• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಸಂಬದ್ಧ ಕಾನೂನುಗಳಿಗೆ ಮಾಡಲೇಬೇಕಿದೆ ತಿದ್ದುಪಡಿ

|

ನವದೆಹಲಿ, ಸೆ. 5: ನರೇಂದ್ರ ಮೋದಿ ಸರ್ಕಾರ ಶತಕ ಪೂರೈಸಿ ಮುನ್ನುಗ್ಗಿತ್ತಿರುವ ಜತೆಗೆ ಕೆಲ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ದೇಶದಲ್ಲಿ ಸಂವಿಧಾನಬದ್ಧವಾಗಿಯೇ ಜಾರಿಯಲ್ಲಿರುವ ಲಕ್ಷಾಂತರ ಕಾನೂನುಗಳಲ್ಲಿ ಅನೇಕ ವಿಧಿಗಳು ಶಕ್ತಿ ಕಳೆದುಕೊಂಡಿವೆ. ಅವುಗಳನ್ನು ಹುಡುಕಿ ಸೂಕ್ತ ತಿದ್ದುಪಡಿ ಮಾಡುವ ಮಹತ್ತರ ಜವಾಬ್ದಾರಿ ನರೇಂದ್ರ ಮೋದಿ ಸರ್ಕಾರದ ಮೇಲಿದೆ.

ಇದಕ್ಕೆ ಪೂರಕವಾಗಿ ನರೇಂದ್ರ ಮೋದಿ ಈಗಾಗಲೇ ಒಂದು ಸಮಿತಿಯನ್ನು ರಚಿಸಿದ್ದು ಅದರ ಹೊಣೆಗಾರಿಕೆ ಹೆಚ್ಚಿದೆ. ಅವೈಜ್ಞಾನಿಕ ಮತ್ತು ಅಸಮರ್ಪಕ ಕಾನೂನುಗಳ ಪತ್ತೆ ಮಾಡುವ ಕೆಲಸ ಸಮಿತಿಯಿಂದಾಗಬೇಕಿದೆ.(ಮದುವೆಯಾಗಬೇಕಾದರೆ ಈ ಪರೀಕ್ಷೆ ಕಡ್ಡಾಯ?)

ದೇಶದಲ್ಲಿ ಅನೇಕ ಬೇಡದ, ವರ್ತಮಾನಕ್ಕೆ ಅಗತ್ಯವಲ್ಲದ, ಜನರಿಗೆ ಯಾವ ನರವು ನೀಡದ ಕಾನೂನುಗಳಿವೆ. ಯಾವುದೇ ಕಾನೂನು ತಕಕ್ಷಣಕ್ಕೆ ನಿಷ್ಪ್ರಯೋಜಕ ಎಂದು ಅನಿಸಿಕೊಳ್ಳುವುದಿಲ್ಲ. ದೇಶದಲ್ಲಿ ಬದಲಾಗುವ ಪರಿಸ್ಥಿತಿಗೆ ಅನುಗುಣವಾಗಿ ಅದು ತನ್ನ ಹೊಳಪು ಕಳೆದುಕೊಳ್ಳುತ್ತದೆ ಎಂದು ಕಾನೂನು ತಜ್ಞ ಕೆಟಿಎಸ್‌ ತುಳಸಿ ಒಮ್ಮೆ ಹೇಳಿದ್ದರು. ಕೆಲವೊಮ್ಮೆ ರಾಜಕೀಯ ಮತ್ತು ಆರ್ಥಿಕ ಕಾರಣಗಳಿಗೋಸ್ಕರ ತಿದ್ದುಪಡಿ ಮಾಡಬೇಕಾಗುತ್ತದೆ ಎಂದು ವಿವರಿಸಿದ್ದರು.(ಗಂಡ ಬೇಕು, ಪರರ ಸಂಗ ಬೇಕು, ವಿಚ್ಛೇದನ ಬೇಡ!)

ಓಡುತ್ತಿರುವ ಕಾಲದಲ್ಲಿ ಎತ್ತಿನ ಗಾಡಿ ಮೇಲೆ ನ್ಯಾಯಾಂಗ ವ್ಯವಸ್ಥೆಯನ್ನು ಹೊತ್ತು ಸಾಗುತ್ತಿರುವಂಥ ವಿಚಿತ್ರ ಪರಿಸ್ಥತಿಯಲ್ಲಿ ನಾವಿದ್ದೇವೆ. ಯುಪಿಎ ಸರ್ಕಾರದ ಕೆಲವರು ಇಂಥ ಕಾನೂನು ಹುಡುಕಿ ತಿದ್ದುಪಡಿಗೆ ಮುಂದಾಗಿದ್ದರೂ ಅದರಲ್ಲಿ ಯಶಸ್ಸು ಸಾಧಿಸಲಿಲ್ಲ ಎಂದು ತುಳಸಿ ಹೇಳಿದ್ದರು.

