ಆರ್ ಬಿಐನಲ್ಲಿ ಹಳೇ ನೋಟು ಜಮೆ ಮಾಸಾಂತ್ಯಕ್ಕೆ ಬಂದ್: ಕೇಂದ್ರ

ಡಿಸೆಂಬರ್ 31ರೊಳಗೆ ಹಳೆಯ ನೋಟುಗಳನ್ನು ಜಮೆ ಮಾಡದವರು ಆರ್ ಬಿಐನಲ್ಲಿ ಹಳೆಯ ನೋಟುಗಳನ್ನು ಜಮೆ ಮಾಡುವ ಅವಕಾಶವನ್ನು ಮಾರ್ಚ್ 30ರವರೆಗೆ ಕೆಲವರಿಗೆ ಮಾತ್ರ ನೀಡಿರುವುದಕ್ಕೆ ಕೋರ್ಟ್ ಎತ್ತಿದ್ದ ಆಕ್ಷೇಪಕ್ಕೆ ಉತ್ತರ.

ನವದೆಹಲಿ, ಮಾರ್ಚ್ 10: ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಯಾವುದೇ ಹಳೆಯ ನೋಟುಗಳನ್ನು ಜಮೆ ಮಾಡುವ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ನಲ್ಲಿ ಸ್ಪಷ್ಟಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಖೆಹರ್ ನೇತೃತ್ವದ ನ್ಯಾಯಪೀಠದ ಮುಂದೆ ಕೇಂದ್ರ ಸರ್ಕಾರದ ಪರವಾಗಿ ಸ್ಪಷ್ಟನೆ ನೀಡಿದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ''ಇದೇ ತಿಂಗಳ ಅಂತ್ಯದವರೆಗೆ (ಮಾರ್ಚ್ 30) ರಿಸರ್ವ್ ಬ್ಯಾಂಕ್ ಗಳಲ್ಲಿ ಹಳೆಯ ನೋಟುಗಳನ್ನು ಜಮೆ ಮಾಡುವ ಅವಕಾಶ ನೀಡಲಾಗಿದೆ. ಈ ಗಡುವನ್ನು ಕೇಂದ್ರ ವಿಸ್ತರಿಸುವುದಿಲ್ಲ'' ಎಂದು ಸ್ಪಷ್ಟಪಡಿಸಿದರು.

Modi government shuts door on depositing old notes with RBI

''ಅಲ್ಲದೆ, ಹಳೆ ನೋಟುಗಳ ಜಮಾವಣೆಗೆ ಬೇರೊಂದು ವ್ಯವಸ್ಥೆಯನ್ನೂ ಜಾರಿಗೊಳಿಸುವ ಇರಾದೆ ಸರ್ಕಾರಕ್ಕಿಲ್ಲ. ಏಪ್ರಿಲ್ ತಿಂಗಳಿನಿಂದ, ಹಳೆ ನೋಟುಗಳನ್ನು ಹೊಂದುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ'' ಎಂದೂ ಅವರು ತಿಳಿಸಿದರು.

ಡಿಸೆಂಬರ್ 31ರೊಳಗೆ ಹಳೆಯ ನೋಟುಗಳನ್ನು ಜಮೆ ಮಾಡದವರು ಆರ್ ಬಿಐನಲ್ಲಿ ಹಳೆಯ ನೋಟುಗಳನ್ನು ಜಮೆ ಮಾಡುವ ಅವಕಾಶವನ್ನು ಮಾರ್ಚ್ 30ರವರೆಗೆ ಕೇಂದ್ರ ಸರ್ಕಾರ ನೀಡಿದೆ. ಆದರೆ, ಈ ಸೌಲಭ್ಯ ಕೆಲವರಿಗೆ ಮಾತ್ರ ನೀಡಲಾಗಿದೆ. ಕಾರ್ಯ ನಿಮಿತ್ತ ವಿದೇಶಗಳಿಗೆ ಭೇಟಿ ನೀಡುವವರಿಗೆ ಮಾತ್ರ ಈ ಸೌಲಭ್ಯ ಕಲ್ಪಿಸಲಾಗಿದ್ದು, ಅಂಥವರು ಸೂಕ್ತ ದಾಖಲೆಗಳನ್ನು ತೋರಿಸಿ ಹಳೆಯ ನೋಟುಗಳನ್ನು ಜಮೆ ಮಾಡಬಹುದಾಗಿದೆ.

ಹೀಗೆ, ಕೆಲವರಿಗೆ ಮಾತ್ರ ಹಳೆ ನೋಟುಗಳನ್ನು ಆರ್ ಬಿಐನಲ್ಲಿ ಜಮೆ ಮಾಡಲು ಅವಕಾಶ ನೀಡಿರುವುದಕ್ಕೆ ಸೂಕ್ತ ಉತ್ತರ ನೀಡಬೇಕೆಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಕೇಂದ್ರ ಸರ್ಕಾರವನ್ನು ಕೇಳಿತ್ತು. ಈ ಹಿನ್ನೆಲೆಯಲ್ಲಿ ಮುಕುಲ್, ಕಲಾಪಕ್ಕೆ ಹಾಜರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+