ನವದೆಹಲಿ ಮತ್ತು ಸುತ್ತಮುತ್ತಲು ಕಂಪಿಸಿದ ಭೂಮಿ
ನವದೆಹಲಿ, ಮೇ 28; ನವದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 5.2ರ ತೀವ್ರತೆ ದಾಖಲಾಗಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಗಳು ಬಂದಿಲ್ಲ.
ಭಾನುವಾರ ಬೆಳಗ್ಗೆ 11.23ರ ಸುಮಾರಿಗೆ ನವದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿ ಕಂಪಿಸಿದೆ. ಫೈಜಾಬಾದ್, ಅಫ್ಘಾನಿಸ್ಥಾನದಲ್ಲೂ ಲಘು ಭೂಕಂಪನದ ಅನುಭವವಾಗಿದೆ. ಮೊದಲು ಭೂಮಿ ಅಫ್ಘಾನಿಸ್ಥಾನದಲ್ಲಿಯೇ ಕಂಪಿಸಿದೆ.

ಪಂಜಾಬ್, ಹರ್ಯಾಣ ಮತ್ತು ಚಂಡೀಗಢ್‌ನ ಕೆಲವು ಪ್ರದೇಶಗಳಲ್ಲಿಯೂ ಕೆಲವು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ರಿಕ್ಟರ್ ಮಾಪಕದಲ್ಲಿ 5.2ರ ತೀವ್ರತೆ ದಾಖಲಾಗಿದೆ ಎಂದು ಹೇಳಿದೆ. ಅಫ್ಘಾನಿಸ್ಥಾನದ ಸಮೀಪ ಭೂ ಕಂಪದ ಕೇಂದ್ರ ಬಿಂದುವಿದೆ.
ಭಾನುವಾರ ಬೆಳಗ್ಗೆ ಮೊದಲು ಅಫ್ಘಾನಿಸ್ತಾನದಲ್ಲಿ ಬೆಳಗ್ಗೆ 10.19ರ ಸುಮಾರಿಗೆ 5.9 ತೀವ್ರತೆಯ ಭೂಕಂಪ ಸಂಭವಿಸಿದೆ. ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ 4.9 ತೀವ್ರತೆಯ ಕಂಪನವಾಗಿದೆ. ನಂತರ 11.23ರ ಸುಮಾರಿಗೆ ನವದೆಹಲಿ, ಎನ್ಸಿಆರ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭೂಮಿ ಕಂಪಿಸಿದೆ.
ಇದೇ ಸಮಯದಲ್ಲಿ ಪಂಜಾಬ್, ಹರ್ಯಾಣ, ಚಂಡೀಗಢ್‌ನ ಕೆಲವು ಭಾಗಗಳಲ್ಲೂ ಭೂಮಿ ಕಂಪಿಸಿದೆ. ಈ ಎಲ್ಲಾ ಭೂಕಂಪದ ಕೇಂದ್ರ ಬಿಂದು ಅಫ್ಘಾನಿಸ್ತಾನದ ತಜಿಖಿಸ್ತಾನದ ಗಡಿಯಲ್ಲಿದೆ ಎಂಬ ಮಾಹಿತಿ ಸಿಕ್ಕಿದೆ.
ಅಫ್ಘಾನಿಸ್ಥಾನದಲ್ಲಿ ಉಂಟಾದ ಕಂಪನದ ಪರಿಣಾಮವೇ ಭಾರತದ ಕೆಲವು ರಾಜ್ಯಗಳ ಮೇಲೆ ಆಗಿದೆ. ದೇಶದಲ್ಲಿ ಯಾವುದೇ ಕಂಪನದ ಕೇಂದ್ರ ಬಿಂದು ಕಂಡುಬಂದಿಲ್ಲ. ಆದರೆ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಯಾವುದೇ ಹಾನಿ ಉಂಟಾಗಿಲ್ಲ.
ಪಾಕಿಸ್ತಾನದಲ್ಲಿ ಭಾನುವಾರ ಬೆಳಗ್ಗೆ 6.0 ತೀವ್ರತೆಯ ಭೂಕಂಪ ಸಂಭವಿಸಿದೆ. ಕೆಲವು ಕಾಲ ಜನರು ಭಯಗೊಂಡು ಮನೆಯಿಂದ ಹೊರಗೆ ಬಂದಿದ್ದಾರೆ. ಬಳಿಕ ಅಫ್ಘಾನಿಸ್ಥಾನದಲ್ಲಿ ಕಂಪನ ಉಂಟಾಗಿದೆ. ಭೂಮಿಯ 223 ಕಿ. ಮೀ. ಆಳದಲ್ಲಿ ಈ ಕಂಪನದ ಕೇಂದ್ರ ಬಿಂದುವಿದೆ.












Click it and Unblock the Notifications