• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಾ ನಿನಾ ಪರಿಣಾಮ ಈ ಬಾರಿ ದೇಶಾದ್ಯಂತ ಭಯಂಕರ ಚಳಿ ಸಾಧ್ಯತೆ

|

ನವದೆಹಲಿ, ಅಕ್ಟೋಬರ್ 15:ಭಾರಿ ಮಳೆಗೆ ಸಿಲುಕಿ ದೇಶದ ಜನರು ತತ್ತರಿಸಿರುವಾಗಲೇ, ಈ ವರ್ಷ ವಿಪರೀತವೆನಿಸುವಷ್ಟರ ಮಟ್ಟಿಗೆ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತೆಲಂಗಾಣ, ಆಂಧ್ರಪ್ರದೇಆ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಈ ಮಳೆಯು ಚಳಿಯನ್ನೂ ಕೂಡ ಹೊತ್ತು ತಂದಿದೆ.

ಪ್ರವಾಹದಂಥಾ ಮಳೆಗೆ ಸಿಲುಕಿ ತೆಲಂಗಾಣದಲ್ಲಿ 30 ಮಂದಿ ಸಾವು

ಕಳೆದ ಎರಡು ದಿನಗಳಿಂದ ಚಳಿಯೂ ಹೆಚ್ಚಾಗಿದೆ. ಈ ಬಾರಿ ಅಧಿಕ ಪ್ರಮಾಣದ ಚಳಿ ಇರುವ ಕಾರಣ ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಚಳಿಯಿಂದ ಅಧಿಕ ಸಾವು ಸಂಭವಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಈ ಬಾರಿ ಹೆಚ್ಚು ಚಳಿ ಕಂಡುಬರುವುದಕ್ಕೆ ಲಾ ನಿನಾ ಎಂಬ ಹವಾಮಾನ ವೈಪರಿತ್ಯ ಕಾರಣ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಾಮಾನ್ಯವಾಗಿ ಹವಾಮಾನದಲ್ಲಿ ಬದಲಾವಣೆಯಾದಾಗ ವಾತಾವರಣದಲ್ಲಿನ ತಾಪಮಾನ ಏರಿಕೆಯಾಗುತ್ತದೆ ಎಂಬ ಭಾವನೆ ಇದೆ. ಆದರೆ ವಾಸ್ತವದಲ್ಲಿ ಪ್ರತಿಕೂಲ ಹವಾಮಾನವನ್ನು ಎದುರಿಸಬೇಕಾಗುತ್ತದೆ.

ಕರ್ನಾಟಕದ 6 ಜಿಲ್ಲೆಗಳಿಗೆ ರೆಡ್ ಅಲರ್ಟ್: ಗಾಳಿ ಸಹಿತ ಧಾರಾಕಾರ ಮಳೆ

ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಇರುವ ಚಳಿಗಾಲದ ತೀವ್ರತೆ ಕುರಿತು ಮುನ್ಸೂಚನೆಯನ್ನು ಹವಾಮಾನ ಇಲಾಖೆ ಪ್ರತಿ ವರ್ಷ ನವೆಂಬರ್‌ನಲ್ಲಿ ಬಿಡುಗಡೆ ಮಾಡುತ್ತದೆ.

ಲಾ ನಿನಾ ಎಂದರೇನು? ಫೆಸಿಫಿಕ್ ಸಾಗರದ ಮೇಲ್ಮೈ ಬಿಸಿಯಾಗಿರುವುದನ್ನು ಎಲ್‌ ನಿನೋ ಎನ್ನಲಾಗುತ್ತದೆ. ಆದರೆ ಅದೇ ಸಾಗರದ ಮೇಲ್ಮೈ ತಣ್ಣಗಾದರೆ ಅದನ್ನು ಲಾನಿನಾ ಎಂದು ಕರೆಯಲಾಗುತ್ತದೆ. ಮುಂಗಾರು ಮಾರುತಗಳ ಮೇಲೆ ಇವರೆರಡೂ ಕೂಡ ಪರಿಣಾಮ ಬೀರುತ್ತದೆ.

English summary
Winter is likely to be colder this season due to the prevailing La Nina conditions, the India Meteorological Department (IMD) predicted on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X