ಮಿಜೋರಾಂ : ಸಿಎಂಗೆ 2 ಕ್ಷೇತ್ರದಲ್ಲೂ ಸೋಲು, ಅಧಿಕಾರ 'ಕೈ' ತಪ್ಪಿತು
ನವದೆಹಲಿ, ಡಿಸೆಂಬರ್ 11 : ಮಿಜೋರಾಂ ಮುಖ್ಯಮಂತ್ರಿ ಲಾಲ್ ಥನಾವಾಲ ಅವರು ಎರಡು ಕ್ಷೇತ್ರಗಳಲ್ಲಿಯೂ ಸೋಲು ಕಂಡಿದ್ದಾರೆ. ಮಿಜೋರಾಂ ಚುನಾವಣೆಯಲ್ಲಿ ಸೋಲುವ ಮೂಲಕ ಕಾಂಗ್ರೆಸ್ ಈಶಾನ್ಯ ರಾಜ್ಯಗಳ ಕೊನೆ ಕೊಂಡಿಯನ್ನು ಕಳಚಿಕೊಂಡಿದೆ.
ಮಂಗಳವಾರ ಮಿಜೋರಾಂ ವಿಧಾನಸಭೆ ಚುನಾವಣೆ 2018ರ ಫಲಿತಾಂಶ ಪ್ರಕಟವಾಯಿತು. 40 ಸ್ಥಾನಗಳನ್ನು ಹೊಂದಿರುವ ವಿಧಾನಸಭೆಯಲ್ಲಿ ಎಂಎನ್‌ಎಫ್ 24, ಕಾಂಗ್ರೆಸ್ 6 ಮತ್ತು ಇತರ ಅಭ್ಯರ್ಥಿಗಳು 10 ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.
ಮಿಜೋರಾಂ ವಿಧಾನಸಭೆಯಲ್ಲಿ ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 21. ಎಂಎನ್‌ಎಫ್ 24 ಸ್ಥಾನಗಳಲ್ಲಿ ಜಯಗಳಿಸಿದ್ದು, ಸ್ಪಷ್ಟ ಬಹುಮತ ಪಡೆದು ಅಧಿಕಾರವನ್ನು ಹಿಡಿಯಲಿದೆ.

ಮಿಜೋರಾಂನ ಮುಖ್ಯಮಂತ್ರಿ ಲಾಲ್ ಥಾನಾವಾಲ ಅವರು ಎರಡು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಚಂಫೈ ದಕ್ಷಿಣ ಮತ್ತು ಸರ್ಚಿಪ್ ಕ್ಷೇತ್ರಗಳಲ್ಲಿ ಅವರು ಸೋಲುವ ಮೂಲಕ ಪಕ್ಷವೂ ಅಧಿಕಾರ ಕಳೆದುಕೊಂಡಿದೆ.
5 ಬಾರಿ ಮಿಜೋರಾಂ ಮುಖ್ಯಮಂತ್ರಿಯಾಗಿದ್ದ ಲಾಲ್ ಥಾನಾವಾಲ ಅವರಿಗೆ ಒಂದು ಸ್ಥಾನದಲ್ಲಿಯೂ ಗೆಲ್ಲಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಪಕ್ಷ ಸಹ ರಾಜ್ಯದಲ್ಲಿ ಅಧಿಕಾರವನ್ನು ಬಿಟ್ಟುಕೊಟ್ಟಿದೆ.












Click it and Unblock the Notifications