ಶಕ್ತಿ ಕಳೆದುಕೊಂಡಿರುವ, ಅಸಂಬದ್ಧವಾದ, ಮೂರ್ಖತನದ ಕಾನೂನುಗಳ ಕೆಲ ಸ್ಯಾಂಪಲ್‌ ನಿಮಗಾಗಿ...

ಡ್ರಮ್‌ ಬಾರಿಸಿದರೆ 50 ರೂ. ದಂಡ

ಡ್ರಮ್‌ ಬಾರಿಸಿದರೆ 50 ರೂ. ದಂಡ

ಪೂರ್ವ ಪಂಜಾಬ್‌ ಪ್ರಾಂತ್ಯಕ್ಕೆ ಸಂಬಂಧಿಸಿದ ಕೀಟ ಮತ್ತು ಬೀಜ ನಿಯಂತ್ರಣ ಕಾಯ್ದೆ, 1949: ಇದರ ಪ್ರಕಾರ ಸರ್ಕಾರದ ಆದೇಶ ನಿರ್ಲಕ್ಷ್ಯಿಸಿ ಅಥವಾ ಸರ್ಕಾರಕ್ಕೆ ತಿಳಿಸದೆ ಬೀದಿಗಳಲ್ಲಿ ಡ್ರಮ್‌ ಬಾರಿಸಿದರೆ 50 ರೂ. ದಂಡ ತೆರಬೇಕಾಗುತ್ತದೆ!

ಗಾಳಿಪಟ ಹಾರಿಸಲು ಬೇಕು ಲೈಸನ್ಸ್‌

ಗಾಳಿಪಟ ಹಾರಿಸಲು ಬೇಕು ಲೈಸನ್ಸ್‌

ಭಾರತೀಯ ವಿಮಾನಯಾನ ಕಾಯ್ದೆ, 1934: ನಿಮ್ಮ ಹತ್ತಿರ ಗಾಳಿಪಟ ಹಾರಿಸಲು ಪರವಾನಗಿ ಪತ್ರ ಇದೆಯೇ? ಇಲ್ಲದೇ ಗಾಳಿಪಟ ಹಾರಿಸಿದರೆ ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ವಿಮಾನಯಾನ ಕಾಯ್ದೆ ಹೇಳುತ್ತದೆ. ದೇಶದ ಒಳಗೆ ಗಾಳಿಪಟ ಹಾರಿಸಲು ಅಥವಾ ಮಾರಾಟ ಮಾಡಲು ಸರ್ಕಾರದಿಂದ ಪಡೆದ ಅಧಿಕೃತ ಲೈಸನ್ಸ್‌ ಬೇಕು. ಇದೆ ಕಾನೂನು ವಿಮಾನ ಮಾರಾಟ ಮತ್ತು ಹಾರಾಟಕ್ಕೂ ಅನ್ವಯಿಸುತ್ತದೆ.

ನೃತ್ಯ ಮಾಡಿದರೆ ಬಂಧನ

ನೃತ್ಯ ಮಾಡಿದರೆ ಬಂಧನ

ವಿಹಾರ ತಾಣಗಳ ಮೇಲಿನ ನಿಯಂತ್ರಣ ಕಾಯ್ದೆ, 1960 : ಹತ್ತು ಜೋಡಿಗಿಂತ ಹೆಚ್ಚಿನ ಪ್ರೇಮಿಗಳು ಒಂದೆಡೆ ಸೇರಿ ನೃತ್ಯ ಮಾಡಿದರೆ ಬಂಧನಕ್ಕೊಳಗಾಬೇಕಾಗುತ್ತದೆ ಎಂದು ಈ ಕಾನೂನಿನಲ್ಲಿ ಹೇಳಲಾಗಿದೆ!

ಖಜಾನೆ ಕಂಡು ಬಂದರೆ ಮಾಹಿತಿ ನೀಡಿ

ಖಜಾನೆ ಕಂಡು ಬಂದರೆ ಮಾಹಿತಿ ನೀಡಿ

ಭಾರತೀಯ ಖಜಾನೆ ಕಾನೂನು, 1878: ಹತ್ತು ಲಕ್ಷ ರೂಪಾಯಿಗೂ ಅಧಿಕದ ಖಜಾನೆ ನಿಮ್ಮ ಬಳಿ ಇದ್ದರೆ ಅಥವಾ ನಿಮಗೆ ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ನಿಮ್ಮನ್ನು ಜೈಲಿಗೆ ಕಳಿಸಲಾಗುವುದು!

ರಿಸರ್ವ್‌ ಬ್ಯಾಂಕ್‌ ತಾತ್ಕಾಲಿಕ

ರಿಸರ್ವ್‌ ಬ್ಯಾಂಕ್‌ ತಾತ್ಕಾಲಿಕ

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕಾನೂನು, 1934: ಭಾರತೀಯ ಹಣಕಾಸು ವ್ಯವಸ್ಥೆಯನ್ನು ಭದ್ರ ಮಾಡಿರುವ ರಿಸರ್ವ್‌ ಬ್ಯಾಂಕ್‌ ಇನ್ನುವರೆಗೂ "ತಾತ್ಕಾಲಿಕ' ಸ್ಥಿತಿಯಲ್ಲೇ ಇದೆ.

