Breaking: ಚೆನ್ನೈನಲ್ಲಿ ಎಂಜಿಆರ್ ಪ್ರತಿಮೆಗೆ ಕೇಸರಿ ಸ್ಕಾರ್ಫ್ ಹಾಕಿದ ಕಿಡಿಗೇಡಿಗಳು
ಚೆನ್ನೈ ಡಿಸೆಂಬರ್ 20: ಚೆನ್ನೈನ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ಬಳಿ ಎಐಎಡಿಎಂಕೆಯ ಸಂಸ್ಥಾಪಕ ಎಂಜಿ ರಾಮಚಂದ್ರನ್ ಅವರ ಪ್ರತಿಮೆಗೆ ಕೇಸರಿ ಶಾಲು ಹಾಕಿರುವುದು ಕಂಡುಬಂದಿದೆ. ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಮೆಗೆ ಹಾಕಿದ್ದ ಶಾಲು ತೆಗೆದಿದ್ದಾರೆ.
ಈ ಪ್ರತಿಮೆಯನ್ನು 2001 ರಲ್ಲಿ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಉದ್ಘಾಟಿಸಿದರು. 2019 ರಲ್ಲಿ ಜಯಲಲಿತ ಅವರ ಮರಣದ ನಂತರ ಅವರ ಪ್ರತಿಮೆಯನ್ನು ಎಂಜಿಆರ್ ಅವರ ಪಕ್ಕದಲ್ಲಿ ಇರಿಸಲಾಯಿತು. ಹಲವಾರು ಅನುಯಾಯಿಗಳು ಎರಡು ಪ್ರತಿಮೆಗಳಿಗೆ ಗೌರವ ಸಲ್ಲಿಸುತ್ತಾರೆ. ಈಗ ಪ್ರತಿಮೆಗೆ ಶಾಲು ಹಾಕಿದ್ದು ಯಾರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಅಳವಡಿಸಿರುವ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಈ ಹಿಂದೆ ತಿರುವಳ್ಳುವರ್, ಅಣ್ಣಾ, ಪೆರಿಯಾರ್ ಮತ್ತು ಅಂಬೇಡ್ಕರ್ ಪ್ರತಿಮೆಗಳಿಗೆ ಕೇಸರಿ ಬಣ್ಣ ಬಳಿಯಲಾಗಿತ್ತು. ಇಂತಹ ಘಟನೆಗಳು ಮರುಕಳಿಸುತ್ತಿದ್ದು ಈ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಎಂದು ತಮಿಳುನಾಡಿನ ಪ್ರತಿಪಕ್ಷ ಎಐಎಡಿಎಂಕೆಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಕಳೆದ ತಿಂಗಳ ಹಿಂದೆ ಚೆನ್ನೈನ ತೇನಾಂಪೇಟೆಯಲ್ಲಿರುವ ಎಂಜಿ ರಾಮಚಂದ್ರನ್ ಅವರ ಪ್ರತಿಯನ್ನು ತಡರಾತ್ರಿ ಅಪರಿಚಿತರು ಧ್ವಂಸಗೊಳಿಸಿದ್ದರು.

ಎಂಜಿಆರ್ ಎಐಎಡಿಎಂಕೆ ಪಕ್ಷ ಸ್ಥಾಪಿಸಿದ ಭಾರತೀಯ ರಾಜಕಾರಣಿ, ನಟ ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದರು. ಅವರು 1977ರಿಂದ 1987ರವರೆಗೂ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಜೆ ಜಯಲಲಿತಾ ಅವರ ಮಾರ್ಗದರ್ಶಕರೂ ಆಗಿದ್ದರು.
ಇನ್ನೂ ಅಕ್ಟೋಬರ್‌ನಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಸಂಸ್ಥಾಪಕ ದಿವಂಗತ ಎಂಜಿ ರಾಮಚಂದ್ರನ್ ಅವರ ಪ್ರತಿಮೆಯನ್ನು ವಿರೂಪಗೊಳಿಸಿರೋ ಘಟನೆ ತಿಟ್ಟಕುಡಿ ಸಮೀಪದ ಗ್ರಾಮವೊಂದರಲ್ಲಿ ನಡೆದಿತ್ತು. ಪ್ರತಿಮೆಯ ಒಂದು ಎಡಗೈ ಮುರಿದ ಸ್ಥಿತಿಯಲ್ಲಿ ಕಂಡು ಬಂದಿತ್ತು.












Click it and Unblock the Notifications