Southwest Monsoon: ಕೇರಳಕ್ಕೆ ಎಂಟ್ರಿ ಕೊಟ್ಟ ಮುಂಗಾರು! ಕರ್ನಾಟಕ, ಗೋವಾ, ಕೇರಳ, ತಮಿಳುನಾಡಿಗೆ 'ರೆಡ್ ಅಲರ್ಟ್'
ನವದೆಹಲಿ, ಮೇ 24: ಪ್ರಸಕ್ತ ವರ್ಷದ ನೈಋತ್ಯ ಮುಂಗಾರು ಇಂದು (ಮೇ 24) ಕೇರಳ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಈ ಸಂಬಂಧ ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಗೆ ಅತ್ಯಧಿಕ ಭಾರೀ ಮಳೆ ಆಗುವ ಸಾಧ್ಯತೆ ಇದ್ದು, ಐಎಂಡಿ 'ರೆಡ್ ಅಲರ್ಟ್' ನೀಡಿದೆ. ನಿರೀಕ್ಷಿತ ಜೂನ್‌ಗಿಂತ ಎಂಟು ದಿನಗಳ ಮೊದಲೇ ಮುಂಗಾರಿನ ಪ್ರವೇಶವಾಗಿದೆ ಎಂದು ಹವಾಮಾನ ತಜ್ಞರು ಶನಿವಾರ ತಿಳಿಸಿದ್ದಾರೆ.
ನೈಋತ್ಯ ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸಿವೆ. ಸಾಮಾನ್ಯವಾಗಿ ಜೂನ್ 1 ರಂದು ಪ್ರಾರಂಭವಾಗಬೇಕಿತ್ತು. ದಿನಾಂಕಕ್ಕಿಂತ 8 ದಿನಗಳು ಮುಂಚಿತವಾಗಿ ಪ್ರಾರಂಭವಾಗಿದೆ. 2009 ರ ನಂತರ ಇಷ್ಟು ಶೀಘ್ರವೇ ಎರಡನೇ ಬಾರಿಗೆ ಮುಂಗಾರು ಮಳೆ ಸುರಿಸುವ ಮಾರುಗಳು ದೇಶಕ್ಕೆ ಆಗಮಿಸಿವೆ. ನಾಳೆಯಿಂದಲೇ ಕೇರಳ ಭಾಗದಲ್ಲಿ ಉತ್ತಮ ಮಳೆ ನಿರೀಕ್ಷೆ ಇದೆ.

ಕರ್ನಾಟಕ ಕರಾವಳಿ, ಕೇರಳ, ತಮಿಳುನಾಡಿನ ಕರಾವಳಿಯ ಕೆಲವು ಜಿಲ್ಲೆಗಳು ಹಾಗೂ ಗೋವಾ ರಾಜ್ಯದಲ್ಲಿ ಬಿರುಗಾಳಿ ಸಹಿತ 200 ಮಿಲಿ ಮೀಟರ್‌ಗೂ ಹೆಚ್ಚಿನ ಮಳೆ ಆಗಲಿದೆ. ಈ ಸಂಬಂಧ ಆಯಾ ರಾಜ್ಯಗಳಿಗೆ 'ರೆಡ್ ಅಲರ್ಟ್' ಘೋಷಿಸಲಾಗಿದೆ. ಭಾನುವಾರದಿಂದ (ಮೇ 25) ಮುಂದಿನ ಐದಾರು ದಿನಗಳ ಕಾಲ ದಕ್ಷಿಣ ರಾಜ್ಯಗಳ ಪಶ್ಚಿಮ ಭಾಗದಲ್ಲಿ ಹೆಚ್ಚಿನ ಮಳೆ ಸುರಿಯಲಿದೆ. ಕರಾವಳಿಯಲ್ಲಿ ಹೈ ಅಲರ್ಟ್ ನೀಡಲಾಗಿದೆ.
ಹವಾಮಾನ ತಜ್ಞರ ಪ್ರಕಾರ, ಕರಾವಳಿ ರಾಜ್ಯಗಳು ಸೇರಿದಂತೆ ಮುಂಬೈನಲ್ಲಿ ಮೇ 27 ಮತ್ತು 28 ರವರೆಗೆ ಧಾರಾಕಾರ ಮಳೆ ಆಗಲಿದೆ. ಇಂದು ಶನಿವಾರದಿಂದ ಮೋಡ ಕವಿದ ವಾತಾವರಣ ಕಂಡು ಬಂದಿದೆ. ಕರ್ನಾಟಕದ ಕರಾವಳಿ ಸೇರಿ ಒಳನಾಡಿನಲ್ಲಿ ಈಗಾಗಲೇ ಆಗಾಗ ಮಳೆ ಆಗುತ್ತಿದೆ.
Southwest Monsoon has set in over Kerala, today the 24 th May 2025:
— India Meteorological Department (@Indiametdept) May 24, 2025
Southwest Monsoon has set in over Kerala today, the 24th May, 2025, against the normal date of 1st June. Thus, southwest monsoon has set in over Kerala 8 days before the normal date. This is the earliest date… pic.twitter.com/n9TcdkG3Ym
ಮುಂಗಾರು ಮಳೆ 2025 ಕುರಿತು..
ಅವಧಿಗೂ ಪೂರ್ವದಲ್ಲಿ ಮುಂಗಾರು ಪ್ರವೇಶವಾಗಿದ್ದು, 1975 ರ ನಂತರದ ಐತಿಹಾಸಿಕ ದಾಖಲೆ ಇದಾಗಿದೆ. ಕೇರಳ ಮಾರ್ಗವಾಗಿ ಬರುವ ಮುಂಗಾರು ಮಳೆ ಮಾರುತಗಳು 1990ರಲ್ಲಿ ಮೇ 19ರಂದೇ ಪ್ರವೇಶಿಸಿತ್ತು. ಇದು ಸಾಮಾನ್ಯ ನಿರಿಕ್ಷೆ (ಜೂನ್ 1) ಬರೋಬ್ಬರಿ 13 ದಿನಗಳು ಮೊದಲು ಮುಂಗಾರು ಶುರುವಾಗಿತ್ತು. ಅದರ ನಂತರ 2009ರಲ್ಲಿ ಮೇ 23ರಂದು ಮುಂಗಾರು ಪ್ರವೇಶವಾಗಿತ್ತು.
ಈಗಾಗಲೇ ಹವಾಮಾನ ಇಲಾಖೆ 2025ರಲ್ಲಿ ಉತ್ತಮ ಮುಂಗಾರು ಮಳೆ ಆಗಲಿದೆ ಎಂದು ಅಂದಾಜಿಸಿತ್ತು. ಅದರಂತೆ ಊಹೆ ನೀಜವಾಗಿದ್ದು, ಮುಂಗಾರಿನ ಆಗಮನವು ಒಳ್ಳೆಯ ಮಳೆಯ ಸೂಚನೆಯಾಗಿದೆ. ಭಾರತದ ಎಲ್ಲ ರಾಜ್ಯಗಳಲ್ಲಿ ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಸಂಪೂರ್ಣವಾಗಿ ಆವರಿಸಲಿದೆ. ಮುಂದಿನ ವಾರದಲ್ಲಿ ಮುಂಗಾರಿನ ಲಕ್ಷಣ ಹೇಗಿರಲಿದೆ ಎಂದು ಹವಾಮಾನ ತಜ್ಞರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
-
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ












Click it and Unblock the Notifications