
Breaking; ಡಿಎಂಕೆ ಅಧ್ಯಕ್ಷರಾಗಿ ಎಂ. ಕೆ. ಸ್ಟಾಲಿನ್ ಮತ್ತೆ ಆಯ್ಕೆ
ಚೆನ್ನೈ, ಅಕ್ಟೋಬರ್ 09; ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧ್ಯಕ್ಷರಾಗಿ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವಿರೋಧವಾಗಿ ಆಯ್ಕೆಯಾದರು. ಎರಡನೇ ಬಾರಿಗೆ ಸ್ಟಾಲಿನ್ ಅಧ್ಯಕ್ಷರಾಗಿದ್ದಾರೆ.
ಭಾನುವಾರ ನಡೆದ ಡಿಎಂಕೆ ಪಕ್ಷದ ಸಾಮಾನ್ಯ ಸಭೆಯಲ್ಲಿ ಪಕ್ಷದ ಮುಖಂಡರು ಯಾವುದೇ ವಿರೋಧ ವ್ಯಕ್ತಪಡಿಸದೇ ಎಂ. ಕೆ. ಸ್ಟಾಲಿನ್ ಅವರನ್ನು ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆ ಮಾಡಲು ಒಪ್ಪಿಗೆ ಸೂಚಿಸಿದರು.
ಡಿಎಂಕೆ ಆಧ್ಯಾತ್ಮದ ವಿರುದ್ಧ ಅಲ್ಲ, ತಾರತಮ್ಯ ಮಾಡುವವರ ವಿರುದ್ಧ: ಸ್ಟಾಲಿನ್
ರಾಜ್ಯದ ನೀರಾವರಿ ಸಚಿವರಾದ ದೊರೈಮುರುಗನ್ ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆಗೊಂಡರು. ಮಾಜಿ ಕೇಂದ್ರ ಸಚಿವ ಟಿ. ಆರ್. ಬಾಲು ಖಜಾಂಚಿಯಾಗಿ ಆಯ್ಕೆಗೊಂಡರು.
ರಾಜಕೀಯ ತ್ಯಜಿಸಿದ ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಸುಬ್ಬುಲಕ್ಷ್ಮಿ ಜಗದೀಶನ್
ಡಿಎಂಕೆ ಪಕ್ಷದ ಸಾಮಾನ್ಯ ಸಭೆಗೆ ಹೊಸದಾಗಿ ಪದಾಧಿಕಾರಿಗಳನ್ನು ಕೆಲವು ದಿನಗಳ ಹಿಂದೆ ಆಯ್ಕೆ ಮಾಡಲಾಗಿತ್ತು. ಈ ಬಳಿಕ ನಡೆದ ಮೊದಲ ಸಭೆಯಲ್ಲಿ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.
Breaking; ಡಿಎಂಕೆ ಸಂಸದನ ಪುತ್ರ ಬಿಜೆಪಿ ಸೇರ್ಪಡೆ!
ಭಾನುವಾರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡುವ ಮೊದಲು ಎಂ. ಕೆ. ಸ್ಟಾಲಿನ್ ಮರೀನಾ ಬೀಚ್ ಸಮೀಪವಿರುವ ಎಂ. ಕರುಣಾನಿಧಿ ಅವರ ಸ್ಮಾರಕಗಳಿಗೆ ಭೇಟಿ ನೀಡಿ ನಮನ ಸಲ್ಲಿಸಿದರು.
ಎಂ. ಕರುಣಾನಿಧಿ ಅವರ ನಿಧನದ ನಂತರ 2018ರ ಆಗಸ್ಟ್ 28ರಂದು ಎಂ. ಕೆ. ಸ್ಟಾಲಿನ್ ಡಿಎಂಕೆ ಅಧ್ಯಕ್ಷರಾಗಿ ಆಯ್ಕೆಗೊಂಡರು. ಐದು ವರ್ಷಗಳ ಬಳಿಕ ಮತ್ತೆ ಚುನಾವಣೆ ನಡೆದಿದ್ದು, ಅವಿರೋಧವಾಗಿ ಸ್ಟಾಲಿನ್ ಪುನರಾಯ್ಕೆಗೊಂಡಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಡಿಎಂಕೆ ಅಧಿಕಾರಕ್ಕೆ ಬಂದಿತು. ತಮಿಳುನಾಡಿನ ಮುಖ್ಯಮಂತ್ರಿಯಾಗಿ ಎಂ. ಕೆ. ಸ್ಟಾಲಿನ್ ಪ್ರಮಾಣ ವಚನ ಸ್ವೀಕರಿಸಿದ್ದರು.
ಎಂ. ಕರುಣಾನಿಧಿ ಅವರ ಪುತ್ರರಾದ ಎಂ. ಕೆ. ಸ್ಟಾಲಿನ್ ಕರುಣಾನಿಧಿ ನಿಧನದ ಬಳಿಕ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. 2009ರಲ್ಲಿ ಸ್ಟಾಲಿನ್ ತಮಿಳುನಾಡು ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.
2006ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಾಗ ಗ್ರಾಮೀಣಾಭಿವೃದ್ಧಿ ಮತ್ತು ಸ್ಥಳೀಯ ಆಡಳಿತ ಖಾತೆ ಸಚಿವರಾಗಿದ್ದರು. ಚೆನ್ನೈ ಮೇಯರ್ ಆಗಿಯೂ ಸ್ಟಾಲಿನ ಕಾರ್ಯ ನಿರ್ವಹಣೆ ಮಾಡಿದ ಅನುಭವ ಹೊಂದಿದ್ದಾರೆ.