ಕುಲಭೂಷಣ್ ಪರ ತೀರ್ಪು: ಈ ಬಗ್ಗೆ ಮೋದಿ ಹೇಳಿದ್ದೇನು?

Posted By:
Subscribe to Oneindia Kannada

ನವದಹೆಲಿ, ಮೇ 18: ಭಾರತದ ಪರ ಗೂಢಚರ್ಯೆ ನಡೆಸಿದ ಆರೋಪದ ಮೇರೆಗೆ ಪಾಕಿಸ್ತಾನದ ಸೇನಾ ನ್ಯಾಯಾಲಯದಲ್ಲಿ ಗಲ್ಲು ಶಿಕ್ಷೆಗೆ ಒಳಪಟ್ಟು, ಇದೀಗ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಆ ಶಿಕ್ಷೆಗೆ ತಡೆಯಾಜ್ಞೆ ಪಡೆದಿರುವ ಕುಲಭೂಷಣ್ ವಿಚಾರದಲ್ಲಿ ಭಾರತದ ವಿದೇಶಾಂಗ ಇಲಾಖೆ ನಡೆದುಕೊಂಡ ರೀತಿಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

ಗುರುವಾರ (ಮೇ 19) ಸಂಜೆ ಅಂತಾರಾಷ್ಟ್ರೀಯ ನ್ಯಾಯಾಲಯದ ಮಧ್ಯಂತರ ತೀರ್ಪು ಪ್ರಕಟಗೊಳ್ಳುತ್ತಲೇ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರಿಗೆ ಕರೆ ಮಾಡಿದ ಮೋದಿ, ಕುಲದೀಪ್ ವಿಚಾರದಲ್ಲಿ ಇಲಾಖೆ ಕೈಗೊಂಡ ದಿಟ್ಟ ನಿಲುವುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.[ಸಾವು ಗೆದ್ದ ಕುಲಭೂಷಣ್ ಜಾಧವ್ ಗೆ ಟ್ವಿಟ್ಟಿಗರ ಅಭಿನಂದನೆ]

Modi thanks Sushma, expresses satisfaction at ICJ ruling in Jadhav case

ಕುಲದೀಪ್ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ನೀಡಿರುವ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಿರುವ ಅಂತಾರಾಷ್ಟ್ರೀಯ ನ್ಯಾಯಾಲಯ, ಈ ಪ್ರಕರಣದಲ್ಲಿ ತಾನು ಅಂತಿಮ ತೀರ್ಪು ಪ್ರಕಟಿಸುವವರೆಗೂ ಕುಲದೀಪ್ ಜಾಧವ್ ಅವರನ್ನು ಗಲ್ಲಿಗೇರಿಸಬಾರದೆಂದು ಪಾಕಿಸ್ತಾನ ಸರ್ಕಾರಕ್ಕೆ ಸೂಚಿಸಿದೆ.[ಜಾಧವ್ ನೇಣು ತಡೆ : ಕೋರ್ಟಿನ 10 ಪ್ರಮುಖ ಹೇಳಿಕೆ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi Thursday expressed satisfaction at the order of the International Court of Justice (ICJ) which stayed the execution of Indian national Kulbhushan Jadhav who is on death row in Pakistan.
Please Wait while comments are loading...