ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್: ಖಾಸಗಿ ವಾಹನ ಸವಾರರಿಗೆ ಕೇಂದ್ರದ ಮಾರ್ಗಸೂಚಿ

|
Google Oneindia Kannada News

ನವದೆಹಲಿ, ಏಪ್ರಿಲ್ 15: ದೇಶದ ಜನತೆಯನ್ನು ಕೊರೊನಾ ಚಿಂತೆ ಬಿಡದೇ ಕಾಡುತ್ತಿದೆ.ಸುಮಾರು 11 ಸಾವಿರ ಮಂದಿ ಕೊರೊನಾ ಸೋಂಕಿತರಿದ್ದಾರೆ. ಈ ಸೋಂಕು ಹೆಚ್ಚಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಗೃಹ ಸಚಿವಾಲಯ ವಾಹನ ಸವಾರರು ಹಾಗೂ ಸಾರ್ವಜನಿಕರ ಓಡಾಟಕ್ಕೆ ಕೆಲವು ಮಾರ್ಗಸೂಚಿಯನ್ನು ಪ್ರಕಟಿಸಿದೆ.ಮೇ 3ರವರೆಗೆ ದೇಶದಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದ್ದು, ಕೃಷಿ ,ಐಟಿ, ಇ-ಕಾಮರ್ಸ್, ಸರಕು ಸಾಗಾಣಿಕೆ ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಯಾವುದೇ ತುರ್ತು ಸಂದರ್ಭದಲ್ಲಿ ಮಾತ್ರ ಖಾಸಗಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ.ವೈದ್ಯಕೀಯ ಕಾರಣಗಳು ಹಾಗೂ ಅಗತ್ಯವಸ್ತುಗಳನ್ನು ಕೊಳ್ಳಲು ತೆರಳಿದವರಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.

MHA Guidelines For Movement Of A Persons During Lockdown

ಒಂದೊಮ್ಮೆ ಕಾರು ಇನ್ನಿತರೆ ನಾಲ್ಕು ಆಸನವುಳ್ಳ ವಾಹನಗಳಾಗಿದ್ದರೆ ಚಾಲಕನ ಪಕ್ಕದಲ್ಲಿ ಮತ್ತೊಬ್ಬರಿಗೆ ತೆರಳಲು ಅವಕಾಶವಿದೆ. ಆದರೆ ದ್ವಿಚಕ್ರ ವಾಹನಗಳಲ್ಲಿ ಒಬ್ಬರೇ ಓಡಾಡಬೇಕು.

ಒಂದೊಮ್ಮೆ ಯಾರಾದರೂ ಲಾಕ್‌ಡೌನ್ ಉಲ್ಲಂಘನೆ ಮಾಡಿದಲ್ಲಿ, 2005ರ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಅವರಿಗೆ ಶಿಕ್ಷೆ ವಿಧಿಸುವಂತೆ ತಿಳಿಸಲಾಗಿದೆ.

ಲಾಕ್‌ಡೌನ್ ಇದೆ, ಹೊರಗೆ ಹೋಗುವುದರಿಂದ ನಿಮಗೂ ಕೊರೊನಾ ಬರಬಹುದು, ನಿಮ್ಮಿಂದ ಬೇರೆಯವರಿಗೂ ಬರಬಹುದು ಎಂದು ಪೊಲೀಸರು ಮನವಿ ಮಾಡುತ್ತಿದ್ದಾರೆ.

ಆದರೆ ಕುಂಟು ನೆಪವೊಡ್ಡಿ ಜನರು ಓಡಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ಹಾಗಾಗಿ ಇನ್ನುಮುಂದೆ ಕೇಂದ್ರದ ಮಾರ್ಗಸೂಚಿ ಪಾಲಿಸದೆ ಬೇಕಾಬಿಟ್ಟಿ ತಿರುಗಾಡಿದರೆ ನಿಮ್ಮ ಮೇಲೆ ಕೇಸುಗಳು ಬೀಳುವುದಂತೂ ಸತ್ಯ.

English summary
The Ministry Of Home Affairs Guidelines For Movement Of A Persons During Lockdown. It says that the movement of persons is allowed in private vehicles for emergency services, which include medical and veterinary care.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X