ಮುಂಗಾರು ಆಗಮನದ ಸಂತಸದ ಜೊತೆಗೆ ರೋಗಗಳ ಬಗ್ಗೆಯೂ ಎಚ್ಚರವಿರಲಿ
ಗುರುಗ್ರಾಮ, ಜುಲೈ 16: ಎಷ್ಟೋ ದಿನಗಳಿಂದ ಕಾದು ಕೆಂಪಾಗಿದ್ದ ಭೂಮಿಗೆ ವರುಣ ದೇವ ಕೃಪೆ ತೋರಿದ್ದಾನೆ. ಮಳೆ, ತಣ್ಣೆನೆಯ ಗಾಳಿ, ಕೈಯಲ್ಲಿ ಕಾಫಿ ಉತ್ತಮ ವಾತಾರವಣ ಎಷ್ಟು ಚೆಂದವೆಲ್ಲವೇ.
ಮುಂಗಾರು ಆಗಮನದ ಜೊತೆಗೆ ಅದರ ಜೊತೆಯೇ ಬರುವ ರೋಗಗಳ ಬಗ್ಗೆಯೂ ಎಚ್ಚರವಹಿಸಬೇಕಾಗಿದೆ. ರೋಗಗಳ ಸಂಖ್ಯೆಯೂ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. ಹೌದು ಈ ಮಳೆ ಹಲವಾರು ರೋಗಗಳಿಗೆ ಆಹ್ವಾನ ನೀಡುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಡೆಂಗ್ಯೂ ರೋಗದ ಲಕ್ಷಣ, ಮುನ್ನೆಚ್ಚರಿಕೆ, ಚಿಕಿತ್ಸೆ ಕುರಿತು ಮಾಹಿತಿ
ಡೆಂಗ್ಯೂ, ಚಿಕೂನ್ ಗುನ್ಯಾ, ಮಲೇರಿಯಾ ರೋಗ ಹೆಚ್ಚಾಗುತ್ತಿದೆ. ಈ ತಂಪಾದ ವಾತಾವರಣ, ಆಗಾಗ ಸ್ವಲ್ಪ ಮಳೆ, ನಿಂತ ನೀರು ಇದು ಸೊಳ್ಳೆಗಳು ಉತ್ಪತ್ತಿಯಾಗಲು ಹೇಳಿ ಮಾಡಿಸಿದಂತಹ ವಾತಾವರಣವಾಗಿದೆ ಎಂದು ಡಾ. ಪಿ ವೆಂಕಟ ಕೃಷ್ಣನ್ ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ ಅಲರ್ಜಿ, ಟೈಫಾಯಿಡ್, ವೈರಲ್ ಫೀವರ್, ವಾಂತಿ, ಬೇಧಿ ಜೀರ್ಣಕ್ರಿಯೆಗೆ ಸಂಬಂಧಿಸಿದಂತಹ ರೋಗಗಳು ಕೂಡ ಬರುವ ಸಾಧ್ಯತೆ ಇದೆ.
ಮುಂಜಾಗ್ರತಾ ಕ್ರಮಗಳೇನೇನು?
- ಆರೋಗ್ಯಕರ ಆಹಾರವನ್ನೇ ಸೇವಿಸಿ
-ಬೀದಿಬದಿಗಳಲ್ಲಿ ಸಿಗುವ ಆಹಾರಗಳನ್ನು ತಿನ್ನುವುದನ್ನು ಕಡಿಮೆ ಮಾಡಿ
-ಮನೆಗೆ ಬಂದ ಬಳಿಕ ಬೆಚ್ಚನೆಯ ನೀರಿನಲ್ಲಿ ಸ್ನಾನಮಾಡಿ
-ರೈನ್ ಕೋಟುಗಳನ್ನು ಬಳಕೆ ಮಾಡಿ, ಇದರಿಂದ ಮೈಮೇಲೆ ಮಲಿನಯುಕ್ತ ನೀರು ಬೀಳುವುದನ್ನು ತಡೆಯಬಹುದು.
-ನೀರು ನಿಲ್ಲದಂತೆ ನೋಡಿಕೊಳ್ಳಿ, ಒಂದೊಮ್ಮೆ ನೀರು ನಿಂತಿರುವುದು ಕಂಡು ಬಂದಲ್ಲಿ ಅದನ್ನು ಶೀಘ್ರವೇ ತೆರವುಗೊಳಿಸಿ.
-ತಿನ್ನುವ ಮೊದಲು ಶುದ್ಧ ನೀರಿನಿಂದ ಕೈ ತೊಳೆದುಕೊಳ್ಳಿ
-ಮನೆಯಿಂದ ಹೊರಡುವಾಗ ಯಾವಾಗಲೂ ಬಿಸಿನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಿ