India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಡೆಲ್ಟಾ' ರೂಪಾಂತರಿಯಿಂದ ಕೋವಿಡ್ 19 ಪ್ರಸರಣ ಪ್ರಮಾಣ ಅಧಿಕ

|
Google Oneindia Kannada News

ನವದೆಹಲಿ, ಜೂನ್ 04: ಭಾರತದಲ್ಲಿ ಮೊದಲು ಕಂಡುಬಂದ ಕೋವಿಡ್ ರೂಪಾಂತರಿ ಡೆಲ್ಟಾ ಹೆಚ್ಚು ಸಾಂಕ್ರಾಮಿಕ ಎಂದು ಅಧ್ಯಯನ ಒಂದು ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಕೂಡ ಡೆಲ್ಟಾ ರೂಪಾಂತರ ವೈರಸ್ ಅತ್ಯಂತ ಕಳವಳಕಾರಿಯಾಗಿದೆ ಎಂದು ಹೇಳಿದ್ದು, ಉಳಿದೆರೆಡು ತಳಿಗಳು ಅಷ್ಟು ಅಪಾಯಕಾರಿಯಲ್ಲ ಎಂದು ಕೂಡ ಹೇಳಿತ್ತು.

ಭಾರತದಲ್ಲಿ ಪ್ರತಿ ಗಂಟೆಗೆ 1 ಲಕ್ಷಕ್ಕಿಂತ ಹೆಚ್ಚು ಜನರಿಗೆ ಕೊರೊನಾ ಲಸಿಕೆಭಾರತದಲ್ಲಿ ಪ್ರತಿ ಗಂಟೆಗೆ 1 ಲಕ್ಷಕ್ಕಿಂತ ಹೆಚ್ಚು ಜನರಿಗೆ ಕೊರೊನಾ ಲಸಿಕೆ

ಭಾರತದಲ್ಲಿ ಏಕಾಏಕಿ ಕೋವಿಡ್ ಸ್ಫೋಟಕ್ಕೆ ಕಾರಣವೆಂದು ಹೇಳಲಾದ ವೈರಸ್‌ನ ಬಿ.1.617 ರೂಪಾಂತರವು ಮೂರು ವಂಶಾವಳಿಗಳಾಗಿ ವಿಂಗಡಣೆ ಆಗಿರುವುದರಿಂದ ಅದನ್ನು ಟ್ರಿಪಲ್ ರೂಪಾಂತರಿ ವೈರಸ್ ಎಂದು ಕರೆಯುತ್ತೇವೆ.

ಕಳೆದ ತಿಂಗಳು ಎಲ್ಲಾ ರೂಪಾಂತರಿ ವೈರಸ್‌ಗಳು ಕಳವಳಕಾರಿ ಎಂದು ಘೋಷಿಸಿದ್ದ ವಿಶ್ವ ಆರೋಗ್ಯ ಸಂಸ್ಥೆ ಉಪ ವಂಶಾವಳಿಗಳಲ್ಲಿ ಒಂದು ಮಾತ್ರ ಆ ಲೇಬಲ್‌ಗೆ ಅರ್ಹವಾಗಿದೆ ಎಂದು ಹೇಳಲಾಗಿತ್ತು.

ಹೆಚ್ಚಿನ ಸಾರ್ವಜನಿಕ ಆರೋಗ್ಯ ಅಪಾಯಗಳು ಪ್ರಸ್ತುತ B.1.617 ರೂಪಾಂತರಿಯಿಂದ ಆಗುತ್ತಿವೆ ಎನ್ನುವುದು ಈಗ ಸ್ಪಷ್ಟವಾಗಿದೆ. ಆದರೆ, ಇತರೆ ವಂಶವಾಹಿಗಳ ಪ್ರಸರಣದ ದರ ಕಡಿಮೆ ಇರುವುದನ್ನು ಗಮನಿಸಲಾಗಿದೆ.

ಬಿ.1.617 ರೂಪಾಂತರವು ಕಳವಳಕಾರಿ ವೈರಸ್ ಆಗಿ ಉಳಿದಿದೆ, ಜೊತೆಗೆ ವೈರಸ್‌ನ ಇತರೆ ಮೂರು ರೂಪಾಂತರಗಳು ಮೂಲ ಆವೃತ್ತಿಗೆ ಹೋಲಿಸಿದರೆ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಏಕೆಂದರೆ ಅವುಗಳು ಹೆಚ್ಚು ಹರಡುವ , ಕೆಲವು ಲಸಿಕೆ ರಕ್ಷಣೆಗಳನ್ನು ಮೀರಿ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ.

ಆಲ್ಫಾಗಿಂತ ಶೇ.50ರಷ್ಟು ಡೆಲ್ಟಾ ಅಪಾಯಕಾರಿಯಾಗಿದೆ, ದೆಹಲಿ, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ಒಡಿಶಾ, ತೆಲಂಗಾಣದಲ್ಲಿ ಹೆಚ್ಚು ಡೆಲ್ಟಾ ರೂಪಾಂತರಿ ಕಂಡುಬಂದಿದೆ.

English summary
The coronavirus variant first found in India, or the Delta variant, is behind the second surge of Covid in the country, a government study has found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X