಭಿಸಿದರು. (ಗೇಮ್ ಚೇಂಜರ್ಸ್ ಪಟ್ಟಿಯಲ್ಲಿ ಮುಕೇಶ್ ನಂಬರ್ ಒನ್)

ಜಿಯೋ, ಟೆಲಿಕಾಂ ಮಾರುಕಟ್ಟೆ ವಿಸ್ತರಿಸುತ್ತಿರುವ ವೇಗಕ್ಕೆ ಪ್ರಮುಖವಾಗಿ ಸಹೋದರ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯೂನಿಕೇಶನ್ ಸಂಸ್ಥೆ ತಲ್ಲಣಗೊಂಡಿದೆ. ನಾಲ್ಕನೇ ತ್ರೈಮಾಸಿಕದ (Q 4) ವರದಿಯನ್ನು ನೀಡುವಾಗ ಖುದ್ದು ಅನಿಲ್ ಅಂಬಾನಿಯೇ ಸಂಸ್ಥೆ ಸದ್ಯ ಹಿನ್ನಡೆ ಅನುಭವಿಸುತ್ತಿರುವ ಸುದ್ದಿಯನ್ನು ಒಪ್ಪಿಕೊಂಡಿದ್ದಾರೆ.

ಇದರ ಜೊತೆಗೆ ಮೊಬೈಲ್ ಪೊರ್ಟಬಿಲಿಟಿ ಮೂಲಕ ತನ್ನ ಗ್ರಾಹಕರು ಇತರ ಟೆಲಿಕಾಂ ಸಂಸ್ಥೆಗಳತ್ತ ವಾಲುತ್ತಿರುವುದು ರಿಲಯನ್ಸ್ ಸಂಸ್ಥೆಗಾಗುತ್ತಿರುವ ಬಹುದೊಡ್ಡ ಹಿನ್ನಡೆ. ದೇಶದ ಇತರ ಪ್ರಮುಖ ಟೆಲಿಕಾಂ ಸಂಸ್ಥೆಗಳಾದ ಏರ್ಟೆಲ್, ಐಡಿಯಾ, ವೊಡಾಫೋನ್ ಸಂಸ್ಥೆಗಳಿಗೂ ಜಿಯೋ ಬಿಸಿ ಮುಟ್ಟಿದ್ದರೂ ರಿಲಯನ್ಸ್ ನಷ್ಟಲ್ಲ.

ಹೊಸ ಹೊಸ ಪ್ಲಾನ್ ಮೂಲಕ ಘೋಷಿಸಿದ್ದರೂ ಗ್ರಾಹಕರನ್ನು ಸೆಳೆಯುವಲ್ಲಿ ಅಥವಾ ಉಳಿಸಿಕೊಳ್ಳುವಲ್ಲಿ ರಿಲಯನ್ಸ್ ಸದ್ಯ ವಿಫಲವಾಗುತ್ತಿದೆ. ಹಾಗಾಗಿ, ಕೆಲವು ತಿಂಗಳಿನಿಂದ ಭಾರೀ ಹಿನ್ನಡೆ ಅನುಭವಿಸುತ್ತಿರುವ ಅನಿಲ್ ಅಂಬಾನಿಯ ಸಂಸ್ಥೆಯ ಬ್ಯಾಂಕ್ ಸಾಲಗಳೂ ಬೆಳೆಯುತ್ತಿದೆ. ಯಾವ ಯಾವ ಬ್ಯಾಂಕಿನಲ್ಲಿ ಎಷ್ಟೆಷ್ಟು ಸಾಲ, ಮುಂದೆ ಓದಿ..

ತ್ರೈಮಾಸಿಕ ಅವಧಿಗೆ ರಿಲಯನ್ಸ್ ಸಂಸ್ಥೆಯ ಸಾಲ 45,733.4 ಕೋಟಿ

ತ್ರೈಮಾಸಿಕ ಅವಧಿಗೆ ರಿಲಯನ್ಸ್ ಸಂಸ್ಥೆಯ ಸಾಲ 45,733.4 ಕೋಟಿ

ಮಾರ್ಚ್ 2017 ತ್ರೈಮಾಸಿಕ ಅವಧಿ ಮುಕ್ತಾಯಕ್ಕೆ ರಿಲಯನ್ಸ್ ಸಂಸ್ಥೆಯ ಒಟ್ಟಾರೆ ಸಾಲ 45,733.4 ಕೋಟಿ. ತನ್ನ ಮೊಬೈಲ್ ಟವರ್ಸ್ ಮಾರಾಟ ಮತ್ತು ಏರ್ಸೆಲ್ ಜೊತೆ ರಿಲಯನ್ಸ್ ಒಡಂಬಡಿಕೆ ಮಾಡಿಕೊಳ್ಳುವ ಪ್ರಕ್ರಿಯೆ ಹೆಚ್ಚುಕಮ್ಮಿ ಅಂತಿಮಗೊಂಡಿರುವುದರಿಂದ, 25ಸಾವಿರ ಕೋಟಿ ರೂಪಾಯಿ, ಸೆಪ್ಟಂಬರ್ 17ರೊಳಗೆ ತೀರಿಸುವುದಾಗಿ ರಿಲಯನ್ಸ್ ತನ್ನ ಸಾಲಗಾರರಿಗೆ ಮಾತು ನೀಡಿದೆ ಎಂದು ಪಿಟಿಐ ವರದಿ ಮಾಡಿದೆ.

