Monsoon 2025: ನೈಋತ್ಯ ಮುಂಗಾರು ಕೇರಳ ಪ್ರವೇಶಿಸಲು ಕ್ಷಣಗಣನೆ, ಮೇ 27ರಿಂದ ಹೊಸ ಮಳೆ ಅಬ್ಬರ
Southwest Monsoon 2025: ನೈಋತ್ಯ ಮುಂಗಾರು ಋತು ಆರಂಭಕ್ಕೆ ದಿನಗಣನೇ ಶುರುವಾಗಿದೆ. ಜೂನ್ 1ರ ಬದಲಾಗಿ ಅವಧಿಗೂ 05 ದಿನಗಳ ಮೊದಲೇ ಮುಂಗಾರು ಮಳೆ ಸುರಿಸುವ ಮಾರುತಗಳು ಭಾರತ ಪ್ರವೇಶಿಸಲಿವೆ. ಪ್ರವೇಶಿಸಿದ ಎರಡರಿಂದ ಮೂರು ದಿನಗಳಲ್ಲಿ ಭಾರತದಲ್ಲಿ ಸಕ್ರಿಯವಾಗಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹೌದು, ಅವಧಿಗೂ ಮೊದಲೇ ಅಂದರೆ, ಕೇರಳವನ್ನು ಮೇ 25 ರಂದು ನಾಳೆ (ಭಾನುವಾರ) ನೈಋತ್ಯ ಮುಂಗಾರು ಮಾರುತಗಳು ಆಗಮಿಸಲಿವೆ. ಮುಂದಿನ ಎರಡರಿಂದ ಮೂರು ದಿನಗಳಲ್ಲಿ ಹಾಲಿ ಅಬ್ಬರಿಸುತ್ತಿರುವ ಪೂರ್ವ ಮುಂಗಾರು ಮಳೆ ಕೊನೆಯಾಗುವ ಸಾಧ್ಯತೆ ಇದೆ. ಸದ್ಯ ಮುಂಗಾರಿನ ಆರಂಭಕ್ಕೆ ವಾತಾವರಣದಲ್ಲಿ ಸೂಕ್ತ ಹಾಗೂ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅವಧಿಗೂ ಮೊದಲೇ ಮುಂಗಾರು ಶುರು
ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿ ಸೇರಿದಂತೆ ವಿವಿಧೆಡೆ ಉಂಟಾಗಿರುವ ಚಂಡಮಾರುತದ ಪ್ರಸರಣದಂತಹ ವೈಪರೀತ್ಯಗಳು ನೈಋತ್ಯ ಮಾನ್ಸೂನ್ಸ್ ಆಗಮನಕ್ಕೆ ಪೂರಕವಾಗಿವೆ. ಈ ವರ್ಷದ ಮೇ 27 ರರಂದು ಮುಂಗಾರಿನ ಆರಂಭದ ದಿನವಾಗಿದೆ. ಜೂನ್ 1ರಿಂದ ಸೆಪ್ಟಂಬರ್ 30 ನೈಋತ್ಯ ಮುಂಗಾರು ಮಳೆ ಅವಧಿ ಆಗಿದೆ. ಕೆಲವೊಮ್ಮೆ ಜೂನ್ ಮೊದಲ ವಾರ, ಇಲ್ಲವೇ ಎರಡನೇ ವಾರ ಮುಂಗಾರು ಮಾರುತಗಳು ಆಗಮಿಸಿದ್ದನ್ನು ನೋಡಬಹುದು.
ಕಳೆದ ಎರಡು ವರ್ಷದಿಂದ ಪೂರ್ವ ಮುಂಗಾರು ಮಳೆ ಅವಧಿಗೂ ಮೊದಲು ಆಗಮಿಸುತ್ತಿದೆ. 2024ರಲ್ಲಿ ಮೇ 30 ರಂದು ನೈಋತ್ಯ ಮುಂಗಾರು ಮಳೆ ಕೇರಳ ಪ್ರವೇಶಿಸಿತ್ತು. ಈ ಭಾರಿ ಮೆ 25ರಂದು ಬರಲಿದೆ. ಅವಧಿಗೂ ಐದು ದಿನ ಮೊದಲೇ ಮುಂಗಾರು ಮಾರುತಗಳು ಆಗಮಿಸಲಿವೆ ಎಂದು ಹವಾಮಾನ ತಜ್ಞರು ಖಚಿತಪಡಿಸಿದ್ದಾರೆ.

ಮುಂಗಾರಿನಲ್ಲಿ ವಾರ್ಷಿಕ 70% ರಷ್ಟು ಮಳೆ ದಾಖಲು
ಭಾರತದ ಕೃಷಿ, ಆರ್ಥಿಕತೆಗೆ, ಜನಜೀವನ ಸುಧಾರಣೆಗೆ ಮುಂಗಾರು ಮಳೆಯ ಪಾತ್ರ ದೊಡ್ಡದಿದೆ. ಆಹಾರ ಸರಬರಾಜಿನ ಮೇಲೂ ನಿರ್ಣಾಯಕ ಪಾತ್ರ ವಹಿಸುವ ಈ ಮಳೆಯು ವಾರ್ಷಿಕ ಮಳೆಯ ಸುಮಾರು 70ರಷ್ಟು ಮಳೆಯನ್ನು ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಸುರಿಸುತ್ತದೆ. ನೀರಾವರಿಗೆ, ಅಂತರ್ಜಲ, ಜಲಾಶಯಗಳ ಭರ್ತಿಗೆ ಮುಂಗಾರು ಮಳೆ ನೀರೇ ಆಧಾರವಾಗಿರುತ್ತದೆ. ದೇಶದ ಕೃಷಿ ಉತ್ಪಾದನೆ ಮತ್ತು ಗ್ರಾಮೀಣ ಆರ್ಥಿಕತೆಗೆ ಮುಂಗಾರು ಮಳೆ ಪೂರಕವಾಗಿದೆ.
