ಒಂದೇ ವೇದಿಕೆಯಲ್ಲಿ ಒಟ್ಟಿಗೆ ಪದವಿ ಪಡೆದ ಅಮ್ಮ-ಮಗ: IIT ಮದ್ರಾಸ್‌ನಲ್ಲಿ ಅಪರೂಪದ ದಾಖಲೆ ಬರೆದ ಜಿಗೀಷಾ-ಆದಿತ್ಯ

ದೊಡ್ಡ ದೊಡ್ಡ ಸಾಧನೆ ಅಂದರೆ ಬಾಹ್ಯಾಕಾಶ ನೌಕೆಗಳಲ್ಲಿ ಹಾರಾಟ ನಡೆಸಿದ ಗಗನಯಾತ್ರಿಗಳು, ಅಥವಾ ವಿಜ್ಞಾನಿಗಳನ್ನ ಮಾತ್ರವೇ ಜಗತ್ತು ನೆನಪಿಟ್ಟುಕೊಳ್ಳುತ್ತದೆ ಎಂದು ತಿಳಿದಿರುತ್ತೇವೆ. ಆದರೆ, ಪ್ರತಿಯೊಬ್ಬರು ಜೀವನದಲ್ಲಿ ಒಂದಲ್ಲಾ ಒಂದು ಸಾಧನೆ ಮಾಡಿರುತ್ತಾರೆ. ಆದರೆ ಸಾಧನೆಯ ಹಾದಿ ಮಾತ್ರ ವಿಭಿನ್ನವಾಗಿರತ್ತದೆ. ಶಿಕ್ಷಣ ಅಥವಾ ಓದಲು ಯಾವುದೇ ವಯಸ್ಸಿನ ಮಿತಿಯಿಲ್ಲ. ಹಾಗೆಯೇ ಮನಸ್ಸೊಂದಿದ್ದರೇ ಯಾವ ಸಂದರ್ಭಗಳು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಈ ತಾಯಿ ಮತ್ತು ಮಗನ ಸಾಧನೆಯೇ ಒಂದು ಒಳ್ಳೆಯ ಉದಾಹರಣೆ.

ದೇಶದ ಪ್ರತಿಷ್ಠಿತ ಸಂಸ್ಥೆಯಾದ ಐಐಟಿ ಮದ್ರಾಸ್‌ನಲ್ಲಿ ಒಂದೇ ದಿನ, ಒಂದೇ ವೇದಿಕೆಯಲ್ಲಿ ತಾಯಿ ಮತ್ತು ಮಗ ಒಟ್ಟಿಗೆ ಪದವಿ ಸ್ವೀಕರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಹೌದು, ಜಿಗೀಷಾ ಟೇಲರ್ ಮತ್ತು ಅವರ ಪುತ್ರ ಆದಿತ್ಯ ಕಾಪಡಿಯಾ ಈ ಅಪರೂಪದ ಸಾಧನೆ ಮಾಡಿದ ಅಮ್ಮ ಮಗನ ಜೋಡಿ ನೋಡಿ. ಐಐಟಿ ಮದ್ರಾಸ್ ಸಂಸ್ಥೆಯು ಆನ್‌ಲೈನ್ ಮೂಲಕ ಆಯೋಜಿಸಿದ್ದ 'ಡೇಟಾ ಸೈನ್ಸ್' ಪದವಿ ಕೋರ್ಸ್ ಅನ್ನು ಇಬ್ಬರೂ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಘಟಿಕೋತ್ಸವದಲ್ಲಿ ಒಟ್ಟಿಗೆ ಪದವಿ ಪ್ರಮಾಣಪತ್ರಗಳನ್ನ ಪಡೆದುಕೊಂಡಿದ್ದಾರೆ.

Mother

ಜಿಗೀಷಾ ಟೇಲರ್ ಅವರ ಶೈಕ್ಷಣಿಕ ಪಯಣ

ಹಿಂದೆ ಇಲೆಕ್ಟ್ರಾನಿಕ್ಸ್ ಶಿಕ್ಷಕಿಯಾಗಿದ್ದ ಜಿಗೀಷಾ ಟೇಲರ್ ಅವರು ಕುಟುಂಬದ ಜವಾಬ್ದಾರಿಗಳು ಹಾಗೂ ಮನೆ ನಿರ್ವಹಣೆಯ ಕಾರಣದಿಂದಾಗಿ ತಮ್ಮ ಉನ್ನತ ಶಿಕ್ಷಣಕ್ಕೆ ಅವರು ಕೆಲ ಕಾಲ ಬ್ರೇಕ್‌ ನೀಡಬೇಕಾಗಿ ಬಂತು. ಆದರೆ ಅವರಿಗೆ ಓದಿನ ಮೇಲಿದ್ದ ಆಸಕ್ತಿ ಹಾಗೂ ಕಲಿಯುವ ಹಂಬಲ ಎಂದಿಗೂ ಕಡಿಮೆಯಾಗಿರಲಿಲ್ಲ. ಸರಿಯಾದ ಸಮಯಕ್ಕೆ ಕಾಯುತ್ತಿದ್ದ ಅವರು, ಸಿಕ್ಕ ಅವಕಾಶವನ್ನಾ ಸರಿಯಾಗಿ ಬಳಸಿಕೊಂಡು, ತಮ್ಮ ಹಳೆಯ ಕನಸೊಂದನ್ನಾ ಈಡೇರಿಸಿಕೊಳ್ಳಲು ಅವರು ಮುಂದಾದ್ರು. ಐಐಟಿ ಮದ್ರಾಸ್ ಆರಂಭಿಸಿದ ಆನ್‌ಲೈನ್ ಡೇಟಾ ಸೈನ್ಸ್ ಕೋರ್ಸ್‌ಗೆ ಸೇರ್ಪಡೆಗೊಳ್ಳುವ ಮೂಲಕ ತಮ್ಮ ಶೈಕ್ಷಣಿಕ ಪಯಣವನ್ನ ಮತ್ತೆ ಆರಂಭಿಸಿದರು.

