ರಾಜ್ಯಸಭಾ ಸ್ಥಾನಕ್ಕೆ ಮಿಥುನ್ ಚಕ್ರವರ್ತಿ ರಾಜೀನಾಮೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 26: ಹಿರಿಯ ನಟ, ಸಂಸದ ಮಿಥುನ್ ಚಕ್ರವರ್ತಿ ಅವರು ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿರುವುದಾಗಿ ಮಿಥುನ್ ಹೇಳಿದ್ದಾರೆ.

ಮಿಥುನ್ ಚಕ್ರವರ್ತಿಯವರನ್ನು ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯಸಭಾ ಸ್ಥಾನಕ್ಕೆ ನಾಮನಿರ್ದೇಶನ ಮಾಡಿತ್ತು. ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಮಿಥುನ್ ಅವರ ಹೆಸರು ಕೇಳಿ ಬಂದಿತ್ತು.

Mithun Chakraborty resigns from Rajya Sabha

ಜಾರಿ ನಿರ್ದೇಶನಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಥುನ್ ಅವರನ್ನು ವಿಚಾರಣೆ ನಡೆಸಲಾಗಿತ್ತು. ಶಾರದಾ ಕಂಪನಿಯಿಂದ ಪಡೆದ ಮೊತ್ತವನ್ನು ಹಿಂತಿರುಗಿಸುವುದಾಗಿ ಹೇಳಿದ್ದರು. ಜೂನ್ 16,2016ರಲ್ಲಿ ಮಿಥುನ್ 1.19 ಕೋಟಿ ಡ್ರಾಫ್ಟನ್ನು ಲಾಯರ್ ಮೂಲಕ ಇಡಿಗೆ ತಲುಪಿಸಿದ್ದರು.

ಜಾರಿ ನಿರ್ದೇಶನಾಲಯದಿಂದ ನೊಟೀಸ್ ಬಂದ ನಂತರ ಮಿಥುನ್ ಅವರು ಹೆಚ್ಚಾಗಿ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಅನಾರೋಗ್ಯದ ನಿಮಿತ್ತ ರಾಜೀನಾಮೆ ನೀಡಿದ್ದಾರೆ. ಅವರ ಆರೋಗ್ಯ ಸುಧಾರಣೆಗೆ ಪಕ್ಷದ ವತಿಯಿಂದ ಶುಭ ಕೋರುತ್ತೇವೆ ಎಂದು ಟಿಎಂಸಿ ಮುಖಂಡ ಡೆರಿಕ್ ಓಬ್ರಿಯಾನ್ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Actor turned politician Mithun Chakraborty on Monday resigned from Rajya Sabha citing poor health condition.He has submitted his resignation to Rajya Sabha Chairman, sources in TMC said.
Please Wait while comments are loading...