Monsoon Update: ಮುಂದುವರಿದ ಮುಂಗಾರು- ಕರ್ನಾಟಕ, ಕೇರಳ, ತಮಿಳುನಾಡಿನ ಈ ಪ್ರದೇಶಗಳಲ್ಲಿ ಮಳೆ ನಿರೀಕ್ಷೆ
ನವದೆಹಲಿ, ಅಕ್ಟೋಬರ್ 02: ಭಾರತದಾದ್ಯಂತ ಮುಂಗಾರು ಮಳೆ ಮುಂದುವರಿದಿದೆ. ಇದು ಅಕ್ಟೋಬರ್ 08 ರವರೆಗೆ ಇರುವ ಸಾಧ್ಯತೆ ಇದೆ. ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮಳೆಯ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮುಂದಿನ 48 ಗಂಟೆಗಳಲ್ಲಿ ಮಳೆ ನಿರೀಕ್ಷೆ
ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಪುದುಚೇರಿಗಳ ಒಳನಾಡಿನಲ್ಲಿ ಚದುರಿದ ತುಂತುರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಉತ್ತರ ಛತ್ತೀಸ್‌ಗಢ, ಉತ್ತರ ಒಡಿಶಾ, ಜಾರ್ಖಂಡ್ ಮತ್ತು ಪಶ್ಚಿಮ ಬಿಹಾರದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಅಸ್ಸಾಂ, ಮೇಘಾಲಯ, ಉಪ-ಹಿಮಾಲಯದ ಪಶ್ಚಿಮ ಬಂಗಾಳ, ಸಿಕ್ಕಿಂ, ಪೂರ್ವ ಉತ್ತರ ಪ್ರದೇಶ ಮತ್ತು ಪೂರ್ವ ಮಧ್ಯಪ್ರದೇಶದ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗಬಹುದು ಎಂದು ಐಎಂಡಿ ಹೇಳಿದೆ.
ಒಡಿಶಾ, ಜಾರ್ಖಂಡ್, ಬಿಹಾರ, ಕೇರಳ, ಮಾಹೆ ಮತ್ತು ಲಕ್ಷದ್ವೀಪಗಳಲ್ಲಿ ವ್ಯಾಪಕ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಛತ್ತೀಸ್‌ಗಢ ಮತ್ತು ಕರಾವಳಿ ಕರ್ನಾಟಕದಲ್ಲಿ ಗುಡುಗು ಸಹಿತ ಮಳೆಯಾಗಬಹುದು.
ಅರುಣಾಚಲ ಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಲಡಾಖ್, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್‌ನ ಪ್ರದೇಶಗಲ್ಲಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕರ್ನಾಟಕದಲ್ಲಿ ನಿನ್ನೆ ಸುರಿದ ಮಳೆ ಪ್ರಮಾಣ
ದಕ್ಷಿಣ ಕನ್ನಡ: 149.5 ಮಿ.ಮೀ
ಉಡುಪಿ: 118.5 ಮಿ.ಮೀ
ಕೊಡಗು: 107 ಮಿ.ಮೀ
ಚಿಕ್ಕಮಗಳೂರು: 105.5 ಮಿ.ಮೀ
ಬೆಳಗಾವಿ: 96 ಮಿ.ಮೀ
ಉತ್ತರ ಕನ್ನಡ: 89.5 ಮಿ.ಮೀ
ಹಾಸನ: 76 ಮಿ.ಮೀ
ಶಿವಮೊಗ್ಗ: 52.5 ಮಿ.ಮೀ

