ಇಂದಿರಾ ಗಾಂಧಿ ಯುಗವನ್ನು ಮೋದಿ ಸರ್ಕಾರ ಮರಳಿ ತರುತ್ತಿದೆ: ಓವೈಸಿ

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಓವೈಸಿ ಅವರು ಅಲ್ಪಸಂಖ್ಯಾತರಿಗೆ ಸರ್ಕಾರ ಸಾಕಷ್ಟು ಕೆಲಸ ಮಾಡುತ್ತಿಲ್ಲ. ಭಾರತ-ಚೀನಾ ಗಡಿ ಪರಿಸ್ಥಿತಿಯ ಬಗ್ಗೆ ಯಾವುದೇ ನಿರ್ಧಾರ ಮಾಡುತ್ತಿಲ್ಲ ಎಂದು ಅಸಾದುದ್ದೀನ್ ಓವೈಸಿ ಆರೋಪಿಸಿದರು.

ನವದೆಹಲಿ, ಫೆಬ್ರವರಿ 8: ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರು ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದ ಹಗ್ಗ ಜಗ್ಗಾಟವನ್ನು ಉಲ್ಲೇಖಿಸಿ ನರೇಂದ್ರ ಮೋದಿ ಸರ್ಕಾರವು ಇಂದಿರಾ ಗಾಂಧಿ ಯುಗವನ್ನು ಮರಳಿ ತರುತ್ತಿದೆ ಎಂದು ಹೇಳಿದರು.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಓವೈಸಿ ಅವರು ಅಲ್ಪಸಂಖ್ಯಾತರಿಗೆ ಸರ್ಕಾರ ಸಾಕಷ್ಟು ಕೆಲಸ ಮಾಡುತ್ತಿಲ್ಲ. ಭಾರತ-ಚೀನಾ ಗಡಿ ಪರಿಸ್ಥಿತಿಯ ಬಗ್ಗೆ ಯಾವುದೇ ನಿರ್ಧಾರ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಈ ಬಗ್ಗೆ ಸಾಂವಿಧಾನಿಕ ಹುದ್ದೆಗಳ ಕುರಿತು ಜನರು ಮೂಲ ರಚನೆಯ ಬಗ್ಗೆ ಮಾತನಾಡುತ್ತಿದ್ದಾರೆ. ಕಾನೂನು ಸಚಿವರು ಕೊಲಿಜಿಯಂ ಬಗ್ಗೆ ಹೇಳಿಕೆ ನೀಡಿದ್ದಾರೆ. ಎನ್‌ಜೆಎಸಿ (ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ) ಮಸೂದೆ ಬಂದಾಗ ಅದು ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗಿರುತ್ತದೆ ಎಂದು ಹೇಳಿದ ಏಕೈಕ ಸಂಸದ ನಾನು ಎಂದು ಓವೈಸಿ ಹೇಳಿದರು.

