ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2014-16ರ ಮಧ್ಯೆ ದೇಶದಲ್ಲಿ ಲಕ್ಷಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣ

|
Google Oneindia Kannada News

ನವದೆಹಲಿ, ಜುಲೈ 18: ಭಾರತ ವಿಶ್ವಗುರು, ನಾಗರಿಕತೆ ಉದಯವಾದ ಅತ್ಯಂತ ಹಳೆಯ ದೇಶ ಎಂದೆಲ್ಲ ಹೇಳಿಕೊಳ್ಳುವುದಕ್ಕೆ ನಾಚಿಕೆ ಆಗುವಂಥ ಅಂಕಿ-ಅಂಶವನ್ನು ಕೇಂದ್ರ ಸಚಿವ ಕಿರೇನ್ ರಿಜಿಜು ಬಹಿರಂಗ ಪಡಿಸಿದ್ದಾರೆ. 2014-16ರ ಮಧ್ಯೆ ದೇಶದಲ್ಲಿ 1,10,333 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆಯಂತೆ.

ಈ ವಿಚಾರವನ್ನು ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದ ಆವರು, ಯಾವ ಇಸವಿಯಲ್ಲಿ ಎಷ್ಟು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂಬ ಆಘಾತಕಾರಿ ಅಂಕಿಯನ್ನು ಸಹ ಮುಂದಿಟ್ಟಿದ್ದಾರೆ. 2016ನೇ ಇಸವಿಯಲ್ಲಿ 38,947 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ, 2015ರಲ್ಲಿ ಆ ಸಂಖ್ಯೆ 34,651. ಇನ್ನು 2014ರಲ್ಲಿ 36,735 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.

More than 1 lakh rape cases registered in India between 2014 to 2016

ವಿಶ್ವದಲ್ಲೇ ಮಹಿಳೆಯರಿಗೆ ಭಾರತ ಅತ್ಯಂತ ಅಪಾಯಕಾರಿ ದೇಶವಿಶ್ವದಲ್ಲೇ ಮಹಿಳೆಯರಿಗೆ ಭಾರತ ಅತ್ಯಂತ ಅಪಾಯಕಾರಿ ದೇಶ

ಇನ್ನು ಮಹಿಳೆಯರ ವಿರುದ್ಧ ನಡೆದ ಅಪರಾಧ ಕೃತಗಳ ಸಂಖ್ಯೆ ಮತ್ತೂ ಬೆಚ್ಚಿ ಬೀಳಿಸುವಂತಿದೆ. 2016ನೇ ಇಸವಿಯಲ್ಲಿ ಮಹಿಳೆಯರ ವಿರುದ್ಧ ನಡೆದ ಅಪರಾಧ ಕೃತ್ಯಗಳ ಸಂಖ್ಯೆ 3,38,954. 2015ರಲ್ಲಿ 3,29,243 ದಾಖಲಾಗಿದೆ. 2014ನೇ ಇಸವಿಯಲ್ಲಿ 3,39,457 ಪ್ರಕರಣಗಳು ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯದ್ದಾಗಿವೆ.

ಈ ಬಗ್ಗೆ ಮಾಹಿತಿಯನ್ನು ಕಿರೇನ್ ರಿಜಿಜು ಲಿಖಿತ ಉತ್ತರದಲ್ಲಿ ನೀಡಿದ್ದಾರೆ.

English summary
As many as 1,10,333 cases of rape were registered in the country between 2014-16, Union Minister Kiren Rijiju said today in Rajyasabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X