66ರ 'ಯುವಕ' ನರೇಂದ್ರ ಮೋದಿಗೆ ನೀವೂ ವಿಶ್ ಮಾಡಿದ್ರಾ?

Written By: Ramesh
Subscribe to Oneindia Kannada

ನವದೆಹಲಿ, ಸೆ. 17 : ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಪಲ್ ಸಿಇಒ ಟಿಮ್ ಕುಕ್, ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಟೆನಿಸ್ ತಾರೆ ಸಾನಿಯಾ ಮಿರ್ಜಾ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಶಶಿ ತರೂರ್, ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್...[ನರೇಂದ್ರ ಮೋದಿ 66ನೇ ಹುಟ್ಟುಹಬ್ಬ ಗಿನ್ನಿಸ್ ದಾಖಲೆಗಳ ಪಟ್ಟಿಗೆ!]

ಪ್ರಧಾನಿ ನರೇಂದ್ರ ಮೋದಿ ಅವರ 66ನೇ ಹುಟ್ಟುಹಬ್ಬಕ್ಕೆಶುಭಾಶಯ ಕೋರದವರೇ ವಿರಳ. ದೊಡ್ಡ-ದೊಡ್ಡ ಗಣ್ಯರಿಂದ ಹಿಡಿದು ಸಾಮಾನ್ಯ ಜನರವರೆಗೆ ದೇಶ-ವಿದೇಶಗಳಿಂದ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಬರುತ್ತಿವೆ. ಗಣ್ಯಾತಿಗಣ್ಯರು, ರಾಜಕೀಯ ನಾಯಕರು, ಅಭಿಮಾನಿಗಳು ಟ್ವಿಟ್ಟರ್ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಶುಭಕೋರಿದವರಿಗೆ ಪ್ರತಿಯಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. [ಹುಟ್ಟುಹಬ್ಬದ ದಿನ ಅಮ್ಮನ ಆಶೀರ್ವಾದ ಪಡೆದ ಮೋದಿ]

ಪ್ರಧಾನಿಗೆ ಎನ್‍ಎಂ ಆ್ಯಪ್ ಮೂಲಕ ಜನರು ನೇರವಾಗಿ ಶುಭಾಶಯ ಕೋರಬಹುದು. ಸೂರತ್ ಮೂಲದ ಅತುಲ್ ಬೇಕರಿಯವರು ಪಿರಮಿಡ್ ಆಕಾರದ ಬೃಹತ್ ಕೇಕ್ ಸಿದ್ಧಪಡಿಸಿದ್ದು ಇದು ಗಿನ್ನಿಸ್ ದಾಖಲೆ ಪುಟ ಸೇರಿದೆ.

ಗುಜರಾತ್‌ ಪ್ರವಾಸದಲ್ಲಿರುವ ಮೋದಿ, ತಾಯಿಯನ್ನು ಭೇಟಿಯಾಗುವ ಮೂಲಕ ತಮ್ಮ ಹುಟ್ಟುಹಬ್ಬದ ದಿನವನ್ನು ಆರಂಭಿಸಿದರು. ಶನಿವಾರ ಬೆಳಗ್ಗೆ ಗುಜರಾತ್‌ನ ರಾಜಭವನದಿಂದ ನರೇಂದ್ರ ಮೋದಿ ಅವರು ಗಾಂಧಿನಗರದಲ್ಲಿರುವ ಮನೆಗೆ ಭೇಟಿ ನೀಡಿ ತಾಯಿ ಹೀರಾಬೆನ್ ಅವರ ಆಶೀರ್ವಾದ ಪಡೆದು, ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು. ನಂತರ ಅಭಿಮಾನಿಗಳು ಆಯೋಜಿಸಿದ್ದ ತಮ್ಮ ಹುಟ್ಟುಹಬ್ಬದ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

ವಿಶ್ವದಲ್ಲಿಯೇ ಅತ್ತೀ ಎತ್ತರದ ಕೇಕ್

ವಿಶ್ವದಲ್ಲಿಯೇ ಅತ್ತೀ ಎತ್ತರದ ಕೇಕ್

ನರೇಂದ್ರ ಮೋದಿಯವರ ಹುಟ್ಟುಹಬ್ಬಕ್ಕೆ ಸುಮಾರು 1 ಟನ್ ತೂಕವಿರುವ ವಿಶ್ವದಲ್ಲಿಯೇ ಅತ್ತೀ ಎತ್ತರ ಪಿರಮಿಡ್ ಆಕೃತಿಯ ಕೇಕ್ ಸೂರತ್ ನಲ್ಲಿ ತಯಾರಿಸಲಾಗಿತ್ತು. ಇದು ಅತೀ ಎತ್ತರ ಕೇಕ್ ಎಂಬ ಗಿನ್ನಿಸ್ ದಾಖಲೆಯ ಪುಟ ಸೇರಿತು.

