ಕುಮಾರಸ್ವಾಮಿ ಸೇರಿದಂತೆ ಮೋದಿ ಸಂಪುಟದಲ್ಲಿ ಹೊಸ ಮುಖಗಳು; ಮಂತ್ರಿಭಾಗ್ಯ ಪಡೆದ ಹೊಸಬರ ಲಿಸ್ಟ್ ಇಲ್ಲಿದೆ

ನವದೆಹಲಿ, ಜೂನ್‌ 10: ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಜವಾಹರಲಾಲ್ ನೆಹರು ಅವರ ದಾಖಲೆಯನ್ನ ಬ್ರೇಕ್‌ ಮಾಡಿದ್ದಾರೆ. ಭಾನುವಾರ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಪದಗ್ರಹಣ ಸಮಾರಂಭದಲ್ಲಿ ಸಂಜೆ ಸರಿಯಾಗಿ 7.15ಕ್ಕೆ ಈಶ್ವರನ ಹೆಸರಲ್ಲಿ ನರೇಂದ್ರ ದಾಮೋದರ್‌ ದಾಸ್‌ ಮೋದಿ ಪ್ರಮಾಣ ವಚನ ಸ್ವೀಕರಿಸಿದರು.

ನರೇಂದ್ರ ಮೋದಿ ಅವರ ನಂತರ ಹಿರಿಯ ನಾಯಕರಾದ ಅಮಿತ್ ಶಾ, ಜೆಪಿ ನಡ್ಡಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಮತ್ತು ಎಸ್ ಜೈಶಂಕರ್ ಕೂಡ ಎನ್‌ಡಿಎ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನೂ ಮೋದಿ ಸಂಪುಟದಲ್ಲಿ ಹಲವು ಹಿರಿಯಯರ ಜೊತೆಗೆ ಹೊಸಬರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಹಲವಾರು ಹೊಸ ಮುಖಗಳನ್ನು ಈ ಬಾರಿ ಮೋದಿ ಕ್ಯಾಬಿನೆಟ್ 3.0ಗೆ ಅವಕಾಶವನ್ನ ನೀಡಲಾಗಿದೆ.

Modi 3 0 With 72 Ministers Takes Oath 9 New Faces In Cabinet

ಮೋದಿ ಕ್ಯಾಬಿನೆಟ್‌ ನಲ್ಲಿ ಸ್ಥಾನ ಪಡೆದ ಹೊಸ ಮುಖಗಳು

ಕರ್ನಾಟಕದಲ್ಲಿ ಬಿಜೆಪಿ ಜೊತೆಗೆ ಮೈತ್ರಿಯಾಗಿರುವ ಜೆಡಿಎಸ್‌ ಈ ಬಾರಿ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಕೂಡ ಇದೇ ಮೊದಲ ಬಾರಿಗೆ ಕೇಂದ್ರ ಸಂಪುಟ ಸೇರಿದ್ದಾರೆ. ಇವರಂತೆ ಅನೇಕ ಹೊಸ ಮುಖಗಳು ಮೋದಿ ಸಂಪುಟದಲ್ಲಿ ಕಾಣಿಸಿಕೊಂಡಿವೆ. ಅಲ್ಲದೇ ಮಾಜಿ ಸಚಿವ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿರುವ ವಿ ಸೋಮಣ್ಣ ಅವರು ಸಹ ಈ ಬಾರಿ ಮೋದಿ ಕ್ಯಾಬಿನೆಟ್‌ ನಲ್ಲಿ ಸ್ಥಾನವನ್ನ ಗಿಟ್ಟಿಸಿಕೊಂಡಿದ್ದಾರೆ.

ಇನ್ನೂ ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಮೋದಿ ಅವರ ಕ್ಯಾಬಿನೆಟ್‌ ನಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ವರ್ಷದ ಮಾರ್ಚ್‌ನಲ್ಲಿ, ವಿಧಾನಸಭೆ ಹೊಸ್ತಿಲಲ್ಲಿ ಖಟ್ಟರ್ ಅವರ ಸಿಎಂ ಸ್ಥಾನಕ್ಕೆ ನಯಾಬ್ ಸಿಂಗ್ ಸೈನಿ ಅವರನ್ನು ಪಕ್ಷ ನೇಮಿಸಿತು. ನಂತರ ಲೋಕಸಭೆ ಚುನಾವಣೆಯಲ್ಲಿ ಕರ್ನಾಲ್ ಕ್ಷೇತ್ರದಿಂದ ಕಣಕ್ಕಿಳಿದ ಖಟ್ಟರ್ ಅವರು ಗೆಲುವು ಸಾಧಿಸಿದರು. ಜಯಂತ್ ಚೌಧರಿ ನೇತೃತ್ವದ ಆರ್‌ಎಲ್‌ಡಿ ಉತ್ತರ ಪ್ರದೇಶದಲ್ಲಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿದ್ದು, ಜಯಂತ್ ಚೌಧರಿಗೂ ಅವಕಾಶವನ್ನ ನೀಡಿಲಾಗಿದೆ.

69 ವರ್ಷದ ಲಾಲನ್ ಸಿಂಗ್ ಹೊಸ ಸರ್ಕಾರದಲ್ಲಿ ಕೇಂದ್ರ ಕ್ಯಾಬಿನೆಟ್ ಸಚಿವರಾಗಿ ಭಾನುವಾರ ಮೋದಿ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು. 4 ಅವಧಿಯ ಸಂಸದರು ಜೆಡಿಯುನ ಮಾಜಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಜಿತನ್ ರಾಮ್ ಮಂಜಿ ಅವರು ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಅವರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

36 ವರ್ಷದ ಮೋಹನ್ ನಾಯ್ಡು ಕಿಂಜಾರಪು (ಟಿಡಿಪಿ) ಸಂಪುಟದಲ್ಲಿನ ಅತ್ಯಂತ ಕಿರಿಯ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಶ್ರೀಕಾಕುಳಂ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿದ್ದಾರೆ, ಜೊತೆಗೆ ಟಿಡಿಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ಮೋದಿ ಸಂಪುಟ ಸೇರಿದ ಹೊಸಬರಲ್ಲಿ ಇವರು ಒಬ್ಬರಾಗಿದ್ದಾರೆ.

ಇನ್ನೂ ಲೋಕಜನ ಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಎನ್‌ಡಿಎ ಸರ್ಕಾರದ ಮೂರನೇ ಅವಧಿಯಲ್ಲಿ ಸಂಪುಟದ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಂಡಿ ಸಂಜಯ್ ಕುಮಾರ್ ಮೋದಿ ಸಂಪುಟ ಸೇರಿದ್ದಾರೆ. ಇನ್ನೂ ಮೊದಲ ಬಾರಿಗೆ ಸಂಸದರಾಗಿರುವ ಮಲ್ಹೋತ್ರಾ ಅವರು ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+