Chhattisgarh: ಪ್ರಿಯಕರನ ಮೇಲಿನ ಕೋಪಕ್ಕೆ 80 ಅಡಿ ಎತ್ತರದ ಹೈಟೆನ್ಷನ್ ವಿದ್ಯುತ್ ಟವರ್ ಹತ್ತಿದ ಪ್ರೇಯಸಿ!
ಛತ್ತೀಸ್‌ಗಢದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ತನ್ನ ಪ್ರಿಯಕರನ ಮೇಲಿನ ಕೋಪದ ಭರದಲ್ಲಿ ಹುಡುಗಿಯೊಬ್ಬಳು 80 ಅಡಿ ಎತ್ತರದ ಹೈಟೆನ್ಷನ್ ವಿದ್ಯುತ್ ಟವರ್ ಅನ್ನು ಹತ್ತಿರುವುದು ಕಂಡು ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಛತ್ತೀಸ್‌ಗಢದ ಗೌರೆಲಾ ಪೇಂದ್ರ ಮಾರ್ವಾಹಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆಕೆಯ ಗೆಳೆಯ ಕೂಡ ಅವಳನ್ನು ಟವರ್ ಮೇಲಕ್ಕೆ ಹಿಂಬಾಲಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ನೋಡುಗರು ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.

ಇಂಡಿಯಾ ಟುಡೇ ವರದಿಯ ಪ್ರಕಾರ, ಕೆಲವು ಸ್ಥಳೀಯರು ಮೊದಲು ಗೋಪುರದ ಮೇಲಿರುವ ಇಬ್ಬರನ್ನು ಗಮನಿಸಿ ಪೆಂಡ್ರಾ ಪೊಲೀಸ್ ಠಾಣೆಗೆ ಎಚ್ಚರಿಕೆ ನೀಡಿದರು. ಘಟನೆಯ ಬಗ್ಗೆ ಯುವಕ ಮತ್ತು ಯುವತಿಯ ಕುಟುಂಬಗಳಿಗೂ ಮಾಹಿತಿ ನೀಡಲಾಗಿದೆ. ಪೊಲೀಸರು ಬರುವಷ್ಟರಲ್ಲಿ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಟವರ್ ಸುತ್ತಲೂ ಜಮಾಯಿಸಿದ್ದರು.
ದಂಪತಿಯೊಂದಿಗೆ ಗಂಟೆಗಳ ಮಾತುಕತೆಯ ನಂತರ, ಪೊಲೀಸ್ ಅಧಿಕಾರಿಗಳು ಅಂತಿಮವಾಗಿ ಅವರನ್ನು ಕೆಳಗಿಳಿಸಲು ಮನವೊಲಿಸುವಲ್ಲಿ ಯಶಸ್ವಿಯಾದರು. ಫೋನ್ ಕರೆಯಲ್ಲಿ ತನ್ನ ಗೆಳೆಯನೊಂದಿಗೆ ತೀವ್ರ ವಾಗ್ವಾದಕ್ಕಿಳಿದ ನಂತರ ಕೋಪಗೊಂಡ ಹುಡುಗಿ ವಿದ್ಯುತ್ ಟವರ್ ಅನ್ನು ಹತ್ತಿದ್ದಾಳೆ. ಅವಳನ್ನು ಕೆಳಗಿಳಿಸುವಂತೆ ಮನವೊಲಿಸುವ ಸಲುವಾಗಿ ಗೆಳೆಯನೂ ಅವಳನ್ನು ಹಿಂಬಾಲಿಸಿದ್ದಾನೆ.
ಘಟನೆಯಲ್ಲಿ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಂಪತಿಗಳ ವಿರುದ್ಧ ಯಾವುದೇ ಔಪಚಾರಿಕ ಪ್ರಕರಣ ದಾಖಲಾಗಿಲ್ಲ. ಆದಾಗ್ಯೂ ಭವಿಷ್ಯದಲ್ಲಿ ಇಂತಹ ಅನಿಯಂತ್ರಿತ ನಡವಳಿಕೆಯಲ್ಲಿ ತೊಡಗಿಕೊಳ್ಳದಂತೆ ಅವರಿಗೆ ಕಟ್ಟುನಿಟ್ಟಾಗಿ ಎಚ್ಚರಿಸಿದ್ದಾರೆ.
ಪೊಲೀಸರ ಗನ್ ಕದ್ದು ಮರವೇರಿದ ಕುಳಿತ ಕಳ್ಳ
ಕಳೆದ ಜುಲೈನಲ್ಲಿ ಕಳ್ಳನು ಪಿಎಸ್ ಐ ಗನ್ ಕಿತ್ತುಕೊಂಡು ಓಡಿ ಹೋಗಿ ಮರವೇರಿ ಕುಳಿತಿರುವ ಘಟನೆ ಕಲಬುರಗಿಯ ಅಫಜಲಪೂರದಲ್ಲಿ ನಡೆದಿತ್ತು. ಗನ್ ಕಿತ್ತುಕೊಂಡು ಹೋಗಿರುವ ವ್ಯಕ್ತಿಯನ್ನು ಖಾಜಪ್ಪ ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಬೆಂಗಳೂರು, ಕಲಬುರಗಿ, ಅಫಜಲಪೂರ ಸೇರಿ ವಿವಿಧೆಡೆ 20 ಕ್ಕೂ ಅಧಿಕ ಕಳ್ಳತನ ಪ್ರಕರಣಗಳಿವೆ.
ಅಫಜಲಪೂರ ಪೊಲಿಸ್ ಠಾಣೆ ಪಿಎಸ್ ಐ ಭೀಮರಾಯ್ ಬಂಕಲಿ ಎಂಬುವವರ ನಗ್ ಕಿತ್ತು ಪರಾರಿಯಾಗಿದ್ದನು. ಅಫಜಲಪೂರ ತಾಲ್ಲೂಕಿನ ಸೊನ್ನ ಬಳಿ ಬಂದಿಸಲು ಹೋದಾಗ ಈ ಘಟನೆ ನಡೆದಿತ್ತು. ಆರೋಪಿಯ ಕಾರಿನ ಗ್ಲಾಸ್ ಒಡೆದು ಬಂಧಿಸಲು ಯತ್ನಸುವಾಗ ಪಿಎಸ್ ಐ ಗನ್ ಕಿತ್ತುಕೊಂಡು ಪರಾರಿಯಾಗಿದ್ದನು. ಪುಲ್ ಲೋಡೆಡ್ ಗನ್ ಕಿತ್ತುಕೊಂಡು ಪರಾರಿಯಾಗಿದ್ದರಿಂದ ಸ್ಥಳದಲ್ಲಿ ಒಂದು ರೀತಿಯ ಆತಂಕ ಸೃಷ್ಟಿಯಾಗಿತ್ತು. ಕಳ್ಳನು ಮರದಿಂದ ಕೆಳಗೆ ಇಳಿದ ನಂತರ ತಕ್ಷಣ ವಶಕ್ಕೆ ತೆಗೆದುಕೊಂಡ ಪೋಲಿಸ್ ಸಿಬ್ಬಂದಿಯು ಆತನನ್ನು ಅಫಜಲಪುರ ಠಾಣೆಗೆ ಕರೆದೊಯ್ದಿದ್ದರು.












Click it and Unblock the Notifications