ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ಹಾಲಿನ ಬೆಲೆ ಏರಿಕೆ: ಮಾರಾಟದಲ್ಲಿ ಶೇ. 5ರಷ್ಟು ಕುಸಿತ

|
Google Oneindia Kannada News

ಚೆನ್ನೈ, ನವೆಂಬರ್‌ 21: ತಮಿಳುನಾಡಿನಲ್ಲಿ ಹಾಲಿನ ಬೆಲೆಯಲ್ಲಿನ ಹೆಚ್ಚಳದ ಪರಿಣಾಮದಿಂದ ಪ್ರೀಮಿಯಂ ಮತ್ತು ಟೀ ಮೇಟ್ (ಕೆಂಪು) ಹಾಲಿನ ಪ್ಯಾಕೇಟ್‌ಗಳ ದೈನಂದಿನ ಮಾರಾಟವು 5% ರಷ್ಟು ಕುಸಿತ ಕಂಡಿದೆ.

ತಮಿಳುನಾಡಿನ ಹಾಲಿನ ಬ್ರ್ಯಾಂಡ್‌ ಆದ ಆವಿನ್‌ ಮೂರು ವಾರಗಳ ಹಿಂದೆ ಈ ಎರಡು ಬ್ರಾಂಡ್‌ಗಳ ಪ್ಯಾಕೇಟ್‌ಗಳ ಬೆಲೆಯನ್ನು ಪ್ರತಿ ಲೀಟರ್‌ಗೆ ಕ್ರಮವಾಗಿ 12 ಮತ್ತು 11 ರೂಪಾಯಿಯಷ್ಟು ಹೆಚ್ಚಿಸಿತ್ತು. ಇದರಿಂದ ಕಡಿಮೆ ಸಂಖ್ಯೆಯ ಜನರು ಮಾತ್ರ ಆವಿನ್‌ನ ಪ್ರಮಾಣಿತ (ಗ್ರೀನ್ ಮ್ಯಾಜಿಕ್) ಹಾಲನ್ನು ಖರೀದಿಸಲು ಪ್ರಾರಂಭಿಸಿದ್ದರು. ಅಲ್ಲದೆ ಹೆಚ್ಚಿನ ಆವಿನ್‌ ಹಾಲು ಖರೀದಿ ಮಾಡುವ ಗ್ರಾಹಕರು ಎಮ್ಮೆ ಹಾಲು ಖರೀದಿಸಲು ಮುಂದಾದರು.

ಕೆಎಂಎಫ್ ಹಾಲಿನ ದರ ಪರಿಷ್ಕರಣೆ: 3 ರೂ. ದರ ಹೆಚ್ಚಳ ಬೇಡ ಎಂದ ಸಿಎಂ ಬೊಮ್ಮಾಯಿಕೆಎಂಎಫ್ ಹಾಲಿನ ದರ ಪರಿಷ್ಕರಣೆ: 3 ರೂ. ದರ ಹೆಚ್ಚಳ ಬೇಡ ಎಂದ ಸಿಎಂ ಬೊಮ್ಮಾಯಿ

ತಮಿಳುನಾಡಿನಲ್ಲಿ ಹಾಲಿನ ಬೆಲೆ ಹೆಚ್ಚಳ ಮಾಡಿರುವುದರಿಂದ ಬಿಜೆಪಿ ಹಾಗೂ ಇತರ ಪಕ್ಷಗಳು ಪ್ರತಿಭಟನೆ ನಡೆಸಿವೆ. ''ಬೆಲೆ ಏರಿಕೆ ನೇರವಾಗಿ ಬಡವರ ಹೊಟ್ಟೆ ಮೇಲೆ ಹೊಡೆದ ಹೊಡೆತವಾಗಿದೆ. ಇದರಿಂದ ಜನಸಾಮಾನ್ಯ ಜೇಬಿಗೆ ಕತ್ತರಿ ಬೀಳಲಿದೆ. ಹಾಗಾಗಿ ಏರಿಸಿದ ಬೆಲೆಯನ್ನು ಹಿಂಪಡೆಯಬೇಕು'' ಎಂದು ವಿಪಕ್ಷಗಳು ಆಗ್ರಹಿಸಿವೆ.

Milk price hike in Tamil Nadu: Sales decline by 5 percent

ತಮಿಳುನಾಡಿನ ಮಧುರೈನಂತಹ ದಕ್ಷಿಣದ ಜಿಲ್ಲೆಗಲ್ಲಿ ಜನರು ಖಾಸಗಿ ಮಾರಾಟಗಾರರಿಂದ ಹಾಲನ್ನು ಖರೀದಿಸಲು ಪ್ರಾರಂಭಿಸಿದ್ದಾರೆ. ಇದು ಮಾರಾಟಗಾರರಿಗೆ ಹೆಚ್ಚಿನ ಲಾಭಾಂಶವನ್ನು ನೀಡುತ್ತದೆ. ಚಿಲ್ಲರೆ ವ್ಯಾಪಾರಿಗಳಿಗೆ ವಿತರಿಸಲಾದ ಪ್ರತಿ ಲೀಟರ್ ಹಾಲಿಗೆ ಹೋಲಿಸಿದರೆ ಆವಿನ್ ವಿತರಕರು ಸಾಮಾನ್ಯವಾಗಿ 2 ಮತ್ತು 3 ರೂಪಾಯಿಗಳ ಲಾಭ ಪಡೆಯುತ್ತಾರೆ.