ಮದುವೆಯಾಗದೆ ಅಪ್ಪನಾಗಬಹುದು!

ಮದುವೆಯಾಗದೆ ಅಪ್ಪನಾಗಬಹುದು!

ಮದುವೆ ಅರ್ಹತಾ ಕಾನೂನು, 1875: ಯಾವುದೇ ಗಂಡಸು 21 ವರ್ಷಕ್ಕಿಂತ ಪೂರ್ವದಲ್ಲಿ ಮದುವಾಗುವುದು ನಿಷಿದ್ಧ. ಆದರೆ 18 ವರ್ಷಕ್ಕೆ ಅಪ್ಪನಾಗಬಹುದು! ಶಾಕ್‌ ಆಯಿತೇ? ಇದರ ಅರ್ಥ ಬೇರೆ ತೆರನಾಗಿದೆ. ಆತನಷ್ಟೇ ವಯಸ್ಸಿನ ಅಂದರೆ 18 ವರ್ಷ ತುಂಬಿದ ವ್ಯಕ್ತಿಯನ್ನು ದತ್ತು ಪಡೆದುಕೊಳ್ಳಲು ಈ ಕಾನೂನು ಅನುಮತಿ ನೀಡುತ್ತದೆ.

ಮಹಿಳೆಯರಿಗಿಲ್ಲ ಕಡಿವಾಣ

ಮಹಿಳೆಯರಿಗಿಲ್ಲ ಕಡಿವಾಣ

ಭಾರತೀಯ ದಂಡ ಸಂಹಿತೆ 497, 1860: ಮದುವೆಯಾದ ಮಹಿಳೆ ಪರ ಪುರುಷನೊಂದಿಗೆ ಸಂಬಂಧ ಇರಿಸಿಕೊಂಡಿದ್ದರೆ ಕಾನೂನಿನ ಅಡಿ ಯಾವುದೇ ಕ್ರಮ ತೆಗದುಕೊಳ್ಳಲು ಸಾಧ್ಯವಿಲ್ಲ. ಕೇವಲ ಗಂಡಸಿನ ಮೇಲೆ ಮಾತ್ರ ಕ್ರಮ ತೆಗೆದುಕೊಳ್ಳಬಹುದು. ಆದರೆ ಅದು ಮದುವೆಯಾದ ಹೆಂಗಸಿನ ಜತೆ ಸಂಬಂಧ ಇರಿಸಿಕೊಂಡಿದ್ದರೆ ಮಾತ್ರ. ಮದುವೆಯಾದ ಪುರುಷ ಮದುವೆಯಾಗದ ಯುವತಿಯೊಂದಿಗೆ ಸಂಬಂಧ ಇರಿಸಿಕೊಂಡಿದ್ದರೆ ಅದು ಕಾನೂನು ಬದ್ಧ!

ನೀರು ನೀಡದಿದ್ದರೇ 20 ರೂ. ದಂಡ

ನೀರು ನೀಡದಿದ್ದರೇ 20 ರೂ. ದಂಡ

ಸೆರೈಸ್‌ ಕಾನೂನು, 1867: ಯಾವುದೇ ವ್ಯಕ್ತಿ ಆತನಿಗೆ ಅಥವಾ ಆತನ ಸಾಕು ಪ್ರಾಣಿಗೆ ನೀರಿಗಾಗಿ ಬೇಡಿಕೆಯಿಟ್ಟರೆ (ಇದು ಐಷರಾಮಿ ಹೋಟೆಲ್‌ಗಳಿಗೂ ಅನ್ವಯಿಸುತ್ತದೆ) ಕೂಡಲೇ ನೀಡಬೇಕು. ಇದನ್ನು ವಿರೋಧಿಸಿದ ವ್ಯಕ್ತಿಗೆ 20 ರೂ. ದಂಡ ವಿಧಿಸಲಾಗುವುದು.

ಆತ್ಮಹತ್ಯೆ ಮಾಡಿಕೊಳ್ಳಬಹುದು

ಆತ್ಮಹತ್ಯೆ ಮಾಡಿಕೊಳ್ಳಬಹುದು

ಭಾರತೀಯ ದಂಡ ಸಂಹಿತೆ 309 : ನೀವು ಯಶಸ್ವಿಯಾಗಿ ಆತ್ಯಹತ್ಯೆ ಮಾಡಿಕೊಂಡರೆ ಅದು ಅಪರಾಧವಲ್ಲ. ಆದರೆ ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕಿಬಂದರೆ ಅದು ಅಪರಾಧ! ಹೌದು 309 ದಂಡ ಸಂಹಿತೆ ಇದನ್ನೇ ದೃಢಪಡಿಸಸುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ahead of completing 100 days at the centre, Prime Minister Narendra Modi approved constitution of a Committee which would review existing laws in the country. The biggest challenge of the committee would be to identify obsolete laws among lakhs of existing laws in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more