ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷನ ಶೂ ಲೇಸು ಕಟ್ಟಿದ ಶಾಸಕ!
ಸಿಯೋನಿ(ಮಧ್ಯಪ್ರದೇಶ), ಜೂನ್ 25: ಮಧ್ಯಪ್ರದೇಶದ ಸಿಯೋನಿಯಲ್ಲಿ ಇಲ್ಲಿನ ಶಾಸಕ ರಜನೀಶ್ ಸಿಂಗ್ ಅವರು ಕಾಂಗ್ರೆಸ್ ರಾಜ್ಯಾಧ್ಯಕ್ಷ ಕಮಲ್ ನಾಥ್ ಅವರ ಶೂ ಲೇಸು ಕಟ್ಟಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ರಜನೀಶ್ ಸಿಂಗ್, 'ಇದರಲ್ಲಿ ಯಾವ ಅಪರಾಧವೂ ಇಲ್ಲ. ನನಗಂತೂ ಮುಜುಗರವಿಲ್ಲ. ಹಿರಿಯರಿಗೆ ನೀಡುವ ಗೌರವ ಇದು ಎಂದು ನಾನು ಭಾವಿಸಿದ್ದೇನೆ' ಎಂದಿದ್ದಾರೆ.
ಕಮಲ್ ನಾಥ್ ಅವರ ಶೂ ಲೇಸನ್ನು ರಜನೀಶ್ ಕಟ್ಟಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಹಲವರು ಅವರನ್ನು ವ್ಯಂಗ್ಯ ಮಾಡಿ ನಕ್ಕಿದ್ದರು.

ಆದರೆ ಈ ಯಾವುದರ ಕುರಿತೂ ತಲೆ ಕೆಡಿಸಿಕೊಳ್ಳದ ರಜನೀಶ್ ಸಿಂಗ್, "ಕಮಲ್ ನಾಥ್ ಅವರು ನನಗೆ ತಂದೆಯಿದ್ದಂತೆ. ನಾನು ಅವರಿಗೆ ಸಾಕಷ್ಟು ಗೌರವ ನೀಡುತ್ತೇನೆ. ನನ್ನ ಶಾಲಾ ದಿನಗಳಿಂದಲೂ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆಯುತ್ತಿದ್ದೇನೆ. ಅವರು ನನ್ನ ಕುಟುಂಬಕ್ಕೆ ಬಹಳ ಆತ್ಮೀಯರು" ಎಂದಿದ್ದಾರೆ.
ಮಾಧ್ಯಮಗಳು ಈ ಕುರಿತು ಅಪಪ್ರಚಾರ ಮಾಡಿವೆಯಷ್ಟೇ. ಇವನ್ನು ಒಳ್ಳೆಯ ದೃಷ್ಟಿಯಿಂದ ನೋಡಿದರೆ ಇದು ಒಳ್ಳೆಯ ನಡೆಯೇ ಎಮದು ಅವರು ಸಮಜಾಯಿಷಿ ನೀಡಿದ್ದಾರೆ.











Click it and Unblock the Notifications