Metro: ಹೆಚ್ಚುವರಿ 2 ಮಾರ್ಗಗಳಲ್ಲಿ ಚಾಲಕ ರಹಿತ ಮೆಟ್ರೋಗೆ ಸಿಗ್ನಲಿಂಗ್ ವ್ಯವಸ್ಥೆ
ಬೆಂಗಳೂರು, ಮೇ 25: ಪ್ರಸ್ತುತ ದಿನಗಳಲ್ಲಿ ಮಹಾನಗರಗಳಲ್ಲಿ ಮೆಟ್ರೋ ರೈಲು ಸಾರಿಗೆ ಭಾರೀ ಜನಮನ್ನಣೆಗೆ ಪಾತ್ರವಾಗುತ್ತಿದೆ. ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ವೇಗದ ಮತ್ತು ಸುರಕ್ಷತೆ ಸಾರಿಗೆ ಇದಾಗಿದ್ದರಿಂದ ಜನರು ಮೆಟ್ರೋ ರೈಲು ಏರಲು ಮನಸ್ಸು ಮಾಡುತ್ತಿದ್ದಾರೆ.
ಹಾಲಿ ಮೆಟ್ರೋ ರೈಲುಗಳ ಜೊತೆಗೆ ಎರಡು ಹೆಚ್ಚುವರಿ ಮಾರ್ಗಗಳಲ್ಲಿ ಚಾಲಕ ರಹಿತ ರೈಲು ಕಾರ್ಯಾಚರಣೆ ಸಾಧಿಸಲು ಮತ್ತು ಅದನ್ನು ನಿರ್ವಹಿಸಲು ಬೇಕಾದ ಅಗತ್ಯ ಅತ್ಯಾಧುನಿಕ ಸಿಗ್ನಲಿಂಗ್ ವ್ಯವಸ್ಥೆ ಸ್ಥಾಪಿಸಲಾಗುತ್ತಿದೆ. ಅದಕ್ಕಾಗಿ ಬರೋಬ್ಬರಿ 800 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಎರಡು ಹೆಚ್ಚುವರಿ ಮಾರ್ಗಗಳಲ್ಲಿ ಪಶ್ಚಿಮ ಬಂಗಾಳದ ಕೋಲ್ಕತ್ತಾ ಮಹಾನಗರದ ಮೆಟ್ರೋ ಸಂಸ್ಥೆ ಚಾಲಕ ರಹಿತ ರೈಲು ಓಡಿಸಲು ನಿರ್ಧರಿಸಿದೆ. ಅದರ ಪ್ರಗತಿಯಲ್ಲಿ ತೊಡಗಿರುವ ಈ ಸಂಸ್ಥೆ ಅಧಿಕಾರಿಗಳು, ಸುಧಾರಿತ ಸಿಗ್ನಲಿಂಗ್ ವ್ಯವಸ್ಥೆಯು ಸ್ಪೇನ್ ಮತ್ತು ಡೆನ್ಮಾರ್ಕ್‌ನಂತಹ ದೇಶಗಳಲ್ಲಿ ಬಳಕೆ ಆಗುತ್ತವೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲೂ ಡ್ರವೈರ್‌ಲೆಸ್ ಮೆಟ್ರೋ ಸಂಚಾರ
ಮೆಟ್ರೋ ಕ್ಷೇತ್ರದಲ್ಲಿ ವ್ಯಕ್ತಿಗತವಾಗಿ ಅಂದರೆ ಚಾಲಕರು ಇಲ್ಲದೇ ಮೆಟ್ರೋ ಲುಗಳು ಕಾರ್ಯ ನಿರ್ವಹಿಸಲಿವೆ. ಇದು ಈಗಾಗಲೇ ಬೇರೆ ಬೇರೆ ದೇಶಗಳಲ್ಲಿ ಆರಂಭವಾಗಿದೆ. ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ ವಾಣಿಜ್ಯ ಕಾರ್ಯಾಚರಣೆ ಆರಂಭವಾಗುವ ಬೊಮ್ಮಸಂದ್ರ-ಆರ್‌ವಿ ರಸ್ತೆ ಮಾರ್ಗದಲ್ಲಿ ಈ ಚಾಲಕ ರಹಿತ ರೈಲು ಕಾರ್ಯಾಚರಣೆ ನಡೆಸಲಿದೆ. ಅಗತ್ಯ ಸಿದ್ಧತೆಗಳು ಪ್ರಗತಿಯಲ್ಲಿವೆ.
