MLA slapped Voter: ವೋಟ್ ಹಾಕೋಕೆ ಬಂದ ಮತದಾರ ಎಂಎಲ್‌ಎಗೆ ಗೂಸಾ ಕೊಟ್ಟಿದ್ದೇಕೆ? ಮುಂದೇನಾಯ್ತು?
ಲೋಕಸಭೆ ಚುನಾವಣೆ 2024ರ ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶದ 175 ಸ್ಥಾನಗಳಿಗೆ ಮತದಾನ (ಮೇ 13) ನಡೆಯಿತು. ಈ ವೇಳೆ ಶಾಸಕ ಹಾಗೂ ಮತದಾರನ ನಡುವೆ ಮಾರಾಮರಿ ನಡೆದಿದೆ. ಅದು ಕೂಡ ಮತದಾನ ಕೇಂದ್ರದಲ್ಲಿ ಇಬ್ಬರು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಸಮಾಜಕ್ಕೆ ಮಾದರಿಯಾಗಿರಬೇಕಾಗಿದ್ದ ಜನನಾಯಕನ ಇಂಥಹ ವರ್ತನೆಗೆ ಎಲ್ಲಡೆ ಆಕ್ರೊಶ ವ್ಯಕ್ತವಾಗಿದೆ. ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್‌ಸಿಪಿ ಶಾಸಕ ಎ ಶಿವಕುಮಾರ್ ಅವರು ಮತದಾನ ಕೇಂದ್ರದಲ್ಲಿ ಮತದಾರನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಪಕ್ಷದ ಶಾಸಕ ಎ ಶಿವಕುಮಾರ್ ಮತದಾರನಿಗೆ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯವಿದೆ. ಮತದಾರನು ಕೂಡ ಶಾಸಕರ ವಿರುದ್ಧ ಪ್ರತಿದಾಳಿ ನಡೆಸಿ ಥಳಿಸಿದ್ದಾನೆ. ವಿಡಿಯೊದಲ್ಲಿ ಶಿವಕುಮಾರ್ ಹಾಗೂ ಮತದಾರ ಇಬ್ಬರೂ ಪರಸ್ಪರ ಹಲ್ಲೆ ಮಾಡುತ್ತಿರುವುದು ಕಂಡು ಬರುತ್ತದೆ.
VVIP arrogance & goondagardi on full display
— Shehzad Jai Hind (Modi Ka Parivar) (@Shehzad_Ind) May 13, 2024
YSRCP MLA A Sivakumar slaps voter in Andhra Pradesh's Guntur
Telangana Congress neta kicks voter
Congress’ Randeep Surjewala once said Janta is Rakshas !
If this is how they are treating voters at the polling booth imagine what… pic.twitter.com/w3RU0TLlL1
ಶಾಸಕ ಎ ಶಿವಕುಮಾರ್ ಸಿಟ್ಟಿನಿಂದ ಮತದಾರನತ್ತ ಸಾಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮತದಾರ ಶಿವಕುಮಾರ್‌ಗೆ ಕಪಾಳಮೋಕ್ಷ ಮಾಡುವ ಮೂಲಕ ಪ್ರತಿದಾಳಿ ಮಾಡುವುದಿದೆ. ಇದಾದ ಬಳಿಕ ಶಾಸಕರ ಬೆಂಬಲಿಗರು ಮತದಾರನಿಗೆ ಥಳಿಸಿದ್ದಾರೆ.
ಬಿಜೆಪಿ ಮುಖಂಡ ಶೆಹಜಾದ್ ಪೂನಾವಾಲಾ ವಾಗ್ದಾಳಿ
ಈ ವಿಡಿಯೋವನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ವಕ್ತಾರ ಶೆಹಜಾದ್ ಪೂನಾವಾಲಾ ಕೂಡ ಹಂಚಿಕೊಂಡಿದ್ದಾರೆ. ಶೆಹಜಾದ್ ಪೂನಾವಾಲಾ ಅವರು ಶಾಸಕರ ವರ್ತನೆಯನ್ನು ಅಹಂಕಾರ ಮತ್ತು ಗೂಂಡಾಗಿರಿ ಎಂದು ಕರೆದಿದ್ದಾರೆ.
VIDEO| Lok Sabha Elections 2024: YSRCP leader VS Shivakumar engaged in a slapping battle with a voter at a polling booth of Andhra Pradesh's Guntur. #LSPolls2024WithPTI #LokSabhaElections2024
— Press Trust of India (@PTI_News) May 13, 2024
(Full video available on PTI Videos - https://t.co/n147TvqRQz) pic.twitter.com/SB9gqgmsGp
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ಶೆಹಜಾದ್ ಪೂನಾವಾಲಾ, "ವಿವಿಐಪಿ ದುರಹಂಕಾರ ಮತ್ತು ಗೂಂಡಾಗಿರಿ ಎದ್ದು ಕಾಣುತ್ತಿದೆ. ಆಂಧ್ರಪ್ರದೇಶದ ಗುಂಟೂರಿನಲ್ಲಿ ವೈಎಸ್‌ಆರ್‌ಸಿಪಿ ಶಾಸಕ ಎ ಶಿವಕುಮಾರ್ ಮತದಾರರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಮತಗಟ್ಟೆಯಲ್ಲಿ ಮತದಾರರೊಂದಿಗೆ ಈ ರೀತಿ ವರ್ತಿಸುತ್ತಿದ್ದರೆ, ಚುನಾವಣೆಯ ನಂತರ ಅವರು ಏನು ಮಾಡುತ್ತಾರೆ ಎಂದು ಯೋಚಿಸಿ. ಈ ಪಕ್ಷಗಳನ್ನು ಮತ್ತು ನಾಯಕರನ್ನು ಹೊರಹಾಕುವ ಸಮಯ ಬಂದಿದೆ!'' ಎಮದು ಬರೆದಿದ್ದಾರೆ.












Click it and Unblock the Notifications