2025ರಲ್ಲಿ ಮುಂಗಾರು ಮಳೆ ಸರಾಸರಿ ವಾಡಿಕೆಗಿಂತ ಅಧಿಕ ಮಳೆ ಸುರಿಸುವ ಸಾಧ್ಯತೆ ಇದೆ. ಈ ಬಾರಿ ಉತ್ತಮ ಮುಂಗಾರು ಮಳೆ ಆಗಲಿದೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಗ್ರಾಮೀಣ ಆದಾಯ, ಆಹಾರ ಭದ್ರತೆ ಮತ್ತು ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ನೈಋತ್ಯ ಮಾನ್ಸೂನ್ ಕೊಡುಗೆ ನೀಡುತ್ತದೆ.
ರಾಬಿ ಮಳೆಗೂ ಮುಂಗಾರು ಮಳೆ ನೀರು ಆಸರೆ
ಮುಂಗಾರು ಅವಧಿಯಲ್ಲಿ ಖಾರೀಫ್ ಬೆಳೆಗಳಾದ ಭತ್ತ, ಮೆಕ್ಕೆಜೋಳ, ಹತ್ತಿ, ಸೋಯಾಬೀನ್ ಮತ್ತು ಎಣ್ಣೆ ಬೀಜಗಳ ಬಿತ್ತನೆ ಮಾಡಲಾಗುತ್ತದೆ. ಈಗಾಗಲೇ ರೈತರು ಬಿತ್ತನೆಗೆ ಎಲ್ಲ ಬಗೆಯ ಸಿದ್ಧತೆ ಮಾಡಿಕೊಂಡಿದ್ದಾರೆ. ಅಷ್ಟೇ ಮುಂಗಾರು ಮಳೆ ರಾಬಿ ಬೆಳೆ ಬಿತ್ತುವ ಮುನ್ನ ರೈತರಿಗೆ ಅಂತರ್ಜಲ ಹೆಚ್ಚಿಸುತ್ತದೆ, ಜಲಾಶಯಗಳ ನೀರಿನ ಮಟ್ಟ ಹೆಚ್ಚಿಸುತ್ತದೆ.
ಸಮುದ್ರದ ಮೇಲ್ಮೈನಲ್ಲಿ ಪೂರಕ ವಾತಾವರಣ
ದಕ್ಷಿಣ ಮತ್ತು ಮಧ್ಯ ಅರಬ್ಬಿ ಸಮುದ್ರ, ಮಾಲ್ಡೀವ್ಸ್ ಹಾಗೂ ಕೊಮೊರಿನ್ ಪ್ರದೇಶ, ಲಕ್ಷದ್ವೀಪದ ಕೆಲವು ಭಾಗಗಳು, ಕರ್ನಾಟಕ, ತಮಿಳುನಾಡು, ದಕ್ಷಿಣ ಮತ್ತು ಮಧ್ಯ ಬಂಗಾಳ ಕೊಲ್ಲಿಯ ಕರಾವಳಿ ಭಾಗಗಳು, ಉತ್ತರ ಬಂಗಾಳ ಕೊಲ್ಲಿ ಭಾಗದಲ್ಲಿ ಸದ್ಯದ ವಾತಾವರಣ ಮುಂಗಾರು ಮಳೆ ಪ್ರವೇಶಕ್ಕೆ ಅನುಕೂಲಕರವಾಗಿದೆ ಎಂದು ಐಎಂಡಿ ಹೇಳಿದೆ.
ದಕ್ಷಿಣ ಕೊಂಕಣ-ಗೋವಾ ಕರಾವಳಿಯಿಂದ ಪೂರ್ವ-ಮಧ್ಯ ಅರಬ್ಬಿ ಸಮುದ್ರದ ಮೇಲ್ಮೈ ವರೆಗೆ ಕಡಿಮೆ-ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಈ ವೈಪರೀತ್ಯವು ಮುಂದಿನ 3 ದಿನಗಳಲ್ಲಿ ಮತ್ತಷ್ಟು ತೀವ್ರಗೊಂಡು ಉತ್ತರದತ್ತ ಚಳಿಸುವ ಸಾಧ್ಯತೆ ಇದೆ. ಇದು ಮುಂಗಾರು ಮಳೆ ಆರಂಭದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಸುರಿಯಲು ಪ್ರಭಾವ ಬೀರಬಹುದು. ಈ ವೇಳೆ ಗಾಳಿಯಲ್ಲಿ ಬದಲಾವಣೆ ಆಗಲಿದೆ. ಮುಂಗಾರು ಆರಂಭವಾದ ನಂತರ ಪೂರಕೆ ವಾತಾವರಣ ಇದ್ದರೆ ಕೆಲವೇ ದಿನಗಳಲ್ಲಿ ಇಡೀ ದೇಶಾದ್ಯಂತ ಪೂರ್ವ ಮುಂಗಾರು ಸಕ್ರಿಯವಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
-
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ












Click it and Unblock the Notifications