ಮೋದಿ ವಿರುದ್ಧ ಜಿಗ್ನೇಶ್ ಮೆವಾನಿ ಅನಾಗರಿಕತೆಯ ಹೇಳಿಕೆ: ವ್ಯಾಪಕ ವಿರೋಧ

Posted By:
Subscribe to Oneindia Kannada
   Jignesh mevani controversial statement about narendra modi outraged on twitter | Oneindia Kannada

   ನಿರೀಕ್ಷೆಗೂ ಮೀರಿ ಯಶಸ್ಸು ಪಡೆದುಕೊಂಡ ಗೌರಿ ಹತ್ಯೆ ವಿರೋಧಿಸಿ ಆಯೋಜಿಸಲಾಗಿದ್ದ 'ನಾನು ಗೌರಿ - ಪ್ರತಿರೋಧ ಸಮಾವೇಶ'ದಲ್ಲಿ ಸಾಮಾಜಿಕ ಹೋರಾಟಗಾರ ಜಿಗ್ನೇಶ್ ಮೆವಾನಿ, ಪ್ರಧಾನಿ ಮೋದಿಯವರ ತಾಯಿಯನ್ನು ಎಳೆದುತಂದಿದ್ದು ವ್ಯಾಪಕ ಟೀಕೆಗೊಳಗಾಗಿದೆ.

   ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಮಂಗಳವಾರ (ಸೆ 12) ಆಯೋಜಿಸಲಾಗಿದ್ದ ಪ್ರತಿಭಟನಾ ಸಮಾವೇಶದಲ್ಲಿ ಜಿಗ್ನೇಶ್, ಮೋದಿಯಂತಹ ಮಗನಿಗೆ ಯಾಕೆ ಜನ್ಮ ನೀಡಿದಿರಿ ಎಂದು ನಾವೆಲ್ಲಾ ಹೋಗಿ ಮೋದಿ ತಾಯಿಯನ್ನು ಕೇಳಬೇಕಿದೆ ಎಂದು 'ಪ್ರಧಾನಿ' ಎನ್ನುವ ಹುದ್ದೆಗೆ ಮರ್ಯಾದೆ ನೀಡದೇ ಅನಾಗರಿಕತೆಯ ಪದ ಬಳಸಿದ್ದರು.

   ಮೋದಿ ತಮ್ಮ ತಾಯಿಯ ನಾಲಾಯಕ್ ಮಗ, ಜಿಗ್ನೇಶ್

   ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಕೈಕೊಟ್ಟರೆ ಅದಕ್ಕೆ ಬಿಜೆಪಿ ಮುಖ್ಯಮಂತ್ರಿಗಳೇ ಹೊಣೆ, ಬಿಜೆಪಿ ಅಧಿಕಾರದಲ್ಲಿ ಇರದ ರಾಜ್ಯದಲ್ಲಿ ಏನಾದರೂ ಸಮಸ್ಯೆಯಾದರೆ ಅದಕ್ಕೆ ಪ್ರಧಾನಿ ಹೊಣೆ ಎನ್ನುವ ವಿರೋಧಿಗಳ ನಿಲುವು ಎಷ್ಟು ಸಮರ್ಥನೀಯ ಎನ್ನುವುದು ಈಗ ಚರ್ಚೆಯ ವಿಷಯವಾಗಿದೆ.

   ವಿಶ್ವದ ಪ್ರಮುಖ ಐದು ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರಾದ ಪ್ರಧಾನಿ ನರೇಂದ್ರ ಮೋದಿಯವರನ್ನು 'ನಾಲಾಯಕ್ ಮಗ' ಎಂದು ಸಂಭೋದಿಸಿದ್ದ ಜಿಗ್ನೇಶ್, ನಾವೆಲ್ಲಾ ದೆಹಲಿಗೆ ಹೋಗಿ ಪ್ರಧಾನಿ ಮೋದಿ ಮತ್ತು RSS ಮುಖ್ಯಸ್ಥ ಮೋಹನ್ ಭಾಗವತ್ ಅವರ ಎದೆಯ ಮೇಲೆ ಕುಳಿತು ನ್ಯಾಯ ಕೇಳೋಣ ಎಂದು ಸಮಾವೇಶದಲ್ಲಿ ಹೇಳಿದ್ದರು.

   ಗೌರಿ ಲಂಕೇಶ್ ಹತ್ಯೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯೇ ಕಾರಣ ಎಂದು ಸಮಾವೇಶದಲ್ಲಿ ಹೇಳಿದ್ದ ಜಿಗ್ನೇಶ್ ಮೆವಾನಿ ವಿರುದ್ದ ದಕ್ಷಿಣಕನ್ನಡ ಜಿಲ್ಲೆ ಪುತ್ತೂರಿನಲ್ಲಿ ದೂರು ದಾಖಲಾಗಿದೆ. ಇನ್ನು, ಜಿಗ್ನೇಶ್, ಹೇಳಿಕೆಗೆ ಸಾಮಾಜಿಕ ತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಮುಂದೆ ಓದಿ..