Modi government is bringing back Indira Gandhi era: Owaisi

ನೀವು ಇಂದಿರಾ ಗಾಂಧಿಯವರಿಂದ ಪಾಠ ಕಲಿಯಬೇಕು. ಇಂದಿರಾ ಗಾಂಧಿ ಅವರು ನ್ಯಾಯಾಂಗವು ಅವರನ್ನು ಅನುಸರಿಸಬೇಕು ಎಂದು ಹೇಳಿದರು. ಈಗ ಪ್ರಧಾನಿ ಮೋದಿ ಅವರು ನ್ಯಾಯಾಂಗವು ಅವರಿಗೆ ನಿಷ್ಠವಾಗಿರಬೇಕು ಎಂದು ಹೇಳುತ್ತಿದ್ದಾರೆ. ನೀವು ಅದೇ ಇಂದಿರಾ ಗಾಂಧಿ ಯುಗವನ್ನು ಮರಳಿ ತರುತ್ತಿದ್ದೀರಿ ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನ್ಯಾಯಾಂಗ ಮತ್ತು ಕಾರ್ಯಾಂಗವು ಹಗ್ಗ ಜಗ್ಗಾಟದಲ್ಲಿ ತೊಡಗಿದೆ. ಅಲ್ಪಸಂಖ್ಯಾತರಿಗಾಗಿ ಸರ್ಕಾರವು ಸಾಕಷ್ಟು ಕೆಲಸ ಮಾಡುತ್ತಿಲ್ಲ ಮತ್ತು ಅಲ್ಪಸಂಖ್ಯಾತರ ಬಜೆಟ್ ಅನ್ನು ಶೇಕಡಾ 40 ರಷ್ಟು ಕಡಿತಗೊಳಿಸಲಾಗಿದೆ. ಜನಸಂಖ್ಯೆಯಲ್ಲಿ ಶೇ. 19ರಷ್ಟಿರುವ ಅಲ್ಪಸಂಖ್ಯಾತರ ಬಗ್ಗೆ ರಾಷ್ಟ್ರಪತಿಗಳ ಭಾಷಣದಲ್ಲೂ ಪ್ರಸ್ತಾಪವಾಗಿಲ್ಲ. ನರೇಂದ್ರ ಮೋದಿ ಸರ್ಕಾರಕ್ಕೆ ಮುಸ್ಲಿಂ ಮಕ್ಕಳು ಓದುವುದು ಬೇಡ, ಅವರು ಬಡತನಕ್ಕೆ ಬಲಿಯಾಗಬೇಕು ಎಂದು ಬಯಸುತ್ತಿದ್ದಾರೆ ಎಂದು ಹೇಳಿದರು.

ಬಿಲ್ಕಿಸ್ ಬಾನೊ ಅವರ ಬಗ್ಗೆಯೂ ಪ್ರಸ್ತಾಪಿಸಿದ ಓವೈಸಿ, ಆಕೆ 20 ವರ್ಷಗಳಿಂದ ಹೋರಾಡುತ್ತಿದ್ದಳು, ಆದರೆ ಅವಳ ಹೆಸರು ಬಿಲ್ಕಿಸ್ ಬಾನೋ ಎಂಬ ಕಾರಣಕ್ಕೆ ನ್ಯಾಯವನ್ನು ನಿರಾಕರಿಸಲಾಗಿದೆ ಎಂದರು. 2002ರ ಗುಜರಾತ್ ಗಲಭೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮತ್ತು ತನ್ನ ಕುಟುಂಬದ ಏಳು ಸದಸ್ಯರನ್ನು ಕಳೆದುಕೊಂಡ ಬಿಲ್ಕಿಸ್ ಬಾನೊ ಅವರು 11 ಅಪರಾಧಿಗಳ ಶಿಕ್ಷೆಯನ್ನು ಕಡಿತದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಭಾರತ-ಚೀನಾ ಗಡಿ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಸರ್ಕಾರವು ಚೀನಾಕ್ಕೆ ಹೆದರುತ್ತಿದೆ. ಪ್ರಧಾನಿ ಚೀನಾದ ಹೆಸರನ್ನು ತೆಗೆದುಕೊಳ್ಳುತ್ತಾರೆಯೇ? 65 ಗಸ್ತು ಕೇಂದ್ರಗಳಲ್ಲಿ ಭಾರತವು 26 ಗಸ್ತು ಕೇಂದ್ರಗಳಲ್ಲಿ ಗಸ್ತು ತಿರುಗಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ, ನೀವು ಚೀನಾಕ್ಕೆ ಹೆದರುತ್ತಿದ್ದೀರಿ. ಡಿಸ್ ಎಂಗೇಜ್ಮೆಂಟ್ ಸಂಭವಿಸಿದೆ. ಡಿ-ಎಸ್ಕಲೇಶನ್ ಮತ್ತು ಡಿ-ಇಂಡಕ್ಷನ್ ಯಾವಾಗ ಸಂಭವಿಸುತ್ತದೆ? " ಎಂದು ಅವರು ಕೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+