ಹಾಲಿನ ಬೆಲೆ ಲೀಟರ್‌ಗೆ 2 ರೂಪಾಯಿ ಏರಿಸಿದ ಮದರ್ ಡೈರಿಹಾಲಿನ ಬೆಲೆ ಲೀಟರ್‌ಗೆ 2 ರೂಪಾಯಿ ಏರಿಸಿದ ಮದರ್ ಡೈರಿ

''ಖಾಸಗಿ ಡೈರಿಗಳು ತಮ್ಮ ವಿತರಕರಿಗೆ ಪ್ರತಿ ಲೀಟರ್‌ಗೆ 6.50 ರೂಪಾಯಿವರೆಗೆ ಪಾವತಿಸುತ್ತವೆ. ಮಧುರೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಸ್ತುತ ಆವಿನ್ ಹಾಲಿನ ಬೆಲೆ ಏರಿಕೆ ಕಾರಣದಿಂದ ಟೀ ಅಂಗಡಿಗಳು ತಮ್ಮ ಬೆಲೆಯನ್ನು ಪ್ರತಿ ಕಪ್‌ಗೆ 2 ರೂಪಾಯಿಯಷ್ಟು ಹೆಚ್ಚಿಸುವಂತೆ ಒತ್ತಾಯಿಸಲಾಗಿದೆ'' ಎಂದು ತಮಿಳುನಾಡು ಹಾಲು ವಿತರಕರ ಕಲ್ಯಾಣ ಸಂಘದ ಎಸ್ ಎ ಪೊನ್ನುಸಾಮಿ ಹೇಳಿದ್ದಾರೆ.

Milk price hike in Tamil Nadu: Sales decline by 5 percent

ಹಾಲಿನ ಬೆಲೆ ಹೆಚ್ಚಾದರೂ ಚೆನ್ನೈನಲ್ಲಿ ಟೀ ಬೆಲೆ ಬದಲಾಗಿಲ್ಲ. ಏಕೆಂದರೆ ಅಂಗಡಿಗಳು ಆಂಧ್ರಪ್ರದೇಶದ ಖಾಸಗಿ ಡೈರಿಗಳಿಂದ ಹಾಲಿನ ಸರಬರಾಜು ಮಾಡುವ ಎಮ್ಮೆ ಹಾಲನ್ನು ಬಳಸುವುದನ್ನು ಮುಂದುವರೆಸುತ್ತಿವೆ. ತಮಿಳುನಾಡು ಹಾಲು ಮತ್ತು ಡೈರಿ ಅಭಿವೃದ್ಧಿ ಸಚಿವ ಎಸ್ ಎಂ ನಾಸರ್ ಅವರು ಟೀ ಅಂಗಡಿಗಳು ಮಾತ್ರವಲ್ಲದೆ ರೆಸ್ಟೋರೆಂಟ್‌ಗಳು, ಮದುವೆಗಳು ಮತ್ತು ಅಡುಗೆ ಕಂಪನಿಗಳು ಹಾಗೂ ಹೋಟೆಲ್‌ಗಳಲ್ಲಿಯೂ ಸಹ ಬೃಹತ್ ಹಾಗೂ ಚಿಲ್ಲರೆ ಆರ್ಡರ್‌ಗಳನ್ನು ನೀಡುವ ಮೂಲಕ ವಾಣಿಜ್ಯ ಹಾಲಿನ ಪ್ಯಾಕೆಟ್‌ಗಳ ಮಾರಾಟವನ್ನು ಹೆಚ್ಚಿಸಲು ಈಗಿನಿಂದಲೇ ಕ್ರಮವಹಿಸುವಂತೆ ಆವಿನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಆವಿನ್‌ನ ವ್ಯವಸ್ಥಾಪಕ ನಿರ್ದೇಶಕ ಸುಬ್ಬಯ್ಯ ಮಾತನಾಡಿ, ಐಸ್‌ಕ್ರೀಂ, ಮೊಸರು, ಮಜ್ಜಿಗೆ ಮತ್ತು ಲಸ್ಸಿಗಳನ್ನು ಉತ್ಪಾದಿಸುವ ಉತ್ಪಾದನಾ ಸೌಲಭ್ಯಗಳನ್ನು ರಾಜ್ಯಾದ್ಯಂತ ಸುಧಾರಿಸಲಾಗುತ್ತಿದೆ. ಪ್ರಸಕ್ತ ಹಿಂಗಾರು ಹಂಗಾಮಿನಲ್ಲೂ ದಿನಕ್ಕೆ ಸುಮಾರು 36 ಲಕ್ಷ ಲೀಟರ್ ಹಾಲು ಮಾರಾಟ ಮಾಡುವಲ್ಲಿ ಆವಿನ್ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.

English summary
Daily sales of premium and tea mate (red) milk packets declined by 5% due to increase in milk prices in Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X