• search

ಮದರ್ ತೆರೆಸಾ ಹೆಸರಿನ ಅನಾಥಾಶ್ರಮಗಳು ಇನ್ನಿಲ್ಲ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಕೋಲ್ಕತ್ತಾ, ಅ.10: ನೊಬೆಲ್ ಪಾರಿತೋಷಕ ವಿಜೇತೆ ಮದರ್ ತೆರೆಸಾ ಅವರ ಹೆಸರಿನಲ್ಲಿರುವ ಅನಾಥಾಶ್ರಮಗಳ ಮಾನ್ಯತೆ ರದ್ದು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮಿಷನರಿ ಆಫ್ ಚಾರಿಟಿ ದತ್ತು ನಿಯಮ ಉಲ್ಲಂಘನೆ ಮಾಡಿದ ಆರೋಪ ಎದುರಿಸುತ್ತಿದೆ.

  ಮದರ್ ತೆರೆಸಾ ಅವರ ಹೆಸರಿನಲ್ಲಿ ಮಿಷನರಿ ಆಫ್ ಚಾರಿಟಿ ನಡೆಸುತ್ತಿರುವ 19 ಅನಾಥಾಶ್ರಮಗಳ ಮಾನ್ಯತೆ ರದ್ದುಪಡಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಿದ್ಧತೆ ನಡೆಸಿದೆ. ಸರ್ಕಾರದ ನೂತನ ದತ್ತು ನಿಯಮಗಳನ್ನು ಮಿಷನರಿ ಆಫ್ ಚಾರಿಟಿ ಪಾಲಿಸುತ್ತಿಲ್ಲ ಹಾಗೂ ಆಗಸ್ಟ್ 15, 2015ರಿಂದ ಯಾವುದೇ ದತ್ತು ಸ್ವೀಕಾರ ಪಡೆದಿಲ್ಲ ಎಂಬ ಆರೋಪವಿದೆ.

  ಅದರೆ, ಈ ಬಗ್ಗೆ ಪ್ರತಿಕ್ರಿಯಿಸಿದ ಮಿಷನರಿ ಆಫ್ ಚಾರಿಟಿ, ಮದರ್ ಅವರ ಅಣತಿಯಂತೆ ಕೆಲ ನಿಯಮಗಳನ್ನು ಪಾಲಿಸಲಾಗುತ್ತಿದೆ. ಸರ್ಕಾರದ ಹೊಸ ನೀತಿಯನ್ನು ಪಾಲಿಸಲು ಸಾಧ್ಯವಾಗದ ಕಾರಣ ದತ್ತು ಸ್ವೀಕಾರ ಮುಂದುವರೆಸಿಲ್ಲ ಎಂದಿದೆ.

  Mother Teresa's Missionaries of Charity Stops Adoptions

  ಮೇನಕಾ ಗಾಂಧಿ ಮಾತನಾಡಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಮಾತನಾಡಿ, ಅನಾಥಾಶ್ರಮಗಳ ನೋಂದಣಿ ರದ್ದುಪಡಿಸಲು ಸರ್ಕಾರ ಮುಂದಾಗಿಲ್ಲ. ತೆರೆಸಾ ಮಿಷನರಿಗಳೇ ನೋಂದಣಿ ರದ್ದುಪಡಿಸುವಂತೆ ಕೋರಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದೆ. ವಿಚ್ಛೇದಿತರಿಗೆ, ಏಕಾಂಗಿಯಾಗಿರುವವರಿಗೆ ಮತ್ತು ವಿಚ್ಛೇದನ ದಂಪತಿಗೆ ಅನಾಥ ಮಕ್ಕಳನ್ನು ದತ್ತು ನೀಡಲು ತೆರೆಸಾ ಅನಾಥಾಶ್ರಮಗಳು ನಿರಾಕರಿಸಿವೆ ಎಂದಿದ್ದಾರೆ.

  ಸರ್ಕಾರ ರೂಪಿಸಿರುವ ನಿಯಮಾವಳಿಗಳ ಬಗ್ಗೆ ತೆರೆಸಾ ಮಿಷನರಿಗಳಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದೆ. ವಿವಾಹವಾಗದ ಮಹಿಳೆಯರಿಗೆ ದತ್ತು ನೀಡುವುದೂ ಸೇರಿ ಹಲವು ವಿಚಾರಗಳ ಬಗ್ಗೆ ಮಿಷನರಿಗಳ ಆಕ್ಷೇಪವಿದೆ. ಹೀಗಾಗಿ ಮಾನ್ಯತೆ ರದ್ದು ಮಾಡುವಂತೆ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ(Central Adoption Resource Authority) ಕ್ಕೆ ಮಿಷನರಿಗಳೇ ಅರ್ಜಿ ಸಲ್ಲಿಸಿವೆ ಎಂದು ಗಾಂಧಿ ಹೇಳಿದ್ದಾರೆ.

  ಮಕ್ಕಳನ್ನು ದತ್ತು ಪಡೆಯುವುದು ಹಾಗೂ ನೀಡುವುದಕ್ಕೆ ಸಂಬಂಧಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊಸ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಸಿಂಗಲ್ ಪೇರೆಂಟ್(ಅಪ್ಪ ಅಥವಾ ಅಮ್ಮ) ಗಳಿಗೂ ದತ್ತು ಸ್ವೀಕಾರ ಸಾಧ್ಯವಾಗಿದೆ. ಅದರೆ, ಇತ್ತೀಚೆಗೆ ಬಿಹಾರ್ ಹಾಗೂ ಅಸ್ಸಾಂ ಮೂಲಕ ಸಿಂಗಲ್ ಪೇರೆಂಟ್ ಗಳು ಮಿಷನರಿ ಆಫ್ ಚಾರಿಟಿಯಿಂದ ಮಕ್ಕಳನ್ನು ದತ್ತು ಪಡೆಯಲು ಬಯಸಿ, ವಿಫಲರಾಗಿದ್ದರು. ಈ ಬಗ್ಗೆ ಸಚಿವಾಲಯಕ್ಕೆ ದೂರು ನೀಡಿದ್ದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Missionaries of Charity has said it is closing down its adoption services in India over objections to the country's new adoption rules. From August 15 this year, the group founded by Nobel Laureate Mother Teresa 65 years has stopped giving children for adoption.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more