ಜಿಯೋ ಹೊಡೆತಕ್ಕೆ ನಷ್ಟದ ಅಂಚಿನಲ್ಲಿ ರಿಲಯನ್ಸ್

ಜಿಯೋ ಹೊಡೆತಕ್ಕೆ ನಷ್ಟದ ಅಂಚಿನಲ್ಲಿ ರಿಲಯನ್ಸ್

ಜನವರಿಯಿಂದ ಮಾರ್ಚ್ 2017 ಅಂತ್ಯಕ್ಕೆ ರಿಲಯನ್ಸ್ ಸಂಸ್ಥೆಯ ಆದಾಯದಲ್ಲಿ ಶೇ. 24 ಕುಸಿತಕಂಡಿದ್ದು, ಒಟ್ಟಾರೆ ಈ ಅವಧಿಯಲ್ಲಿ 948 ಕೋಟಿ ನಷ್ಟ ಅನುಭವಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 79 ಕೋಟಿ ಲಾಭ ಹೊಂದಿದ್ದ ಸಂಸ್ಥೆ, ಜಿಯೋ ಹೊಡೆತಕ್ಕೆ ಸದ್ಯ ನಷ್ಟದ ಅಂಚಿನಲ್ಲಿದೆ.

ಗ್ರಾಹಕರ ಸಂಖ್ಯೆಯಲ್ಲಿ ಭಾರೀ ಇಳಿಮುಖ

ಗ್ರಾಹಕರ ಸಂಖ್ಯೆಯಲ್ಲಿ ಭಾರೀ ಇಳಿಮುಖ

ಜಿಯೋ ಕಾರ್ಯಾರಂಭಗೊಂಡ ನಂತರ ರಿಲಯನ್ಸ್ ಸಂಸ್ಥೆಯ ಒಟ್ಟಾರೆ ಗ್ರಾಹಕರ ಸಂಖ್ಯೆ 38.9 ಮಿಲಿಯನ್ ನಿಂದ 28.3 ಮಿಲಿಯನ್ ಗೆ ಇಳಿದಿದೆ. ಇದಲ್ಲದೇ, ತನ್ನ ನೆಟ್ವರ್ಕಿನ ಡೇಟಾ ಟ್ರಾಫಿಕ್ 104,743 ನಿಂದ 79,554 ಮೆಗಾಬಿಟ್ಸಿಗೆ ಇಳಿದಿರುವುದು ರಿಲಯನ್ಸ್ ಸಂಸ್ಥೆಗೆ ಆಗುತ್ತಿರುವ ಬಹುದೊಡ್ಡ ಹಿನ್ನಡೆ.

ಬೆಳೆಯುತ್ತಿರುವ ಬ್ಯಾಂಕ್ ಸಾಲಗಳು

ಬೆಳೆಯುತ್ತಿರುವ ಬ್ಯಾಂಕ್ ಸಾಲಗಳು

ಒಂದು ಕಡೆ ವ್ಯಾಪಾರದಲ್ಲಿ ಹಿನ್ನಡೆ ಅನುಭವಿಸುತ್ತಿರುವ ಅನಿಲ್, ದೇಶದ ಹತ್ತು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳಿಂದಲೂ ನೊಟೀಸ್ ಎದುರಿಸುವಂತಾಗಿದೆ. ಕೆಲವು ಬ್ಯಾಂಕುಗಳ ಸಾಲ ಹಿಂದಿರುಗಿಸಬೇಕಾದ ದಿನದಿಂದ, ಮೂವತ್ತು ದಿನವಾದರೂ ಹಿಂದಿರುಗಿಸದೇ ಇದ್ದ ಹಿನ್ನಲೆಯಲ್ಲಿ ರಿಲಯನ್ಸ್ ಸಂಸ್ಥೆಯ ಅಕೌಂಟ್ ಅನ್ನು ಸ್ಪೆಷಲ್ ಮೆನ್ಸನ್ ಅಕೌಂಟ್ ಪಟ್ಟಿಗೆ ಬ್ಯಾಂಕುಗಳು ಸೇರಿಸಿದೆ.

ಯಾವ ಬ್ಯಾಂಕ್ ನಲ್ಲಿ ಎಷ್ಟೆಷ್ಟು

ಯಾವ ಬ್ಯಾಂಕ್ ನಲ್ಲಿ ಎಷ್ಟೆಷ್ಟು

ಸ್ಟೇಟ್ ಬ್ಯಾಂಕ್ 2375, ಪಂಜಾಬ್ ನ್ಯಾಷನಲ್ ಬ್ಯಾಂಕ್ 1350, ಐಡಿಬಿಐ ಬ್ಯಾಂಕ್ 1230, ಬ್ಯಾಂಕ್ ಆಫ್ ಬರೋಡ 1000, ಸಿಂಡಿಕೇಟ್ ಬ್ಯಾಂಕ್ 850, ಯೆಸ್ ಬ್ಯಾಂಕ್ 805, ಯುಕೋ ಬ್ಯಾಂಕ್ 800, ಕೆನರಾ ಬ್ಯಾಂಕ್ 800, ಬ್ಯಾಂಕ್ ಆಫ್ ಇಂಡಿಯಾ 750 ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದ 500 ಕೋಟಿ ಸಾಲ ಎನ್ಪಿಎ ಪಟ್ಟಿಯಲ್ಲಿದೆ.

English summary
Mukesh Ambani's ambitious dream of introducing Reliance Jio has changed the entire landscape of India's telecom sector effecting many top players, including his brother Anil Ambani's Reliance Communications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X