ಕೋಲ್ಕತ್ತಾ ಮೆಟ್ರೋ ಜಾಲವು ಮುಂದಿನ ಐದು ವರ್ಷಗಳಲ್ಲಿ CBTC ವ್ಯವಸ್ಥೆಯ ATO (ಸ್ವಯಂಚಾಲಿತ ರೈಲು ಕಾರ್ಯಾಚರಣೆಗಳು) ವ್ಯವಸ್ಥೆಗೆ ಸಂಪೂರ್ಣವಾಗಿ ಒಳಪಡಲಿದೆ. ಈ ಎಟಿಒ ವ್ಯವಸ್ಥೆಯಲ್ಲಿ ಚಾಲಕರು ಬಾಗಿಲುಗಳನ್ನು ಮುಚ್ಚಲು ಮತ್ತು ರೈಲನ್ನು ಪ್ರಾರಂಭಿಸಲು ಗುಂಡಿಗಳನ್ನು ಒತ್ತುವುದಕ್ಕೆ ಸೀಮಿತವಾಗಿರುತ್ತಾರೆ.

ಯಾವ ಮಾರ್ಗದಲ್ಲಿಚಾಲಕ ರಹಿತ ತಂತ್ರಜ್ಞಾನ ಅಳವಡಿಕೆ?
ಕೊಲ್ಕತ್ತಾದ ಜೋಕಾ-ಎಸ್ಪ್ಲಾನೇಡ್ ಮತ್ತು ಕವಿ ಸುಭಾಷ್-ಬಿಮನ್ ಬಂದರ್ ಮೆಟ್ರೋ ಕಾರಿಡಾರ್‌ಗಳಲ್ಲಿ ಸಂವಹನ ಆಧಾರಿತ ರೈಲು ನಿಯಂತ್ರಣ (CBTC) ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇಂತದ್ದೊಂದು ಹೈಟೆಕ್ ವ್ಯವಸ್ಥೆ ಪೂರ್ವ-ಪಶ್ಚಿಮ ಮೆಟ್ರೋ ಕಾರಿಡಾರ್‌ನಲ್ಲಿ ಚಾಲ್ತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಾಲ್ಕು ದಶಗಳಷ್ಟು (40 ವರ್ಷ) ಹಳೆಯದಾದ ಕೊಲ್ಕತ್ತಾ ಮೆಟ್ರೋದ ಉತ್ತರ-ದಕ್ಷಿಣ (ದಕ್ಷಿಣೇಶ್ವರ-ಹೊಸ ಗರಿಯಾ) ಕಾರಿಡಾರ್ ಇದು ಭಾರತದ ಮೊದಲ ಮೆಟ್ರೋ ಮಾರ್ಗ ಎನ್ನಲಾಗಿದೆ. ಇಲ್ಲಿ CBTC ವ್ಯವಸ್ಥೆಯನ್ನು ಸ್ಥಾಪಿಸಲು ಯೋಜಿಸಿದ್ದು, ಇದಕ್ಕಾಗಿ ಮೆಟ್ರೋ ಸಂಸ್ಥೆ ಬರೋಬ್ಬರಿ 500 ಕೋಟಿ ರೂ. ಖರ್ಚು ಮಾಡಲಿದೆ. ಈ ಬಗ್ಗೆ ಮೆಟ್ರೋ ಸಂಸ್ಥೆ ಅಧಿಕೃತ ಮಾಹಿತಿ ಹೊರ ಹಾಕಿದೆ.
ಈ ಅತ್ಯಾಧುನಿಕ ಸಿಗ್ನಲಿಂಗ್ ವ್ಯವಸ್ಥೆಯು ಹೆಚ್ಚು ಸುರಕ್ಷಿತವಾಗಿದೆ.ಚಾಲಕ ರಹಿತ ಮೆಟ್ರೋ ರೈಲು ನಿಖರವಾಗಿ, ಸುವ್ಯವಸ್ಥಿತವಾಗಿ ಕಾರ್ಯನಿರ್ವಹಿಸಂತೆ ಈ ತಂತ್ರಜ್ಞಾನ ನೋಡಿಕೊಳ್ಳುತ್ತದೆ. ಭವಿಷ್ಯದ ರೈಲು ಕಾರ್ಯಾಚರಣೆಗಳಿಗೆ ಈ ವ್ಯವಸ್ಥೆ ಭರವಸೆ ಮೂಡಿಸಿದೆ ಎಂದು ಮೆಟ್ರೊ ಅಧಿಕಾರಿಗಳು ತಿಳಿಸಿದ್ದಾರೆ.











Click it and Unblock the Notifications