ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

18-44 ವರ್ಷದ 3.04 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ

|
Google Oneindia Kannada News

ದೇಶದಲ್ಲಿ ಒಟ್ಟಾರೆ ಕೋವಿಡ್-19 ಲಸಿಕೆ ನೀಡಿಕೆ ವ್ಯಾಪ್ತಿ ಇಂದು ರಾತ್ರಿ 7 ಗಂಟೆವರೆಗೆ ಲಭ್ಯವಿರುವ ಪ್ರಾಥಮಿಕ ಮಾಹಿತಿ ಪ್ರಕಾರ, 23.59 (23,59,39,165) ಕೋಟಿ ದಾಟಿದೆ.

ಜೂನ್ 07ರಂದು 18 ರಿಂದ 44 ವರ್ಷದೊಳಗಿನ 16,07,531 ಫಲಾನುಭವಿಗಳಿಗೆ ಮೊದಲ ಡೋಸ್ ಮತ್ತು ಅದೇ ವಯೋಮಾನದ 68,661 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಒಟ್ಟಾರೆ 3ನೇ ಹಂತದ ಕೋವಿಡ್ ಲಸಿಕಾ ಅಭಿಯಾನ ಆರಂಭವಾದ ನಂತರ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 3,02,45,100 ಮಂದಿಗೆ ಮೊದಲ ಡೋಸ್ ಮತ್ತು 2,37,107 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಬಿಹಾರ, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ 18ರಿಂದ 44 ವರ್ಷ ವಯೋಮಾನದ ಸುಮಾರು 1ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ ಮೊದಲನೇ ಡೋಸ್ ಲಸಿಕೆ ಹಾಕಲಾಗಿದೆ.

ಒಟ್ಟಾರೆ 23,59,39,165 ಮಂದಿ ಲಸಿಕೆ ಪಡೆದಿದ್ದು, ಅವರಲ್ಲಿ 99,81,949ಆರೋಗ್ಯ ಕಾರ್ಯಕರ್ತರಿಗೆ(ಎಚ್ ಸಿಡಬ್ಲ್ಯೂ) ಮೊದಲ ಡೋಸ್ ಮತ್ತು 68,76,906 ಎಚ್ ಸಿಡಬ್ಲ್ಯೂ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ, 1,62,99,343 ಮುಂಚೂಣಿ ಕಾರ್ಯಕರ್ತರು(ಎಫ್ಎಲ್ ಡಬ್ಲ್ಯೂಎಸ್) (1ನೇ ಡೋಸ್), 86,96,391(ಎಫ್ಎಲ್ ಡಬ್ಲ್ಯೂಎಸ್) (2ನೇ ಡೋಸ್), 18 ರಿಂದ 44 ವಯೋಮಾನದ 3,02,45,100 ಮಂದಿಗೆ(1ನೇ ಡೋಸ್) ಮತ್ತು 18 ರಿಂದ 44 ವಯೋಮಾನದ 2,37,107 ಮಂದಿಗೆ(2ನೇ ಡೋಸ್) ಲಸಿಕೆ ನೀಡಲಾಗಿದೆ. 45 ವರ್ಷ ಮೇಲ್ಪಟ್ಟ 60 ವರ್ಷದೊಳಗಿನ 7,18,38,338 ಮಂದಿಗೆ(1ನೇ ಡೋಸ್) 45 ವರ್ಷದಿಂದ 60 ವರ್ಷದೊಳಗಿನ 1,14,36,520 ಮಂದಿಗೆ (2ನೇ ಡೋಸ್) ಹಾಗೂ 60 ವರ್ಷ ಮೇಲ್ಪಟ್ಟ 6,09,90,200 ಜನರಿಗೆ (1ನೇ ಡೋಸ್) ಮತ್ತು 1,93,37,311 (2ನೇ ಡೋಸ್) ಲಸಿಕೆ ನೀಡಲಾಗಿದೆ.

More than 3.04 Cr beneficiaries of age group 18-44 Vaccinated

ಲಸಿಕಾ ಅಭಿಯಾನದ 143ನೇ ದಿನವಾದ ಜೂನ್ 07ರಂದು ಒಟ್ಟು 31,04,989 ಡೋಸ್ ಲಸಿಕೆಯನ್ನು ಹಾಕಲಾಗಿದೆ. ಸಂಜೆ 7 ಗಂಟೆಯವರೆಗೆ ಲಭ್ಯವಿರುವ ಪ್ರಾಥಮಿಕ ವರದಿಗಳ ಪ್ರಕಾರ 27,97,493 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 3,07,496 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.

English summary
The cumulative number of COVID-19 vaccine doses administered in the country exceeded 23.59 Cr (23,59,39,165) as per the 7 pm provisional report as on Jun 7
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X