ಮರಳಿನಲ್ಲಿ ನರೇಂದ್ರ ಮೋದಿಯವರ ಮೂರ್ತಿ

ಮರಳಿನಲ್ಲಿ ನರೇಂದ್ರ ಮೋದಿಯವರ ಮೂರ್ತಿ

ಖ್ಯಾತ ಸ್ಯಾಂಡ್ ಆರ್ಟಿಸ್ಟ್ ಶಿಲ್ಪಿ ಸುದರ್ಶನ್ ಪಟ್ನಾಯಕ್ ತಮ್ಮದೇ ಆದ ರೀತಿಯಲ್ಲಿ ಮೋದಿಗೆ ಶುಭಾಶಯ ಹೇಳಿದ್ದಾರೆ. ಮರಳಿನಲ್ಲಿ ನರೇಂದ್ರ ಮೋದಿಯವರ ಮೂರ್ತಿ ರಚಿಸುವ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಶುಭಕೋರಿದ ನ್ಯಾಯಮೂರ್ತಿ ಟಿ.ಎಸ್. ಠಾಕೂರ್

ಶುಭಕೋರಿದ ನ್ಯಾಯಮೂರ್ತಿ ಟಿ.ಎಸ್. ಠಾಕೂರ್

ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಶುಭಾಶಯ ಹೇಳಿದ್ದಾರೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಪ್ರಧಾನ ಮಂತ್ರಿಗೆ ಶುಭ ಕೋರಿದ್ದಾರೆ.

ಗುಜರಾತ್ ರಾಜ್ಯಪಾಲ

ಗುಜರಾತ್ ರಾಜ್ಯಪಾಲ

ಪ್ರಧಾನಿ ಮೋದಿ ಅವರನ್ನು ಗುಜರಾತ್ ರಾಜ್ಯಪಾಲ ಓ.ಪಿ.ಕೊಹ್ಲಿ ಅವರು ಗಾಂಧಿನಗರದ ರಾಜಭವನದಲ್ಲಿ ಹೂಗುಚ್ಚ ನೀಡಿ ಜನ್ಮದಿನದ ಶುಭ ಕೋರಿ ಸ್ವಾಗತಿಸಿದರು.

ಭಾರತ ನಕಾಶೆಯಲ್ಲಿ ಹೂವಿನ ಹಾರ

ಭಾರತ ನಕಾಶೆಯಲ್ಲಿ ಹೂವಿನ ಹಾರ

ಗುಜರಾತ್ ನ ಲಿಂಖೇಡದಲ್ಲಿ ಮುಖಂಡರು ಭಾರತ ನಕಾಶೆಯಲ್ಲಿ ನಿರ್ಮಿಸಿದ ವಿಶಿಷ್ಟ ಹೂವಿನ ಹಾರವನ್ನು ನರೇಂದ್ರ ಮೋದಿ ಅವರ ಕೊರಳಿಗೆ ಹಾಕಿ ಶುಭಾಶಯ ಕೋರಿದರು.

ಸರ್ವಧರ್ಮಿಯರಿಂದ ಮೋದಿ ಅವರಿಗೆ ಶುಭಾಶಯ

ಸರ್ವಧರ್ಮಿಯರಿಂದ ಮೋದಿ ಅವರಿಗೆ ಶುಭಾಶಯ

ಅಹಮದಬಾದ್ ನಲ್ಲಿ ಮೋದಿ ಅವರ 66ನೇ ಹುಟ್ಟುಹಬ್ಬ ಅಂಗವಾಗಿ ಮುಸ್ಲಿಂ ಕ್ರಿಶ್ಚನ್, ಹಿಂದೂ, ಕ್ರೈಸ್ತ ಸೇರಿದಂತೆ ಸರ್ವಧರ್ಮಿಯರು ಒಂದು ಕಡೆ ಸೇರಿ ಕೇಕ್ ಕತ್ತರಿಸುವ ಮೂಲಕ ಮೋದಿ ಅವರಿಗೆ ಶುಭಾಶಯಗಳನ್ನು ತಿಳಿಸಿದರು.

ಟ್ವಿಟ್ಟರ ನಲ್ಲಿ

ಟ್ವಿಟ್ಟರ ನಲ್ಲಿ

ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಉಪರಾಷ್ಟ್ರಪತಿ ಹಮೀದ್ ಅನ್ಸಾರಿಗೆ ನರೇಂದ್ರ ಮೋದಿ ಧನ್ಯವಾದ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶುಭಕೋರುವ ಅಭಿಮಾನಿಗಳ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚಗುತ್ತಾ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi who is currently in Gujarat on a two day-trip received wishes from all over the country for his 66th birthday.
Please Wait while comments are loading...