ಆರೋಪವನ್ನು ಹೊಗಳಿಕೆ ಎಂದು ರಾಹುಲ್‌ಗೆ ಹೇಳಿದ ಸಿಎಂ!

ಪುದುಚೇರಿ, ಫೆಬ್ರವರಿ 17; ಮಹಿಳೆ ಮಾಡಿದ ಆರೋಪವನ್ನು ಹೊಗಳಿಕೆ ಎಂದು ರಾಹುಲ್ ಗಾಂಧಿಗೆ ಭಾಷಾಂತರ ಮಾಡಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಪುದುಚೇರಿ ಮುಖ್ಯಮಂತ್ರಿಗಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಹುಲ್ ಗಾಂಧಿ ಎರಡು ದಿನಗಳ ಪುದುಚೇರಿ ಪ್ರವಾಸದಲ್ಲಿದ್ದಾರೆ. ಬುಧವಾರ ಅವರು ಮೀನುಗಾರರ ಜೊತೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಭಾಷಾಂತರ ಮಾಡುತ್ತಿದ್ದರು.

"ನಮಗೆ ಸಮುದ್ರವೇ ಎಲ್ಲಾ ಚಂಡಮಾರುತದ ಸಮಯದಲ್ಲಿ ನಮಗೆ ಯಾರೂ ಸಹ ಸಹಾಯ ಮಾಡಿಲ್ಲ. ಅವರು (ವಿ. ನಾರಾಯಣಸ್ವಾಮಿ) ಸಹ ಆಗ ಇಲ್ಲಿಗೆ ಭೇಟಿ ನೀಡಿಲ್ಲ" ಎಂದು ಮಹಿಳೆ ರಾಹುಲ್ ಗಾಂಧಿಗೆ ಹೇಳಿದರು.

 Mistranslating Puducherry CM Narayanasamy Landed In Controversy

ಆದರೆ, ಇದನ್ನು ಭಾಷಾಂತರ ಮಾಡುವಾಗ ವಿ. ನಾರಾಯಣ ಸ್ವಾಮಿ, "ಮಹಿಳೆ ನಮ್ಮನ್ನು ಹೊಗಳುತ್ತಿದ್ದಾಳೆ. ನಿವಾರ್ ಚಂಡಮಾರುತ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಿದ್ದೆ. ಅದಕ್ಕೆ ಧನ್ಯವಾದ ಹೇಳುತ್ತಿದ್ದೇಳೆ" ಎಂದು ಹೇಳಿದ್ದಾರೆ.

ಮಹಿಳೆ ಮಾತನಾಡಿರುವ, ನಾರಾಯಣ ಸ್ವಾಮಿ ಭಾಷಾಂತರ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಜೆಪಿ ನಾಯಕರು ಈ ವಿಡಿಯೋವನ್ನು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ನಾರಾಯಣ ಸ್ವಾಮಿ ಟೀಕಿಸಿದ್ದಾರೆ.

ಬಿಜೆಪಿ ಚುನಾವಣಾ ಉಸ್ತುವಾರಿ ಸಿ. ಟಿ. ರವಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮುಂತಾದ ನಾಯಕರು ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

ಬುಧವಾರ ರಾಹುಲ್ ಗಾಂಧಿ ಮೀನುಗಾರರ ಜೊತೆ ಸಂವಾದ ನಡೆಸಿದರು. ಬಳಿಕ ಮಹಿಳಾ ಕಾಲೇಜು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+