ದೆಹಲಿ ಜನರಿಗೆ ಗುಡ್‌ನ್ಯೂಸ್‌ ಕೊಟ್ಟ ಮೋದಿ!

ದೆಹಲಿ ವಿಧಾನಸಭೆ ಚುನಾವಣೆ 2025ರಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು. ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಗೆ ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ದೆಹಲಿಯಲ್ಲಿ ಇನ್ಮುಂದೆ ಡಬಲ್ ಎಂಜಿನ್‌ ಸರ್ಕಾರ ಇರಲಿದೆ. ನಾವು ದೆಹಲಿ ಅಭಿವೃದ್ಧಿಗೆ ಹೊಸ ರೂಪಕೊಡಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅವರು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಶನಿವಾರ ಸಂಜೆ ವಿಜಯೋತ್ಸವ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ದೆಹಲಿ ಬಿಜೆಪಿಯ ಸಾವಿರಾರು ಜನ ಕಾರ್ಯಕರ್ತರು ಸೇರಿದ್ದರು. ದೆಹಲಿಯ ಮಧ್ಯಮ ವರ್ಗದವರು ಹಾಗೂ ಎಲ್ಲಾ ವರ್ಗದವರು ನಮಗೆ ಮತ ಹಾಕಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ದೆಹಲಿಯಲ್ಲಿ ಇನ್ಮುಂದೆ ಡಬಲ್ ಎಂಜಿನ್‌ ಸರ್ಕಾರ ಇರಲಿದೆ. ಪ್ರತಿ ವರ್ಗದವರು ನಮಗೆ ಮತ ನೀಡಿದ್ದಾರೆ. ಇದು ಅಭಿವೃದ್ಧಿ, ಮುನ್ನಣೆಗೆ ಸಿಕ್ಕಿರುವ ಗೆಲುವು. ದೆಹಲಿ ಮಹಿಳೆಯರು ಆಶೀರ್ವಾದ ಮಾಡಿದ್ದಾರೆ. ರಾಜಕೀಯದಲ್ಲಿ ಸುಳ್ಳಿಗೆ ಅವಕಾಶ ಇಲ್ಲ. ಇನ್ಮುಂದೆ ನಾವು ದೆಹಲಿಗೆ ಹೊಸ ರೂಪ ಕೊಡಲಿದ್ದೇವೆ. ಇದು ಅಭಿವೃದ್ಧಿ ಹಾಗೂ ವಿಕಾಸಕ್ಕೆ ಸಂದಿರುವ ಜಯ ಎಂದು ಅವರು ಹೇಳಿದ್ದಾರೆ. ನವದೆಹಲಿಯನ್ನು ಎಎಪಿ ಅವರು ಆಪತ್ತಿನಲ್ಲಿ ಸಿಲುಕಿಸುವ ಕೆಲಸವನ್ನು ಮಾಡಿದ್ದರು. ಅಬಕಾರಿ ನೀತಿ ಹಗರಣದ ಮೂಲಕ ದೆಹಲಿಗೆ ಕೆಟ್ಟ ಹೆಸರನ್ನು ತಂದಿದ್ದಾರೆ. ಅಬಕಾರಿ ಹಗರಣ ದೇಶದಲ್ಲೇ ದೆಹಲಿಗೆ ಕೆಟ್ಟ ಹೆಸರು ಬರುವುದಕ್ಕೆ ಕಾರಣವಾಯಿತು ಎಂದು ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.

Modi Gave Good News to People of Delhi

ಇನ್ಮುಂದೆ ದೆಹಲಿಯಲ್ಲಿ ಉತ್ತಮ ಆಡಳಿತ ನೀಡುತ್ತೇವೆ. ಇಲ್ಲಿ ಹೊಸ ಬದಲಾವಣೆ ತರುತ್ತೇವೆ ಎಂದು ಹೇಳುವ ಮೂಲಕ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ.

ಎಎಪಿ ಪಕ್ಷವನ್ನು ಶಾರ್ಟ್‌ ಕಟ್‌ ಎಂದ ಮೋದಿ: ಪ್ರಧಾನಿ ನರೇಂದ್ರ ಮೋದಿ ಅವರು ಆಮ್‌ ಆದ್ಮಿ ಪಾರ್ಟಿಯನ್ನು ಶಾರ್ಟ್‌ ಕಟ್‌ ಪಾರ್ಟಿ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಶಾರ್ಟ್‌ ಕಟ್‌ ರಾಜಕೀಯಕ್ಕೆ ಜನ ಶಾರ್ಟ್‌ ಸರ್ಕ್ಯೂಟ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಎಎಪಿ ಪಕ್ಷವು ಅತ್ಯಂತ ಕಡಿಮೆ ಅವಧಿಯಲ್ಲಿ ದೇಶದಲ್ಲಿ ಮನ್ನಣೆಯನ್ನು ಗಳಿಸಿತ್ತು. ಈ ಪಕ್ಷವನ್ನು ದೇಶದ ಸ್ಟಾರ್ಟ್‌ ಅಪ್‌ ಪಾರ್ಟಿ ಎಂದೇ ಕರೆಯಲಾಗುತ್ತದೆ. ಯಾಕೆಂದರೆ ಮೊದಲು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಪಕ್ಷವು ನಂತರ ಪಂಜಾಬ್‌ನಲ್ಲಿ ಗೆಲುವು ಸಾಧಿಸಿತ್ತು. ಪ್ರಾದೇಶಿಕ ಪಕ್ಷದಿಂದ ರಾಷ್ಟ್ರೀಯ ಪಕ್ಷವಾಗಿ ಬೆಳೆದಿತ್ತು. ಆದರೆ, ಈ ಪಕ್ಷ ಶಾರ್ಟ್‌ ಕಟ್‌ನಲ್ಲಿ ಬಂದ ಪಕ್ಷ ಅಂತ ಮೋದಿ ಅವರು ಪರೋಕ್ಷವಾಗಿ ಜರಿದಿದ್ದಾರೆ.

ಇನ್ನು ದೆಹಲಿಯಲ್ಲಿ 27 ವರ್ಷಗಳ ನಂತರ ನಮಗೆ ಆಡಳಿತ ಸಿಕ್ಕಿದೆ. ನಾವು ದೆಹಲಿಗೆ ಈ ಬಾರಿ ಹೊಸ ರೂಪವನ್ನೇ ಕೊಡಲಿದ್ದೇವೆ. ಇಲ್ಲಿ ಡಬಲ್‌ ಎಂಜಿನ್‌ ಇರಲಿದೆ. ಎಎಪಿಯು ಅಧಿಕಾರಕ್ಕಾಗಿ ನೆರೆಯ ಹರಿಯಾಣ ರಾಜ್ಯದವರ ಮೇಲೆ ಗಂಭೀರ ಆರೋಪ ಮಾಡಿತ್ತು. ಯುಮುನೆ ಹೆಸರಿನಲ್ಲಿ ರಾಜಕೀಯ ನಡೆಯಿತು. ಯುಮುನೆ ಹೆಸರಿನಲ್ಲಿ ರಾಜಕೀಯಕ್ಕೆ ಬಂದವರು ಅದೇ ವಿಚಾರದಲ್ಲಿ ಇದೀಗ ಅಧಿಕಾರ ಕಳೆದುಕೊಂಡಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿಯನ್ನು ಟೀಕಿಸಿದ್ದಾರೆ. ಅಲ್ಲದೆ ಈ ರೀತಿ ಕೆಟ್ಟ ರಾಜಕೀಯ ಮಾಡಿದವರಿಗೆ ಜನ ಪಾಠ ಕಲಿಸಿದ್ದಾರೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+