ಅತಿ ಹೆಚ್ಚು ಮಳೆ ಬಿದ್ದ ಸ್ಥಳಗಳು
ಮಂಚಿ, ದಕ್ಷಿಣ ಕನ್ನಡ: 149.5 ಮಿ.ಮೀ
ಬೆಳಾಲು, ದಕ್ಷಿಣ ಕನ್ನಡ: 147 ಮಿ.ಮೀ
ತೆಕ್ಕಾರು, ದಕ್ಷಿಣ ಕನ್ನಡ: 145 ಮಿ.ಮೀ
ಬಾಳ್ತಿಲ, ದಕ್ಷಿಣ ಕನ್ನಡ: 122 ಮಿ.ಮೀ
ಹಳ್ಳಿಹೊಳೆ, ಉಡುಪಿ: 118.5 ಮಿ.ಮೀ
ವಿರಾಜಪೇಟೆ, ಕೊಡಗು: 107 ಮಿ.ಮೀ
ಬಂಕಲ್, ಚಿಕ್ಕಮಗಳೂರು: 105.5 ಮಿ.ಮೀ
ಕ್ಯಾಮನಹಳ್ಳಿ, ಹಾಸನ: 76 ಮಿ.ಮೀ
ಕೇರಳದಲ್ಲಿ ಯೆಲ್ಲೋ ಅಲರ್ಟ್
ಕೇರಳವು ಭಾರೀ ಮಳೆ ಸುರಿಯುತ್ತಿದೆ. ಇದು ಮುಂದಿನ ಕೆಲ ದಿನಗಳ ಕಾಲ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಪತ್ತನಂತಿಟ್ಟ, ಆಲಪ್ಪುಳ ಮತ್ತು ಎರ್ನಾಕುಲಂ ಜಿಲ್ಲೆಗಳಿಗೆ ಭಾರಿ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಮೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.
ಕೇರಳದ ಬಹುತೇಕ ಸ್ಥಳಗಳಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಭಾನುವಾರ, ಕೊಟ್ಟಾಯಂ ಜಿಲ್ಲೆಯ ವೈಕೋಮ್ ಮತ್ತು ಕಣ್ಣೂರು ಜಿಲ್ಲೆಯ ಇರಕ್ಕೂರ್ ಮತ್ತು ತಳಿಪರಂಬದಲ್ಲಿ 13 ಸೆಂ.ಮೀ ಭಾರೀ ಮಳೆಯಾಗಿದೆ.
ಆಲಪ್ಪುಳ ಜಿಲ್ಲೆಯ ಥೈಕಟ್ಟುಸ್ಸೆರಿಯಲ್ಲಿ 11 ಸೆಂ.ಮೀ ಮಳೆ ದಾಖಲಾಗಿದ್ದರೆ, ಕೊಲ್ಲಂ ಜಿಲ್ಲೆಯ ಆರ್ಯಂಕವು, ಆಲಪ್ಪುಳ ಜಿಲ್ಲೆಯ ಚೇರ್ತಲ ಮತ್ತು ಇಡುಕ್ಕಿ ಜಿಲ್ಲೆಯ ಪೀರುಮೇಡು ಪ್ರತಿ 10 ಸೆಂ.ಮೀ ಮಳೆಯಾಗಿದೆ.
ಎರ್ನಾಕುಲಂ ಜಿಲ್ಲೆಯ ಪಿರವಂ ಮತ್ತು ಓಡಕಲಿಗಳಲ್ಲಿ ತಲಾ 9 ಸೆಂ.ಮೀ, ಆಲುವಾ ( ಎರ್ನಾಕುಲಂ ಜಿಲ್ಲೆ), ನಿಲಂಬೂರ್ ( ಮಲಪ್ಪುರಂ ಜಿಲ್ಲೆ ), ವೈತಿರಿ ( ವಯನಾಡ್ ಜಿಲ್ಲೆ ), ಪಿರಪ್ಪನ್‌ಕೋಡ್ ( ತಿರುವನಂತಪುರ ಜಿಲ್ಲೆ ), ವಿಲಂಗಾಡ್ ( ಕೋಜಿಕೋಡ್ ಜಿಲ್ಲೆ ) ಭಾರಿ ಮಳೆಯನ್ನು ದಾಖಲಿಸಿದ ಇತರ ಸ್ಥಳಗಳಾಗಿವೆ.
ಹವಾಮಾನ ಇಲಾಖೆ ಪ್ರಕಾರ, ಅಕ್ಟೋಬರ್ 8 ರ ವರೆಗೆ ಕೇರಳದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆ ಮುಂದುವರಿಯುತ್ತದೆ.












Click it and Unblock the Notifications