'ಮೂಡ್ ಆಫ್ ದಿ ನೇಷನ್' ಸಮೀಕ್ಷೆ: ಕುಸಿಯುತ್ತಿದೆಯಾ ಬಿಜೆಪಿ ಜನಪ್ರಿಯತೆ?

Subscribe to Oneindia Kannada

ನವದೆಹಲಿ, ಫೆಬ್ರವರಿ 14: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂದು ಎರಡನೇ ಹಂತದ ಲೋಕನೀತಿ-ಸಿಎಸ್ ಡಿಎಸ್-ಎಬಿಪಿ ನ್ಯೂಸ್ 'ಮೂಡ್ ಆಫ್ ದಿ ನೇಷನ್ ಸಮೀಕ್ಷೆ- 2018' ಹೇಳಿದೆ.

2018ರ ಜನವರಿ 7ರಿಂದ ಜನವರಿ 20ರ ನಡುವೆ ಈ ಸಮೀಕ್ಷೆ ನಡೆಸಲಾಗಿದೆ. 19 ರಾಜ್ಯಗಳಲ್ಲಿ, 175 ಲೋಕಸಭೆ ಕ್ಷೇತ್ರಗಳಲ್ಲಿ, 700 ಮತಗಟ್ಟೆಗಳ 14,336 ಜನರಿಂದ ಮಾಹಿತಿ ಕಲೆ ಹಾಕಿ ಈ ಸಮೀಕ್ಷೆ ನಡೆಸಲಾಗಿದೆ.

ಸಮೀಕ್ಷೆ : ಭಾರತದಲ್ಲಿ ಬಿಜೆಪಿ ಜನಪ್ರಿಯತೆ ಕುಸಿಯುತ್ತಿದೆಯಂತೆ!

ತಕ್ಷಣಕ್ಕೆ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿಗೆ ಶೇಕಡಾ 34 ಮತಗಳು ಬೀಳಲಿವೆ ಎಂದು ಸಮೀಕ್ಷೆ ಹೇಳಿದೆ. 2014ರಲ್ಲಿ ಬಿಜೆಪಿ ಗಳಿಸಿದ ಮತಗಳಿಗೆ ಹೋಲಿಸಿದರೆ ಇದು ಶೇಕಡಾ 3 ರಷ್ಟು ಹೆಚ್ಚಾಗಿದೆ. ಆದರೆ 2017ರ ಮೇ ನಲ್ಲಿ ನಡೆಸಿದ ಮೂಡ್ ಆಫ್ ನೇಷನ್ ಸಮೀಕ್ಷೆಗೆ ಹೋಲಿಸಿದರೆ ದೇಶದಲ್ಲಿ ಮೋದಿ ಜನಪ್ರಿಯತೆ ಕುಸಿತ ಕಂಡಿದೆ.

ಸಮೀಕ್ಷೆ: ರಾಹುಲ್ ಮುಗುಳು ನಗೆ, ಅಂತಿಮ ನಗೆ ಮೋದಿಯದ್ದು

ಕುಸಿದ ಮೋದಿ ಜನಪ್ರಿಯತೆ

ಕುಸಿದ ಮೋದಿ ಜನಪ್ರಿಯತೆ

2017ರ ಸಮೀಕ್ಷೆಯಲ್ಲಿ ಬಿಜೆಪಿಗೆ ಶೇಕಡಾ 39ರಷ್ಟು ಮತಗಳು ಬಿದ್ದಿತ್ತು. ಒಂದು ವರ್ಷದ ಒಳಗೆ ಶೇಕಡಾ 5ರಷ್ಟು ಮತಗಳನ್ನು ಬಿಜೆಪಿ ಕಳೆದುಕೊಂಡಿದೆ.

ಬಿಜೆಪಿ ಮಿತ್ರ ಪಕ್ಷಗಳ ವಿಚಾರಕ್ಕೆ ಬಂದರೆ ಜನರ ಭಾವನೆ ಬದಲಾಗಿಲ್ಲ. 2017ರ ಮೇನಲ್ಲಿಯೂ ಮಿತ್ರ ಪಕ್ಷಗಳಿಗೆ ಶೇಕಡಾ 6ರಷ್ಟು ಜನರು ಬೆಂಬಲ ಸೂಚಿಸಿದ್ದರು. 2018ರ ಜನವರಿಯಲ್ಲೂ ಇದೇ ಜನಪ್ರಿಯತೆಯನ್ನು ಮಿತ್ರಪಕ್ಷಗಳು ಉಳಿಸಿಕೊಂಡಿವೆ. ಶಿವಸೇನೆ, ಶಿರೋಮಣಿ ಅಕಾಲಿದಳ, ಟಿಡಿಪಿ, ಎಲ್ ಜೆಪಿ, ಜೆಡಿಯು ಮತ್ತು ಇನ್ನಿತರ ಹಲವು ಪಕ್ಷಗಳು ಬಿಜೆಪಿ ಮಿತ್ರಪಕ್ಷಗಳಲ್ಲಿ ಸೇರಿವೆ.

