MeToo: ಸಾಜಿದ್ ಖಾನ್ ವಿರುದ್ಧ ಮತ್ತೊಂದು ದೂರು: ಬಿಗ್ ಬಾಸ್ 16 ಪ್ರಸಾರ ಸ್ಥಗಿತ?
ಮುಂಬೈ, ಅ. 19: ಹಿಂದಿ ಬಿಗ್ ಬಾಸ್ 16 ರ ಸ್ಪರ್ಧಿ ಸಾಜಿದ್ ಖಾನ್ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಪೊಲೀಸ್ ದೂರು ದಾಖಲಿಸಿದ್ದಾರೆ. ನಟಿ ಬುಧವಾರ ಪೊಲೀಸ್ ಠಾಣೆಯಿಂದ ಹೊರಬಂದು ಮಾಧ್ಯಮಗಳೊಂದಿಗೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪೊಲೀಸ್ ದೂರಿನ ಪ್ರತಿಯೂ ಶೆರ್ಲಿನ್ ಚೋಪ್ರಾ ಕೈಯಲ್ಲಿತ್ತು. ಬಿಗ್ ಬಾಸ್ 16 ರ ಪ್ರಸಾರವನ್ನು ನಿಲ್ಲಿಸುವಂತೆ ಒತ್ತಾಯಿಸಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆಯುವುದಾಗಿಯೂ ಅವರು ಬಹಿರಂಗಪಡಿಸಿದ್ದಾರೆ.
ನಾನು ಸಾಜಿದ್ ಖಾನ್ ವಿರುದ್ಧ ದೂರು ನೀಡಲು ಬಂದಿದ್ದೇನೆ ಎಂದು ನಟಿ ಹೇಳಿದ್ದಾರೆ. ನಾನು ಲೈಂಗಿಕ ಶೋಷಣೆ ವಿರುದ್ಧ ದೂರು ದಾಖಲಿಸಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ನನ್ನನ್ನು ಮತ್ತು ನಂತರ ಮೀ ಟೂ ಆರೋಪಿ ಸಾಜಿದ್ ಖಾನ್ ಅವರನ್ನು ಕೂಡ ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆಯಲಾಗುವುದು ಎಂದು ಶೆರ್ಲಿನ್ ಹೇಳಿದ್ದಾರೆ. ಮೀ ಟೂ ಆರೋಪ ಮಾಡಿರುವ ಸಾಜಿದ್ ಖಾನ್ ಅವರನ್ನು ಶೋದಿಂದ ಹೊರಹಾಕಬೇಕು ಎಂದು ಹಲವು ದಿನಗಳಿಂದ ಬಿಗ್ ಬಾಸ್ ಶೋಗೆ ಮನವಿ ಮಾಡುತ್ತಿದ್ದೇವೆ. ಆದರೂ ನಮ್ಮ ಮಾತುಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಶೆರ್ಲಿನ್ ಹೇಳಿಕೊಂಡಿದ್ದಾರೆ.
ನಾನು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಕಳುಹಿಸಿದ್ದೇನೆ ಎಂದು ನಟಿ ತಿಳಿಸಿದ್ದಾರೆ. ಬಿಗ್ ಬಾಸ್ 16 ರ ಪ್ರಸಾರವನ್ನು ರದ್ದುಗೊಳಿಸುವಂತೆ ನಾವು ಅವರಿಗೆ ಮನವಿ ಮಾಡಿದ್ದೇವೆ. ಶೋನಲ್ಲಿರುವ ಎಲ್ಲಾ ಮಹಿಳೆಯರ ಬಗ್ಗೆ ನಮಗೆ ಕಾಳಜಿ ಇದೆ. ಅವರ ಮೇಲೆ ಆರೋಪ ಇರುವವರೆಗೆ ಕಾರ್ಯಕ್ರಮದ ಪ್ರಸಾರವನ್ನು ರದ್ದುಗೊಳಿಸಬೇಕು. ಈ ವಿಡಿಯೋದಲ್ಲಿ ಶೆರ್ಲಿನ್ ಪೊಲೀಸ್ ದೂರಿನ ಪ್ರತಿಯನ್ನೂ ತೋರಿಸಿದ್ದಾರೆ. ಕಳೆದ ಹಲವು ದಿನಗಳಿಂದ ಸಾಜಿದ್ ಖಾನ್ ಅವರನ್ನು ಶೋದಿಂದ ಹೊರಗಿಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಬೇಡಿಕೆ ಇರುವುದು ಗೊತ್ತಿರುವ ವಿಚಾರ. ಮಿರ್ಜಾಪುರದ ನಟ ಅಲಿ ಫಜಲ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಸಾಜಿದ್ ಖಾನ್ ಅವರನ್ನು ಕಾರ್ಯಕ್ರಮದಿಂದ ಹೊರಹಾಕುವಂತೆ ಒತ್ತಾಯಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ನಿರಂತರ ಗದ್ದಲದ ನಂತರ, ಈಗ ಸಾಜಿದ್ ಖಾನ್ ಅವರನ್ನು ಹೊರಹಾಕಲು ಬಿಗ್ ಬಾಸ್ ತಯಾರಕರು ಮತ್ತು ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ಮೇಲೆ ಒತ್ತಡವಿದೆ. ಈ ಪರಿಸ್ಥಿತಿಯಲ್ಲಿ ಸಾಜಿದ್ ಖಾನ್ ಅವರನ್ನು ಕಾರ್ಯಕ್ರಮದಿಂದ ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಜಿದ್ ಖಾನ್ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ. 2018ರಲ್ಲಿ ಮೀಟೂ ಆಂದೋಲನದ ವೇಳೆ ಸಾಜಿದ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಲಾಗಿತ್ತು. ಆ ವೇಳೆ ಹಲವು ನಟಿಯರು ಈ ಬಗ್ಗೆ ಮೌನ ಮುರಿದು ಸಾಜಿದ್ ಖಾನ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಆರೋಪಗಳಿಂದಾಗಿ ಸಾಜಿದ್ ಖಾನ್ ಅವರನ್ನು ಬಿಗ್ ಬಾಸ್‌ನಿಂದ ಹೊರ ಹಾಕಬೇಕೆಂಬ ಬೇಡಿಕೆ ನಿರಂತರವಾಗಿ ಕೇಳಿ ಬರುತ್ತಿದೆ. ಇಂಥವರು ಶೋನಲ್ಲಿ ಇರುವುದು ಸರಿಯಲ್ಲ ಎನ್ನುತ್ತಾರೆ ಜನ.
ಇದರಿಂದ ದೂರು ದಾಖಲಿಸುವವರ ಸಂಖ್ಯೆ ಹೆಚ್ಚಾಗಿದ್ದು ಬಿಗ್ ಬಾಸ್ ಪ್ರಸಾರ ಸ್ಥಗಿತಗೊಳ್ಳುತ್ತಾ ಅಥವಾ ಸಾಜಿದ್ ಖಾನ್ ಅವರನ್ನು ಶೋದಿಂದ ತೆಗೆದು ಹಾಕಲಾಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.











Click it and Unblock the Notifications