Get Updates
Get notified of breaking news, exclusive insights, and must-see stories!

ಮಿಜೋರಾಂನಲ್ಲಿ ಎರಡು ವಾರ ಕಠಿಣ ಲಾಕ್‌ಡೌನ್‌ ವಿಸ್ತರಣೆ

ಜೂನ್ 9: ದೇಶಾದ್ಯಂತ ಹೋಟೆಲ್, ರೆಸ್ಟೋರೆಂಟ್, ಧಾರ್ಮಿಕ ಸ್ಥಳಗಳು, ಅಂತರರಾಜ್ಯ ಸಂಚಾರ ಸೇರಿದಂತೆ ಹಲವು ಕ್ಷೇತ್ರಗಳು ಪುನಾರಂಭವಾಗಿದೆ. ಇಡೀ ದೇಶ ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ನಿಧಾನವಾಗಿ ಅನ್‌ಲಾಕ್‌ ಕಡೆ ಸಾಗುತ್ತಿದೆ.

Recommended Video

      Chiranjeevi Sarja : ಕನಕಪುರ ಬಳಿಯ ಬೃಂದಾವನ ಫಾರ್ಮ್ ಹೌಸ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ |

      ಆದರೆ, ಮಿಜೋರಾಂ ಸರ್ಕಾರ ಮಾತ್ರ ಇನ್ನೂ ಎರಡು ವಾರಗಳ ಕಾಲ ಕಟ್ಟುನಿಟ್ಟಾದ ಲಾಕ್‌ಡೌನ್‌ ಘೋಷಣೆ ಮಾಡಿದೆ. ಜೂನ್ 9 ರಿಂದ ರಾಜ್ಯದಲ್ಲಿ ಎರಡು ವಾರಗಳ ಲಾಕ್‌ಡೌನ್‌ ವಿಸ್ತರಣೆಯಾಗಲಿದ್ದು, ಸಂಪೂರ್ಣವಾಗಿ ಎಲ್ಲವೂ ಬಂದ್ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

      ಕೊರೊನಾ ಕೇಸ್‌ಗಳ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ರಾಜ್ಯದಲ್ಲಿ ಇನ್ನು ಎರಡು ಕಠಿಣ ಲಾಕ್‌ಡೌನ್ ಪಾಲನೆ ಮಾಡಲು ಮಿಜೋರಾಂ ಮುಖ್ಯಮಂತ್ರಿ ಜೋರಾಮ್‌ಥಂಗಾ ನಿರ್ಧರಿಸಿದ್ದಾರೆ. ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳು ಇಂದೇ ಪ್ರಕಟವಾಗುವ ಸಾಧ್ಯತೆ ಇದೆ.

      ಅದಕ್ಕೂ ಮುಂಚೆ ಮಿಜೋರಾಂ ಸಿಎಂ ಜೋರಾಮ್‌ಥಂಗಾ ಕ್ಯಾಬಿನೆಟ್ ಸಚಿವರು, ಆರೋಗ್ಯ ಮಂತ್ರಿ, ಚರ್ಚ್‌ಗಳು ಹಾಗೂ ಎನ್‌ಜಿಓಗಳೊಂದಿಗೆ ಸಭೆ ಸೇರಿ ಈ ಕುರಿತು ಚರ್ಚಿಸಿದ್ದರು.

      Mizoram Government Extend Total Lockdown To 2 More Weeks

      ಮಿಜೋರಾಂನಲ್ಲಿ ಇಂದು ಏಂಟು ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ರಾಜ್ಯದಲ್ಲಿ ಪ್ರಸ್ತುತ 42 ಜನರಿಗೆ ಕೊವಿಡ್ ತಗುಲಿದೆ. ಈ ಪೈಕಿ 41 ಪ್ರಕರಣಗಳು ರಾಜ್ಯದಲ್ಲಿ ಸಕ್ರಿಯವಾಗಿದ್ದು, ಒಬ್ಬ ವ್ಯಕ್ತಿ ಮಾತ್ರ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+