ಅತ್ಯಾಚಾರಕ್ಕೆ ಯತ್ನ: ಬಿಎಸ್ಎಫ್ ಯೋಧರಿಬ್ಬರ ಅರೆಸ್ಟ್

Molestation BSF SI sukhbir singh constable rajbir singh arrested at Ambala
ಚಂಡೀಗಢ, ಸೆ.28: ನಿನ್ನೆ ಶುಕ್ರವಾರ ರಾತ್ರಿ ಅಂಬಾಲ ಬಳಿ ಚಲಿಸುತ್ತಿದ್ದ ರೈಲಿನಲ್ಲಿ 8 ವರ್ಷದ ಬಾಲಕಿಯ ಮೇಲೆ ಗಡಿ ಭದ್ರತಾ ಪಡೆಯ ಇಬ್ಬರು ಯುವ ಯೋಧರು ತಮ್ಮ ಕಾಮತೃಷೆ ತೀರಿಸಿಕೊಳ್ಳಲು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇಬ್ಬರೂ ಯೋಧರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ದೌರ್ಭಾಗ್ಯವೆಂದರೆ ಇದನ್ನು ಪ್ರತಿಭಟಿಸಿದ ಬಾಲಕಿಯ ಪೋಷಕರ ಮೇಲೂ ಯೋಧರು ಹಲ್ಲೆ ನಡೆಸಿದ್ದಾರೆ. ಬಳಿಕ ಸಹ ಪ್ರಯಾಣಿಕರು ಕಾಮುಕ ಯೋಧರಿಗೆ ಚೆನ್ನಾಗಿ ಥಳಿಸಿ ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ ಅನ್ನಿ.

ಬಂಧಿತರನ್ನು BSF ಸಬ್ ಇನ್ಸ್ ಪೆಕ್ಟರ್ ಸುಕ್ ಬೀರ್ ಸಿಂಗ್ ಮತ್ತು ಕಾನ್ಸ್ ಟೇಬಲ್ ರಾಜ್ ಬೀರ್ ಸಿಂಗ್ ಎಂದು ಗುರುತಿಸಲಾಗಿದೆ. ಇಬ್ಬರೂ 30ರ ವಯಸ್ಸಿನವರಾಗಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 354 ಮತ್ತು 323ರ ಅನ್ವಯ ಕೇಸು ದಾಖಲಿಸಲಾಗಿದೆ.

ಯೋಧರಾಗಿದ್ದುಕೊಂಡು ಇಂಥಾ ಹೀನ ಕೃತ್ಯವೆಸಗಿದ ಇವರ ವಿರುದ್ಧ ಪೋಸ್ಕೋ ಕಾಯ್ದೆ ಹೇರಬೇಕು ಎಂದು ಅಟಾರ್ನಿ ಜನರಲ್ ಸಲಹೆ ಕೇಳಿರುವುದಾಗಿ ತನಿಖಾಧಿಕಾರಿ ರಿಯಾಜ್ ಅಹ್ಮದ್ ತಿಳಿಸಿದ್ದಾರೆ.

ಘಟನೆ ಹೇಗೆ ನಡೆಯಿತು?: ಬಾಲಕಿಯ ತಂದೆ ಹೇಳುವಂತೆ ಜಮ್ಮುವಿನಿಂದ ನವದೆಹಲಿಗೆ ಹೊರಟಿದ್ದ ಆನಂದ್ ವಿಹಾರ್ ರೈಲಿನಲ್ಲಿ ಈ ಘಟನೆ ನಡೆದಿದೆ. ಅಂಬಾಲಗೆ ತೆರಳುತ್ತಿದ್ದಾಗ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.

ಬಾಲಕಿಯ ಬಟ್ಟೆಗಳನ್ನು ಹರಿದು ಕಾಮತೃಷೆ ನೀಗಿಸಿಕೊಳ್ಳಲು ಮುಂದಾಗಿದ್ದಾರೆ. ಮಧ್ಯರಾತ್ರಿ ಜಲಂದರ್ ರೈಲು ನಿಲ್ದಾಣದಲ್ಲಿ ರೈಲು ಹತ್ತಿದ್ದ ಈ ಇಬ್ಬರೂ ಕಾಮುಕರು ಕಂಠಪೂರ್ತಿ ಕುಡಿದಿದ್ದರು. ತಂದೆ ಮಲಗಿರುವುದನ್ನು ಗಮನಿಸಿ ಬಾಲಕಿಯನ್ನು ಪಕ್ಕಕ್ಕೆ ಕರೆದೊಯ್ದು ಕುಕೃತ್ಯಕ್ಕೆ ಯತ್ನಿಸಿದ್ದಾರೆ.

ಬಾಲಕಿ ನೋವಿನಿಂದ ಅರಚುತ್ತಿದ್ದ ಶಬ್ದ ಕೇಳಿದ ತಂದೆ, ಬಾಲಕಿಯನ್ನು ವಿಚಾರಿಸಿದಾಗ ಕಾಮುಕರ ಕುಕೃತ್ಯ ಬಯಲಾಗಿದೆ. ಇದನ್ನು ಪ್ರತಿಭಟಿಸಿದ ಪೋಷಕರ ಮೇಲೂ ಕಾಮುಕರು ಹಲ್ಲೆ ನಡೆಸಿದ್ದಾರೆ. ಕೂಡಲೇ, ಸಹ ಪ್ರಯಾಣಿಕರು ಕಾಮುಕರನ್ನು ಚೆನ್ನಾಗಿ ಚಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+