ಹೆಚ್ಚಾದ ಕಾಂಗ್ರೆಸ್ ಜನಪ್ರಿಯತೆ

ಹೆಚ್ಚಾದ ಕಾಂಗ್ರೆಸ್ ಜನಪ್ರಿಯತೆ

ಇದೇ ವೇಳೆ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಜನಪ್ರಿಯತೆ ಹೆಚ್ಚಾಗಿರುವುದು ಮೂಡ್ ಆಫ್ ದಿ ನೇಷನ್ ಸರ್ವೆಯಲ್ಲಿ ದಾಖಲಾಗಿದೆ. 2017ರ ಮೇನಲ್ಲಿ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಶೇಕಡಾ 21ರಷ್ಟು ಜನರು ಬೆಂಬಲ ಸೂಚಿಸಿದ್ದರು. ಈ ಪ್ರಮಾಣ 2018ರ ಜನವರಿ ಹೊತ್ತಿಗೆ ಶೇಕಡಾ 25ಕ್ಕೆ ಏರಿಕೆಯಾಗಿದೆ. ಇದು 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ ಶೇಕಡಾ 19.31 ಮತ ಗಳಿಕೆಗಿಂತ ತೀರಾ ಹೆಚ್ಚು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಕುಸಿದ ಕಾಂಗ್ರೆಸ್ ಮಿತ್ರ ಪಕ್ಷಗಳ ಮತ

ಕುಸಿದ ಕಾಂಗ್ರೆಸ್ ಮಿತ್ರ ಪಕ್ಷಗಳ ಮತ

ಕಾಂಗ್ರೆಸ್ ಮತಗಳಿಕೆ ಹೆಚ್ಚಿದ್ದರೂ ಮಿತ್ರ ಪಕ್ಷಗಳ ಮತಗಳಿಕೆಯಲ್ಲಿ ಅಲ್ಪ ಇಳಿಕೆಯಾಗಿದೆ. 2017ರ ಮೇನಿಂದ 2018ರ ಜನವರಿ ಹೊತ್ತಿಗೆ ಕಾಂಗ್ರೆಸ್ ಮಿತ್ರ ಪಕ್ಷಗಳು ಶೇಕಡಾ 1 ಮತಗಳನ್ನು ಕಳೆದುಕೊಂಡು, ತಕ್ಷಣ ಚುನಾವಣೆ ನಡೆದರೆ ಶೇಕಡಾ 5 ಮತಗಳನ್ನು ಪಡೆಯಲಿವೆ.

ಆರ್ ಜೆಡಿ, ಎನ್ ಸಿಪಿ, ಡಿಎಂಕೆ, ಎಂಎಂಕೆ, ಜೆಎಂಎಂ, ಮುಸ್ಲಿಂ ಲೀಗ್ ಮತ್ತು ಇತರ ಪಕ್ಷಗಳು ಕಾಂಗ್ರೆಸ್ ಮಿತ್ರ ಪಕ್ಷಗಳಲ್ಲಿ ಸೇರಿವೆ.

ಉಳಿದವರ ಆಟವೇ ಹೆಚ್ಚು

ಉಳಿದವರ ಆಟವೇ ಹೆಚ್ಚು

ಬಿಜೆಪಿ ಮತ್ತು ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ಕತೆ ಹೀಗಾದರೆ ಉಳಿದವರು ದೇಶದಲ್ಲಿ ಶೇಕಡಾ 30 ಮತಗಳನ್ನು ಹಂಚಿಕೊಂಡಿದ್ದಾರೆ. ಬಿಎಸ್ಪಿ ಮತ್ತು ಎಡಪಕ್ಷಗಳು ತಲಾ ಶೇಕಡಾ 3 ಮತಗಳಿಸಲಿವೆ. ಇವುಗಳ ಮತಗಳಿಕೆಯಲ್ಲಿ ಕಳೆದ ಒಂದು ವರ್ಷಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಇನ್ನು ಎಸ್ಪಿ, ತೃಣಮೂಲ ಕಾಂಗ್ರೆಸ್, ಎಐಎಡಿಎಂಕೆ, ಬಿಜೆಪಿ, ಜೆಡಿಎಸ್, ಟಿಆರ್ ಎಸ್, ಎಎಪಿ ಗಳನ್ನು ಒಳಗೊಂಡ ಇತರ ಪಕ್ಷಗಳ ಮತಗಳಿಕೆ 2017ರ ಮೇ ಶೇಕಡಾ 22 ರಿಂದ 2018ರ ಜನವರಿ ಹೊತ್ತಿಗೆ ಶೇ. 24ಕ್ಕೆ ಏರಿಕೆಯಾಗಿದೆ.

ಸೂಚನೆ: ಈ ಸಮೀಕ್ಷೆಯನ್ನು ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಗೋವಾ, ಸಿಕ್ಕಿಂ, ಅರುಣಾಚಲ ಪ್ರದೇಶ, ನಾಗಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ ಮತ್ತು ಮೇಘಾಲಯದಲ್ಲಿ ನಡೆಸಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
ABP News-Lokniti-CSDS ‘Mood of the Nation Survey 2018’: The survey has found that in the event of a snap Lok Sabha election in the country today, the BJP would in all likelihood secure about 34% of the total votes. While this estimated vote share is three percentage points higher than what the BJP had got in the Lok Sabha election of 2014, it is, quite significantly, five points less compared to May 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