ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಶಾಸಕರೇ, ಸಂಸದರೇ ನಿಮ್ಮ ಬ್ಯಾಂಕ್ ವಿವರ ಅಮಿತ್ ಶಾಗೆ ನೀಡಿ'

ಬಿಜೆಪಿಯ ಎಲ್ಲಾ ಜನಪ್ರತಿನಿಧಿಗಳಿಗೆ(ಶಾಸಕ, ಸಂಸದ..ಇತ್ಯಾದಿ) ನವೆಂಬರ್ 8ರಿಂದ ಡಿಸೆಂಬರ್ 31ರ ತನಕದ ಬ್ಯಾಂಕ್ ವ್ಯವಹಾರದ ವಿವರಗಳನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

By Mahesh
|
Google Oneindia Kannada News

ನವದೆಹಲಿ, ನವೆಂಬರ್ 29: ಪ್ರಧಾನಿ ನರೇಂದ್ರ ಮೋದಿ ಅವರು 500 ಹಾಗೂ 1000 ರೂಪಾಯಿ ನೋಟುಗಳ ಬಳಕೆ ನಿಷೇಧಿಸುವ ಮೂಲಕ ಕಪ್ಪು ಹಣ ತಡೆಗಟ್ಟಲು ಕ್ರಮ ಕೈಗೊಂಡಿದ್ದೇನೋ ಸರಿ. ಆದರೆ, ಚುನಾವಣೆಗಳಲ್ಲಿ ಯಥೇಚ್ಛವಾಗಿ ಕಪ್ಪು ಹಣ ಬಳಕೆಯಾಗುತ್ತದೆ, ಜನಪ್ರತಿನಿಧಿಗಳೇ ಬಳಸುತ್ತಾರೆ ಎಂಬ ಮಾತಿಗೆ ಮೋದಿ ಮಂಗಳವಾರ ತಕ್ಕ ಉತ್ತರ ನೀಡಿದ್ದಾರೆ.

ಬಿಜೆಪಿಯ ಎಲ್ಲಾ ಜನಪ್ರತಿನಿಧಿಗಳಿಗೆ(ಶಾಸಕ, ಸಂಸದ..ಇತ್ಯಾದಿ) ನವೆಂಬರ್ 8ರಿಂದ ಡಿಸೆಂಬರ್ 31ರ ತನಕದ ಬ್ಯಾಂಕ್ ವ್ಯವಹಾರದ ವಿವರಗಳನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. 'ನುಡಿದಂತೆ ನಡೆಯಬೇಕು' ಹೀಗಾಗಿ ಬಿಜೆಪಿಯ ಜನಪ್ರತಿನಿಧಿಗಳ ಬ್ಯಾಂಕ್ ಬ್ಯಾಲೆನ್ಸ್ ವಿವರಗಳನ್ನು ಪ್ರಕಟಿಸಲು ಮೋದಿ ಬಯಸಿದ್ದಾರೆ ಎಂದು ತಿಳಿದು ಬಂದಿದೆ.[ಕಪ್ಪುಹಣ ಘೋಷಿಸಿದಲ್ಲಿ ಶೇ50ರಷ್ಟು ಇಲ್ಲದಿದ್ದರೆ ಶೇ85ರಷ್ಟು ತೆರಿಗೆ]

Modi to BJP lawmakers Submit your Nov. 8 to Dec. 31 bank transaction details

ಸದನದಲ್ಲಿ ಮೋದಿ ಮಾತನಾಡುತ್ತಾರೆ: ಅಪನಗದೀಕರಣದ ಬಗ್ಗೆ ಸೂಕ್ತ ಸಮಯದಲ್ಲಿ ಮೋದಿ ಅವರು ಉಭಯ ಸದನಗಳಲ್ಲೂ ಮಾತನಾಡಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಅವರು ಹೇಳಿದ್ದಾರೆ.

ಸೋಮವಾರ ಘೋಷಣೆಯಾದ ಸ್ವಯಂಪ್ರೇರಿತ ಕಪ್ಪುಹಣ ಅಥವಾ ಅಘೋಷಿತ ಆಸ್ತಿ ಘೋಷಣೆಯ ಮೂಲಕ ಸಿಗುವ ತೆರಿಗೆ ಹಣವನ್ನು ಬಡವರ ಕಲ್ಯಾಣ ಯೋಜನೆಗಳಿಗೆ ಬಳಸಲಾಗುವುದು ಎಂದು ಅನಂತಕುಮಾರ್ ಹೇಳಿದರು.

English summary
Prime Minister Narendra Modi on Tuesday asked BJP MPs and MLAs to declare their bank transactions between November 8 and December 31 to party president Amit Shah. The decision to demonetise Rs. 500 and Rs. 1,000 notes was announced by him on November 8
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X