ಮತ್ತೊಂದೆಡೆ, ಜಿಗೀಷಾ ಅವರ ಪುತ್ರ ಆದಿತ್ಯ ಕಾಪಡಿಯಾ ಕರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ಈ ಕೋರ್ಸ್‌ಗೆ ನೋಂದಾಯಿಸಿಕೊಂಡಿದ್ದರು. ಆರಂಭದಲ್ಲಿ ಇಬ್ಬರೂ ಪ್ರತ್ಯೇಕವಾಗಿ ಅಧ್ಯಯನ ಮಾಡಲು ನಿರ್ಧರಿಸಿದ್ದರೂ, ದಿನಕಳೆದಂತೆ ಇಬ್ಬರೂ ಒಬ್ಬರಿಗೊಬ್ಬರು ಓದುವಾಗ ಸಹಾಯ ಮಾಡಲು ಶುರುಮಾಡಿದ್ರು.

ಕಠಿಣವಾದ ವಿಷಯಗಳು ಬಂದಾಗ ಪರಸ್ಪರ ಚರ್ಚಿಸುವುದು, ಗೊಂದಲಗಳನ್ನ ಬಗೆಹರಿಸಿಕೊಳ್ಳುವುದು ಹಾಗೂ ಪರೀಕ್ಷೆಯ ಸಮಯದಲ್ಲಿ ಒಬ್ಬರಿಗೊಬ್ಬರು ಪ್ರೇರಣೆಯಾಗಿ ನಿಲ್ಲುವುದು ಅಮ್ಮ ಮಗನಿಗೆ ಅಭ್ಯಾಸವಾಯಿತು. ಇಬ್ಬರೂ ಕೇವಲ ಓದಿದಲು ಪಾರ್ಟನರ್‌ ಮಾತ್ರವಲ್ಲದೆ, ಇಬ್ಬರ ಮಧ್ಯೆ ಆರೋಗ್ಯಕರ ಸ್ಪರ್ಧೆಯನ್ನ ಸಹ ಏರ್ಪಡಿಸಿಕೊಂಡು ಓದಲು ಶುರುಮಾಡಿದರು. ಈ ಸೌಹಾರ್ದಯುತ ಸ್ಪರ್ಧೆಯು ಇಬ್ಬರಲ್ಲೂ ಕಲಿಯುವ ಉತ್ಸಾಹವನ್ನು ಇಮ್ಮಡಿಗೊಳಿಸಿತು.

ತಾಯಿ ಮಗನ ಸಾಧನೆ

ಕುಟುಂಬದ ಜವಬ್ದಾರಿ ಹೆಚ್ಚಿದ್ದರೂ, ಜಿಗೀಷಾ ಅವರು ತಮ್ಮ ಅಧ್ಯಯನವನ್ನ ನಿರಂತರವಾಗಿ ಕಾಯ್ದುಕೊಂಡು ಬಂದರು. ಮಗ ಆದಿತ್ಯ ಕೂಡ ತಾಯಿಯ ಈ ನಿಷ್ಠೆ ಮತ್ತು ಕಠಿಣ ಪರಿಶ್ರಮವನ್ನಾ ಸ್ಪೂರ್ತಿಯಾಗಿ ತೆಗೆದುಕೊಂಡ. ದಿನನಿತ್ಯದ ಮನೆ ಕೆಲಸದ ನಡುವೆಯೂ ಕಷ್ಟಪಟ್ಟು ವ್ಯಾಸಂಗ ಮಾಡಿದ ಜಿಗೀಷಾ ಮತ್ತು ತಾಯಿಗೆ ಸಾಥ್ ನೀಡಿದ ಆದಿತ್ಯ, ಅಂತಿಮವಾಗಿ ಯಶಸ್ಸಿನ ದಡ ತಲುಪಿದ್ದಾರೆ ನೋಡಿ.

ಐಐಟಿ ಮದ್ರಾಸ್ ಸಂಸ್ಥೆಯ ಘಟಿಕೋತ್ಸವದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಾಯಿ ಮತ್ತು ಮಗ ಒಟ್ಟಿಗೆ ಪದವಿ ಸ್ವೀಕರಿಸಿದಾಗ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ, ಕಲಿಯುವ ಮನಸ್ಸಿದ್ದರೆ ಯಾವುದೇ ಹಂತದಲ್ಲಾದರೂ ಯಶಸ್ಸು ಗಳಿಸಬಹುದು ಎಂಬುದನ್ನು ನಿರೂಪಿಸಿದ ಈ ತಾಯಿ ಮಗನ ಸಾಧನೆ ಎಲ್ಲರಿಗೂ ಮಾದರಿ ಎನ್ನಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+