   ಮೋದಿ ಅವರ ತಾಯಿಯ ನಾಲಾಯಕ್ ಮಗ

   ಮೋದಿ ಅವರ ತಾಯಿಯ ನಾಲಾಯಕ್ ಮಗ

   ಮಂಗಳವಾರ (ಸೆ 12) ನಡೆದ ಸಮಾವೇಶದಲ್ಲಿ, ಗೌರಿ ಅವರ ಹತ್ಯೆಗೆ ಬಿಜೆಪಿ, ಆರೆಸ್ಸೆಸ್ ಕಾರಣ. ಪ್ರಧಾನಿ ಮೋದಿ ಅವರು ಭಾರತದ ವಿಕಾಸದ ಬಗ್ಗೆ ಮಾತನಾಡುತ್ತಾರೆ. ಆದರೆ, ಪತ್ರಕರ್ತರ ಹತ್ಯೆ ಯಾವ ವಿಕಾಸದ ಮಾಡೆಲ್ ಎಂದು ಮೋದಿಯವರೇ ಹೇಳಬೇಕು. ಮೋದಿ ಅವರ ತಾಯಿಯ ನಾಲಾಯಕ್ ಮಗನಾಗಿದ್ದು, ನಾವೆಲ್ಲರೂ ಅವರ ತಾಯಿಯ ಬಳಿಗೆ ತೆರಳಿ, ತಮ್ಮ ಮಗನಿಗೆ ಬುದ್ಧಿ ಹೇಳುವಂತೆ ಕೇಳೋಣ ಎಂದು ಸಮಾವೇಶದಲ್ಲಿ ಅಬ್ಬರಿಸಿದ್ದರು.

   ಮಹಿಳೆಯನ್ನು ದೇವರೆಂದು ಪೂಜಿಸುವ ನಾಡು

   ಮಹಿಳೆಯನ್ನು ದೇವರೆಂದು ಪೂಜಿಸುವ ನಾಡು

   ಮಹಿಳೆಯನ್ನು ದೇವರೆಂದು ಪೂಜಿಸುವ ನಾಡಿನಲ್ಲಿ, ಬುದ್ದಿಜೀವಿಗಳು ಪ್ರಧಾನಿ ಮೋದಿ ಮತ್ತು ಅವರ ತಾಯಿಯನ್ನು ಅವಮಾನ ಮಾಡುತ್ತಾರೆ. ಅವಮಾನಿಸಿದವರನ್ನು ಬಂಧಿಸಿ.

   ಗೌರಿ ಲಂಕೇಶ್ ಹತ್ಯೆಯಾಗಿದ್ದು ಕರ್ನಾಟಕದಲ್ಲಿ ಅಲ್ಲವೇ

   ಗೌರಿ ಲಂಕೇಶ್ ಹತ್ಯೆಯಾಗಿದ್ದು ಕರ್ನಾಟಕದಲ್ಲಿ ಅಲ್ಲವೇ

   ಗೌರಿ ಲಂಕೇಶ್ ಹತ್ಯೆಯಾಗಿದ್ದು ಕರ್ನಾಟಕದಲ್ಲಿ ಅಲ್ಲವೇ? ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ತಾನೇ ಅಧಿಕಾರದಲ್ಲಿರುವುದು. ಅದು ಹೇಗೆ ಮೋದಿ ಜವಾಬ್ದಾರಿಯಾಗುತ್ತಾರೆ. ಸಿದ್ದರಾಮಯ್ಯ ಇದಕ್ಕೆ ಉತ್ತರಿಸಬೇಕು.

   ಬುದ್ದಿಜೀವಿಗಳ ಮತ್ತು ಎಡಪಂಥೀಯರ ಪ್ರತಿಭಟನೆ

   ಗೌರಿ ಹತ್ಯೆ ವಿಚಾರದಲ್ಲಿ ಬುದ್ದಿಜೀವಿಗಳ ಮತ್ತು ಎಡಪಂಥೀಯರ ಪ್ರತಿಭಟನೆ. ಪ್ರಧಾನಿ ಮೋದಿ ಮತ್ತು ಅವರ ತಾಯಿಯನ್ನು ಲೇವಡಿ ಮಾಡುವ ವೇದಿಕೆ. ವಾಕ್ ಸ್ವಾತಂತ್ರ್ಯ ಅಂದರೆ ಇದೇ!

   ಹೋರಾಟದ ಕಿಚ್ಚನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ

   ಹೋರಾಟದ ಕಿಚ್ಚನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ

   ನಿಮ್ಮಲ್ಲಿರುವ ಹೋರಾಟದ ಕಿಚ್ಚನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ, ನೀವೊಬ್ಬರು ಹುಟ್ಟು ಹೋರಾಟಗಾರ, ನಮ್ಮ ಕನಸಿನ ಭಾರತವನ್ನು ಮುನ್ನಡೆಸಿ.

   ದೇಶವನ್ನು ಅಭಿವೃದ್ದಿಯತ್ತ ಸಾಗಿಸುತ್ತಿರುವ ಪ್ರಧಾನಿ

   ಬುದ್ದಿಜೀವಿಗಳು ದೇಶವನ್ನು ಅಭಿವೃದ್ದಿಯತ್ತ ಸಾಗಿಸುತ್ತಿರುವ ಪ್ರಧಾನಿ ಮೋದಿಯನ್ನು ಕಟ್ಟಿಹಾಕಲು ಗೌರಿ ಲಂಕೇಶ್ ಹತ್ಯೆಯ ವಿಚಾರವನ್ನು ಮುಂದಿಟ್ಟುಕೊಂಡು ಸಾಗುತ್ತಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Hiraben Modi (Modi's mother) given birth to worst son like PM Narendra Modi, Jignesh Mevani statement in Gauri Lankesh protest rally in Bengaluru on Sep 12, vastly condemned. Twitter flooded with angry tweet against Jignesh.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